ಕಮರ್ಷಿಯಲ್ ಸಿಲಿಂಡರ್ ಕಾಳಸಂತೆ ಮಾರಾಟ ಮಾಡಿದರೆ ಲೈಸೆನ್ಸ್ ರದ್ದು! ಡಿಸಿ ಖಡಕ್ ಸೂಚನೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ವಾಣಿಜ್ಯ ಸಿಲಿಂಡರ್‌ಗಳ ಅಭಾವದ ನಡುವೆ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಎನ್. ಅನುರಾಧ ಅವರು ಗ್ಯಾಸ್ ಏಜೆನ್ಸಿ ಮುಖ್ಯಸ್ಥರ ತುರ್ತು ಸಭೆ ನಡೆಸಿ ಖಡಕ್‌ ಆಗಿ ಎಚ್ಚರಿಕೆ ನೀಡಿದ್ದಾರೆ.

ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯವನ್ನು ಸರಿದೂಗಿಸಲು ಮತ್ತು ಎಲ್ಲರಿಗೂ ಅನಿಲ ಲಭ್ಯವಾಗುವಂತೆ ಮಾಡಲು, ಬುಕ್ಕಿಂಗ್ ಮಾಡಿದ ಪ್ರತಿಯೊಬ್ಬ ಗ್ರಾಹಕರಿಗೆ ಸದ್ಯಕ್ಕೆ ಕೇವಲ ಒಂದು ಸಿಲಿಂಡರ್ ಮಾತ್ರ ಕೊಡಬೇಕು  ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಕೆಲವು ಏಜೆನ್ಸಿಗಳು ತಾವೆ ಸುಳ್ಳು ಮಾಹಿತಿಯನ್ನು ಸೃಷ್ಟೀಸಿ  ಅಕ್ರಮವಾಗಿ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಸಿಲಿಂಡರ್ ಮಾರಾಟ ಮಾಡುತ್ತಿರುವ ದೂರುಗಳು ಬಂದಿವೆ. ಒಂದು ವೇಳೆ ನಿಗದಿತ ದರಕ್ಕಿಂತ ಹೆಚ್ಚು ಹಣ ವಸೂಲಿ ಮಾಡುವುದು ಕಂಡುಬಂದಲ್ಲಿ ಅಂತಹ ಏಜೆನ್ಸಿಗಳ ಮೇಲೆ ಕ್ರಿಮಿನಲ್ ಕೇಸ್‌ದಾಖಲಿಸುವುದಲ್ಲದೆ, ತಕ್ಷಣವೇ ಲೈಸೆನ್ಸ್ ರದ್ದುಪಡಿಸುವುದಾಗಿ ಡಿಸಿ ಎಚ್ಚರಿಸಿದ್ದಾರೆ.‌

ಅಕ್ರಮಗಳನ್ನು ಪತ್ತೆಹಚ್ಚಲು ಆಹಾರ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ ಗ್ಯಾಸ್ ಏಜೆನ್ಸಿಗಳು ಮತ್ತು ಗೋಡೌನ್‌ಗಳ ಮೇಲೆ ನಿರಂತರವಾಗಿ ದಾಳಿ ನಡೆಸಿ ತಪಾಸಣೆ ಮಾಡುವಂತೆ ಆದೇಶಿಸಿದ್ದಾರೆ.

ರಾಜ್ಯಾದ್ಯಂತ ಗ್ಯಾಸ್‌ ಸಿಲಿಂಡರ್‌ ಎಮರ್ಜೆನ್ಸಿ !

ಸಾರ್ವಜನಿಕರ ಆತಂಕವನ್ನು ಬಂಡವಾಳ ಮಾಡಿಕೊಂಡಿರುವ ಸೈಬರ್ ವಂಚಕರು ಹೊಸ ಮಾದರಿಯ ದರೋಡೆಗೆ ಇಳಿದಿದ್ದಾರೆ. ಗ್ಯಾಸ್ ಬುಕ್ಕಿಂಗ್ ಹೆಸರಲ್ಲಿ ಲಿಂಕ್‌ಗಳನ್ನು ಕಳುಹಿಸಿ ಜನರನ್ನು ಲೂಟಿ ಮಾಡುತ್ತಿರುವ ಪ್ರಕರಣಗಳು ಈಗ ಬೆಳಕಿಗೆ ಬಂದಿವೆ.

ಗ್ಯಾಸ್ ಸಿಲಿಂಡರ್ ಸಿಗದೆ ಪರದಾಡುತ್ತಿರುವ ಗ್ರಾಹಕರಿಗೆ ಹೆಸರಾಂತ ಗ್ಯಾಸ್ ಏಜೆನ್ಸಿಗಳ ಹೆಸರಿನಲ್ಲಿ ನಕಲಿ ಲಿಂಕ್‌ಗಳನ್ನು ಕಳುಹಿಸಲಾಗುತ್ತಿದೆ. “ತಕ್ಷಣ ಗ್ಯಾಸ್ ಬುಕ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ” ಎಂಬ ಸಂದೇಶದ ಮೂಲಕ ಗ್ರಾಹಕರನ್ನು ನಂಬಿಸಲಾಗುತ್ತಿದೆ. ಒಮ್ಮೆ ಗ್ರಾಹಕರು ಆ ಲಿಂಕ್ ಒತ್ತಿದರೆ, ಅವರ ಮೊಬೈಲ್ ಫೋನ್ ಹ್ಯಾಕ್ ಆಗುವ ಅಥವಾ ಬ್ಯಾಂಕ್ ಖಾತೆಯ ವಿವರಗಳು ವಂಚಕರ ಪಾಲಾಗುವ ಅಪಾಯವಿದೆ. ಬೆಂಗಳೂರಿನ ಹಲವು ಗ್ರಾಹಕರು ಈಗಾಗಲೇ ಇಂತಹ ಲಿಂಕ್‌ಗಳನ್ನು ಒತ್ತಿ ಹಣ ಕಳೆದುಕೊಂಡಿರುವುದು ವರದಿಯಾಗಿದೆ.

ನೀವು ಒಂದು ವೇಳೆ ಇಂತಹ ವಂಚನೆಗೆ ಒಳಗಾಗಿದ್ದರೆ ಅಥವಾ ಅನುಮಾನಾಸ್ಪದ ಕರೆಗಳು ಬಂದರೆ ತಕ್ಷಣವೇ 112 (ತುರ್ತು ಸಹಾಯವಾಣಿ) ಅಥವಾ 1930 ಸೈಬರ್ ಕ್ರೈಮ್ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ.

ಒಂದು ಕಡೆ ಗ್ಯಾಸ್ ಎಜೆನ್ಸಿಗಳು ಸಿಲಿಂಡರ್‌ಗಳನ್ನು ಮಾರಟ ಮಾಡುತ್ತಿದ್ದರೆ, ಇನ್ನೊಂದಡೆ ಗ್ಯಾಸ್‌ ಬುಕಿಂಗ್‌ ಹೆಸರಿನಲ್ಲಿ ಸೈಬರ್‌ ವಂಚನೆ ನಡೆಯುತ್ತಿದೆ. ಇದರೆ ಮಧ್ಯ ಬೆಂಗಳೂರಿನಲ್ಲಿ  ದೊಡ್ಡ ಹೋಟೆಲ್‌ಗಳು ಸಿಲಿಂಡರ್ ಗ್ಯಾಸ್ ಗಾಗಿ ಪರದಾಟ ಪಡುತ್ತಿದ್ದಾವೆ. ಮುಂದಿನ ಒಂದು ವಾರದವರೆಗೆ ಸಿಲಿಂಡರ್ ಅಭಾವ ಮುಂದುವರಿಯುವ ಭೀತಿ ಇರುವುದರಿಂದ ನಗರದ ಬಹುತೇಕ ಹೋಟೆಲ್‌ಗಳು ಬಾಗಿಲು ಹಾಕುತ್ತಿವೆ.

ವಾಣಿಜ್ಯ ಸಿಲಿಂಡರ್‌ಗಳ ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿರುವುದರಿಂದ ನಗರದ ಪ್ರಮುಖ ಹೋಟೆಲ್‌ಗಳು ಮತ್ತು ಕೆಫೆಗಳು ‘ನೋ ಸ್ಟಾಕ್’ ಬೋರ್ಡ್ ಹಾಕಿವೆ. ಗ್ರಾಹಕರು ಹಸಿವಿನಿಂದ ಹೋಟೆಲ್ ಕಡೆ ಹೋದರೆ ಬಾಗಿಲು ಮುಚ್ಚಿರುವುದು ಕಂಡುಬರುತ್ತಿದೆ.

ಗ್ಯಾಸ್ ಇಲ್ಲದ ಕಾರಣ ಕೆಲವೇ ಕೆಲವು ಹೋಟೆಲ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಅನಿವಾರ್ಯವಾಗಿ ಸೌದೆ ಬಳಸಿ ಅಡುಗೆ ಮಾಡುತ್ತಿವೆ. ಇದು ಅಡುಗೆಯ ವೇಗವನ್ನು ತಗ್ಗಿಸಿದ್ದು, ಕೇವಲ ಸೀಮಿತ ತಿಂಡಿ-ತಿನಿಸುಗಳು ಮಾತ್ರ ಲಭ್ಯವಾಗುತ್ತಿವೆ.

More articles

Latest article

Most read