ಇರಾನ್ ಯುದ್ಧ: ಹೊಸ ನಿರಾಶ್ರಿತರ ಬಿಕ್ಕಟ್ಟಿನ ಭೀತಿಯಲ್ಲಿ ನೆರೆರಾಷ್ಟ್ರಗಳು

ಅಮೇರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ನಡೆಸುತ್ತಿರುವ ಯುದ್ಧವು ಈಗಾಗಲೇ 1,400ಕ್ಕೂ ಹೆಚ್ಚು ಜನರನ್ನು ಬಲಿಪಡೆದಿದೆ. ಟೆಹ್ರಾನ್‌ನ ಪ್ರತಿದಾಳಿಗಳು ಕೊಲ್ಲಿ ರಾಷ್ಟ್ರಗಳು ಮತ್ತು ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡಿದ್ದು, ಜಾಗತಿಕ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ $100 ದಾಟುವಂತೆ ಮಾಡಿದೆ.

ಫೆಬ್ರವರಿ 28 ರಿಂದ ಆರಂಭವಾದ ಈ ಸಂಘರ್ಷ ಈಗ 18ನೇ ದಿನಕ್ಕೆ ಕಾಲಿಟ್ಟಿದ್ದು, ನೆರೆರಾಷ್ಟ್ರಗಳಲ್ಲಿ ನಿರಾಶ್ರಿತರ ಬಿಕ್ಕಟ್ಟಿನ (Refugee Crisis) ಆತಂಕ ಮನೆಮಾಡಿದೆ.

ಯುಎನ್ ನಿರಾಶ್ರಿತರ ಸಂಸ್ಥೆ (UNHCR) ಅಂದಾಜಿನ ಪ್ರಕಾರ, ಯುದ್ಧ ಆರಂಭವಾದಾಗಿನಿಂದ ಇರಾನ್‌ನಲ್ಲಿ ಈಗಾಗಲೇ 32 ಲಕ್ಷ (3.2 million) ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ.

ಇರಾನ್ ಏಳು ದೇಶಗಳೊಂದಿಗೆ ಗಡಿಯನ್ನು ಹಂಚಿಕೊಂಡಿದೆ ಅಫ್ಘಾನಿಸ್ತಾನ, ಅರ್ಮೇನಿಯಾ, ಅಜೆರ್ಬೈಜಾನ್, ಇರಾಕ್, ಪಾಕಿಸ್ತಾನ, ಟರ್ಕಿ ಮತ್ತು ತುರ್ಕಮೆನಿಸ್ತಾನ್. ಇವುಗಳಲ್ಲಿ ಇರಾಕ್ ಅತ್ಯಂತ ಉದ್ದವಾದ (1,600 ಕಿ.ಮೀ) ಗಡಿಯನ್ನು ಹೊಂದಿದೆ. ಈ ಎಲ್ಲಾ ದೇಶಗಳು ಆರ್ಥಿಕ ಮತ್ತು ಭದ್ರತಾ ಕಾರಣಗಳಿಂದಾಗಿ ಹೈ ಅಲರ್ಟ್‌ನಲ್ಲಿವೆ.

ಇರಾನ್‌ನ ರೆಡ್ ಕ್ರೆಸೆಂಟ್ ಸೊಸೈಟಿ ಪ್ರಕಾರ, 10,000ಕ್ಕೂ ಹೆಚ್ಚು ನಾಗರಿಕ ತಾಣಗಳು ಹಾನಿಗೊಳಗಾಗಿವೆ. ಇದರಲ್ಲಿ 65 ಶಾಲೆಗಳು ಮತ್ತು 32 ಆಸ್ಪತ್ರೆಗಳು ಸೇರಿವೆ. ಟೆಹ್ರಾನ್, ಶಿರಾಜ್ ಮತ್ತು ಇಸ್ಫಹಾನ್‌ನ ವಸತಿ ಪ್ರದೇಶಗಳ ಮೇಲೆ ದಾಳಿಗಳು ನಡೆದಿವೆ.

ಸದ್ಯಕ್ಕೆ ದಾಳಿಗಳು ಹೆಚ್ಚಾಗಿ ಇರಾನ್‌ನ ಪಶ್ಚಿಮ ಮತ್ತು ನೈಋತ್ಯ ಭಾಗಗಳಲ್ಲಿ ಕೇಂದ್ರೀಕೃತವಾಗಿರುವುದರಿಂದ, ಜನರು ತುರ್ಕಮೆನಿಸ್ತಾನ್, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿರುವ ಪ್ರಾಂತ್ಯಗಳತ್ತ ಧಾವಿಸುತ್ತಿದ್ದಾರೆ. ವೈಮಾನಿಕ ಮಾರ್ಗಗಳು ಮುಚ್ಚಲ್ಪಟ್ಟಿರುವುದರಿಂದ ವಾಣಿಜ್ಯ ವಿಮಾನ ಸಂಚಾರ ಸ್ಥಗಿತಗೊಂಡಿದೆ, ಇದು ಜನರು ದೇಶ ಬಿಟ್ಟು ಹೊರಹೋಗುವುದನ್ನು ಇನ್ನಷ್ಟು ಕಷ್ಟಕರವಾಗಿಸಿದೆ.

More articles

Latest article

Most read