ಇರಾನ್‌ನಲ್ಲಿ ನಿಲ್ಲದ ಬಾಂಬ್ ಮಳೆ: ಕಚ್ಚಾ ತೈಲ ಕೇಂದ್ರಗಳ ಮೇಲೆ ಅಮೇರಿಕ ಕಣ್ಣು, ಇರಾನ್‌ನಿಂದ ಹೈದರ್ ಕ್ಷಿಪಣಿ ಎಚ್ಚರಿಕೆ!

ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಯುದ್ಧವು ದಿನದಿಂದ ದಿನಕ್ಕೆ ಭೀಕರ ಸ್ವರೂಪ ಪಡೆದುಕೊಳ್ಳುತ್ತಿದ್ದು, ನೀಲ್ಲುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಕಳೆದ 24 ಗಂಟೆಗಳಲ್ಲಿ ಇರಾನ್‌ನ ರಾಜಧಾನಿ ಟೆಹ್ರಾನ್ ಸೇರಿದಂತೆ ಕರಾಜ್, ಇಸ್ಫಹಾನ್ ಮತ್ತು ತಬ್ರಿಜ್‌ನಂತಹ ಪ್ರಮುಖ ನಗರಗಳ ಮೇಲೆ ನಿರಂತರ ವೈಮಾನಿಕ ದಾಳಿಗಳು ನಡೆದಿವೆ. ಟೆಹ್ರಾನ್ ನಗರದ ಆಕಾಶದಲ್ಲಿ ಈಗಲೂ ಕಪ್ಪು ಹೊಗೆಯ ದಟ್ಟ ಮೋಡಗಳು ಆವರಿಸಿದ್ದು, ಪರಿಸ್ಥಿತಿ ಅತ್ಯಂತ ಭಯಾನಕವಾಗಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ನ ಆರ್ಥಿಕ ಬೆನ್ನೆಲುಬಾದ ಖರ್ಗ್ ದ್ವೀಪದ ಸೇನಾ ನೆಲೆಗಳನ್ನು ಧ್ವಂಸಗೊಳಿಸಿರುವುದಾಗಿ ಖಚಿತಪಡಿಸಿದ್ದಾರೆ. ಇರಾನ್‌ನ ಬಹುತೇಕ ತೈಲ ರಫ್ತು ಇದೇ ದ್ವೀಪದ ಮೂಲಕ ನಡೆಯುವುದರಿಂದ, ಇಲ್ಲಿನ ತೈಲ ಕೇಂದ್ರಗಳ ಮೇಲೆ ದಾಳಿ ನಡೆದರೆ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರಿ ಏರಿಳಿತ ಉಂಟಾಗುವ ಭೀತಿ ಇದೆ. ಸದ್ಯಕ್ಕೆ ತೈಲ ಮೂಲಸೌಕರ್ಯಗಳಿಗೆ ಹಾನಿಯಾಗಿಲ್ಲ ಎಂದು ಎರಡೂ ಕಡೆಯವರು ಹೇಳುತ್ತಿದ್ದರೂ, ದ್ವೀಪದಲ್ಲಿ ಕನಿಷ್ಠ 15 ಭಾರಿ ಸ್ಫೋಟಗಳ ಶಬ್ದ ಕೇಳಿಬಂದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇತ್ತ ಇರಾನ್‌ನ ಕ್ರಾಂತಿಕಾರಿ ಪಡೆ (IRGC) ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ತೀವ್ರ ಪ್ರತಿರೋಧಕ್ಕೆ ಮುಂದಾಗಿದೆ. ತನ್ನ ಅತ್ಯಂತ ಸುಧಾರಿತ ‘ಹೈದರ್ಕ್ಷಿಪಣಿಗಳನ್ನು ಬಳಸಿ ಈ ಪ್ರಾಂತ್ಯದಲ್ಲಿರುವ ಅಮೆರಿಕದ ಸೇನಾ ನೆಲೆಗಳು ಮತ್ತು ಇಸ್ರೇಲ್‌ನ ಭೂಪ್ರದೇಶಗಳನ್ನು ಗುರಿಯಾಗಿಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ.

ಇರಾನ್ ಯುದ್ಧದಿಂದಾಗಿ ತೈಲ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ನೀಗಿಸಲು ಅಮೆರಿಕ ಮುಂದೆ ಬಂದಿದೆ. ಟೋಕಿಯೋದಲ್ಲಿ ನಡೆದ ಸಭೆಯಲ್ಲಿ ಅಮೆರಿಕದ ಕಾರ್ಯದರ್ಶಿ ಡೌಗ್ ಬರ್ಗಮ್ ಮಾತನಾಡಿ, “ಅಧ್ಯಕ್ಷ ಟ್ರಂಪ್ ಅವರ ಇಂಧನ ಪ್ರಾಬಲ್ಯ ನೀತಿಯ ಅಡಿಯಲ್ಲಿ ಏಷ್ಯಾ-ಪೆಸಿಫಿಕ್ ರಾಷ್ಟ್ರಗಳಿಗೆ ಅಮೆರಿಕವು ನಂಬಿಕಾರ್ಹ ಮತ್ತು ಸುರಕ್ಷಿತ ಇಂಧನ ಪೂರೈಸಲಿದೆ,” ಎಂದು ಭರವಸೆ ನೀಡಿದ್ದಾರೆ. ಇದು ಇಂಧನಕ್ಕಾಗಿ ಇರಾನ್ ಅಥವಾ ಚೀನಾದಂತಹ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ತಪ್ಪಿಸುವ ಉದ್ದೇಶ ಹೊಂದಿದೆ.

More articles

Latest article

Most read