ಕುವೈತ್‌ನಲ್ಲಿ ಹೆಜ್ಬುಲ್ಲಾ ಸಂಚು ಬಯಲು !

ಕುವೈತ್ /ಬೈರೂತ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗಲೇ, ನೆರೆರಾಷ್ಟ್ರ ಕುವೈತ್‌ನಲ್ಲಿ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇರಾನ್ ಬೆಂಬಲಿತ ಹೆಜ್ಬುಲ್ಲಾ ಸಂಘಟನೆಯ ಜಾಲವನ್ನು ಭದ್ರತಾ ಪಡೆಗಳು ಪತ್ತೆಹಚ್ಚಿವೆ. ಈ ಘಟನೆಯನ್ನು ಲೆಬನಾನ್ ವಿದೇಶಾಂಗ ಸಚಿವಾಲಯವು ಕಟುವಾಗಿ ಟೀಕಿಸಿದ್ದು, ಕುವೈತ್‌ನ ಭದ್ರತೆಗೆ ಧಕ್ಕೆ ತರುವ ಯಾವುದೇ ಪ್ರಯತ್ನವನ್ನು ತಾವು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕುವೈತ್ ಆಂತರಿಕ ಸಚಿವಾಲಯವು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಒಟ್ಟು 16 ಜನರನ್ನು ಬಂಧಿಸಲಾಗಿದೆ. ಇವರಲ್ಲಿ 14 ಜನರು ಕುವೈತ್ ಪ್ರಜೆಗಳಾಗಿದ್ದು, ಇಬ್ಬರು ಲೆಬನಾನ್ ಮೂಲದವರಾಗಿದ್ದಾರೆ. ಈ ಗುಂಪು ಹೆಜ್ಬುಲ್ಲಾ ಸಂಘಟನೆಯೊಂದಿಗೆ ನೇರ ಸಂಪರ್ಕ ಹೊಂದಿದ್ದು, ದೇಶದಲ್ಲಿ ಅಸ್ಥಿರತೆ ಉಂಟುಮಾಡಲು ಸಂಚು ರೂಪಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತರಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಆಧುನಿಕ ತಂತ್ರಜ್ಞಾನದ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಮುಖ್ಯವಾಗಿ ಗುಪ್ತಚರ ಮಾಹಿತಿ ಸಂಗ್ರಹಿಸಲು ಬಳಸುತ್ತಿದ್ದ ಕ್ಯಾಮೆರಾ ಡ್ರೋನ್‌ಗಳು ಮತ್ತು ರಹಸ್ಯ ಸಂವಹನಕ್ಕಾಗಿ ಬಳಸುವ ಮೋರ್ಸ್-ಕೋಡ್ (Morse-code) ಸಾಧನಗಳು ಸಿಕ್ಕಿಬಿದ್ದಿವೆ. ಈ ಗುಂಪು ಕೇವಲ ವಿಧ್ವಂಸಕ ಕೃತ್ಯಗಳಲ್ಲದೆ, ಸ್ಥಳೀಯ ಯುವಕರನ್ನು ಉಗ್ರ ಸಂಘಟನೆಗೆ ನೇಮಿಸಿಕೊಳ್ಳುವ ಕೆಲಸದಲ್ಲೂ ತೊಡಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಬೆಳವಣಿಗೆಯಿಂದ ಮುಜುಗರಕ್ಕೀಡಾಗಿರುವ ಲೆಬನಾನ್ ಸರ್ಕಾರವು ತಕ್ಷಣವೇ ಪ್ರತಿಕ್ರಿಯಿಸಿದ್ದು, “ಕುವೈತ್‌ನ ಸ್ಥಿರತೆ ಮತ್ತು ಭದ್ರತೆಯು ನಮಗೆ ಮುಖ್ಯವಾಗಿದೆ. ಇಂತಹ ಕೃತ್ಯಗಳು ಎರಡು ದೇಶಗಳ ನಡುವಿನ ಸಂಬಂಧಕ್ಕೆ ಧಕ್ಕೆ ತರುತ್ತವೆ” ಎಂದು ಹೇಳಿದೆ. ಇತ್ತೀಚಿನ ಯುದ್ಧದ ಹಿನ್ನೆಲೆಯಲ್ಲಿ ಇರಾನ್ ಬೆಂಬಲಿತ ಗುಂಪುಗಳು ಕೊಲ್ಲಿ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವುದು ಅರಬ್ ಜಗತ್ತಿನಲ್ಲಿ ಆತಂಕವನ್ನು ಹೆಚ್ಚಿಸಿದೆ.

More articles

Latest article

Most read