ಐಪಿಎಲ್ 2026 : ಉದ್ಘಾಟನಾ ಪಂದ್ಯದಲ್ಲಿ ಆರ್‌ಸಿಬಿ ಮತ್ತು ಎಸ್ಆರ್‌ಎಚ್‌ ಮುಖಾಮುಖಿ

ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡವು ಐಪಿಎಲ್2026 ರ ಮೊದಲ ರಾತ್ರಿಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್(SRH) ತಂಡವನ್ನು ಎದುರಿಸಲಿದೆ.

ಈ ವರ್ಷದ ಮೊದಲ ಪಂದ್ಯವು ಮಾರ್ಚ್ 28 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಜೂನ್‌ನಲ್ಲಿ ಆರ್‌ಸಿಬಿ ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಪ್ರಾಣ ಕಳೆದುಕೊಂಡ ದುರಂತದ ನಂತರ ಉಂಟಾಗಿದ್ದ ಅನಿಶ್ಚಿತತೆಯ ನಡುವೆ, ಇತ್ತೀಚೆಗೆ ಕರ್ನಾಟಕ ಸರ್ಕಾರವು ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ಈ ಕ್ರೀಡಾಂಗಣಕ್ಕೆ ಅನುಮತಿ ನೀಡಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಪಂದ್ಯಗಳು ಕರ್ನಾಟಕ ಸರ್ಕಾರ ರಚಿಸಿರುವ ತಜ್ಞರ ಸಮಿತಿಯ ಅನುಮತಿಗೆ ಒಳಪಟ್ಟಿರುತ್ತವೆ. ಐಪಿಎಲ್ ಪ್ರಕಟಣೆಯ ಪ್ರಕಾರ, “ಈ ಸಮಿತಿಯು ಮಾರ್ಚ್ 13 ರಂದು ಕ್ರೀಡಾಂಗಣದ ಪರಿಶೀಲನೆ ನಡೆಸಲಿದೆ. ಈ ವೇಳೆ ಪಂದ್ಯದ ದಿನದ ಸಿದ್ಧತೆಗಳ ಬಗ್ಗೆ ಸಂಪೂರ್ಣ ತಯಾರಿ ನಡೆಸಿ, ಕ್ರೀಡಾಂಗಣದ ಸಿದ್ಧಪಡಿಸಿ ಮೌಲ್ಯಮಾಪನ ಮಾಡಲಾಗುವುದು.”

ಉದ್ಘಾಟನಾ ವಾರಾಂತ್ಯದ ಎರಡನೇ ಪಂದ್ಯವು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಇಂಡಿಯನ್ಸ್ (MI) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ನಡುವೆ ನಡೆಯಲಿದೆ. ಮೊದಲ ವಾರಾಂತ್ಯದಲ್ಲಿ ಡಬಲ್-ಹೆಡರ್ (ಒಂದೇ ದಿನ ಎರಡು ಪಂದ್ಯಗಳು) ಇರುವುದಿಲ್ಲ.

ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳಲ್ಲಿ ಚುನಾವಣೆಗಳು ನಡೆಯಲಿರುವ ಕಾರಣ, ಐಪಿಎಲ್ ವೇಳಾಪಟ್ಟಿಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಬುಧವಾರ ಪ್ರಕಟಿಸಲಾದ ಮೊದಲ ಹಂತದಲ್ಲಿ ಏಪ್ರಿಲ್ 12 ರವರೆಗೆ ಒಟ್ಟು 20 ಪಂದ್ಯಗಳು ನಡೆಯಲಿವೆ.

ಮೊದಲ ಹಂತದಲ್ಲಿ ಎಲ್ಲಾ ಹತ್ತು ತಂಡಗಳು ತಲಾ ನಾಲ್ಕು ಪಂದ್ಯಗಳನ್ನು ಆಡಲಿವೆ. ಸಾಮಾನ್ಯವಾಗಿ ಹತ್ತು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಿ ಪಂದ್ಯಗಳನ್ನು ನಡೆಸಲಾಗುತ್ತದೆ.

 ಆರ್‌ಸಿಬಿ ಮತ್ತು ಎಸ್‌ಆರ್‌ಎಚ್ ತಂಡಗಳು ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಎರಡನೇ ಬಾರಿ (ಮೊದಲು 2017 ರಲ್ಲಿ ಎದುರಾಗಿದ್ದವು). ಆರ್‌ಸಿಬಿಗೆ ಇದು 7ನೇ ಬಾರಿ ಉದ್ಘಾಟನಾ ಪಂದ್ಯವಾದರೆ, ಎಸ್‌ಆರ್‌ಎಚ್‌ಗೆ ಇದು 2ನೇ ಅವಕಾಶವಾಗಿದೆ.

ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಮೊದಲ ಹಂತದ ಮೂರು ಪಂದ್ಯಗಳನ್ನು ಗುವಾಹಟಿಯಲ್ಲಿ ಆಡಲಿದೆ. ಆರ್‌ಸಿಬಿ ತನ್ನ ಎರಡು ಪಂದ್ಯಗಳನ್ನು ರಾಯ್ಪುರದಲ್ಲಿ ಮತ್ತು ಪಂಜಾಬ್ ಕಿಂಗ್ಸ್ ಮೂರು ಪಂದ್ಯಗಳನ್ನು ಧರ್ಮಶಾಲಾದಲ್ಲಿ ಆಡಲಿವೆ.

More articles

Latest article

Most read