ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಕುಟುಂಬಗಳಿಗೆ ರೂ. 142.09 ಕೋಟಿ ಪರಿಹಾರ ವಿತರಣೆ

356 ಕುಟುಂಬಗಳಿಗೆ ಪುನರ್ವಸತಿ ಪ್ರಕ್ರಿಯೆ ಪೂರ್ಣ

ಬೆಂಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಮತ್ತು ಇತರ ಸಮುದಾಯದ ಕುಟುಂಬಗಳನ್ನು ಅವರ ಸ್ವಂತ ಇಚ್ಛೆಯ ಮೇರೆಗೆ (ಸ್ವಯಂಪ್ರೇರಿತವಾಗಿ) ಸ್ಥಳಾಂತರಿಸಿ, ಅವರಿಗೆ ಸೂಕ್ತ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ ಬಿ. ಖಂಡ್ರೆ ತಿಳಿಸಿದರು.

ವಿಧಾನ ಪರಿಷತ್ತಿನ ಕಲಾಪದ ವೇಳೆ ವಿಧಾನ ಪರಿಷತ್ತಿನ ಸದಸ್ಯರಾದ  ಶಾಂತರಾಮ್ ಬುಡ್ನಾ ಸಿದ್ಧಿ ಅವರು ನಿಯಮ 72ರ ಮೇರೆಗೆ ಮಂಡಿಸಿದ ಸೂಚನೆಗೆ ಉತ್ತರಿಸಿರುವ ಸಚಿವರು, ಈ ಪುನರ್ವಸತಿ ಯೋಜನೆಯನ್ನು ಸರ್ಕಾರದ ಆದೇಶ ಸಂಖ್ಯೆ: ಆರ್.ಡಿ 26 ಆರ್‍ಇಹೆಚ್ 2003 ಬೆಂಗಳೂರು ದಿನಾಂಕ: 18-04-2005 ರನ್ವಯ ಅನುಷ್ಠಾನ ಗೊಳಿಸಲಾಗುತ್ತಿದೆ. 2025-26ನೇ ಸಾಲಿನಲ್ಲಿ ಈ ಯೋಜನೆಗಾಗಿ ಅರಣ್ಯ ಇಲಾಖೆಯ ಲೆಕ್ಕ ಶೀರ್ಷಿಕೆ “2406-02-110-0-55-ಪುನರ್ವಸತಿ ಮತ್ತು ಸ್ವಯಂ ಭೂಸ್ವಾಧೀನ ಕಾರ್ಯಕ್ರಮ-059 ಇತರೆ ಖರ್ಚುಗಳು” ಇದರ ಅಡಿಯಲ್ಲಿ ರೂ. 1000.00 ಲಕ್ಷ (10 ಕೋಟಿ) ಅನುದಾನವನ್ನು ಕಾಯ್ದಿರಿಸಲಾಗಿದೆ.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿ ಒಟ್ಟು 1382 ಕುಟುಂಬಗಳು ವಾಸಿಸುತ್ತಿವೆ ಈ ಪೈಕಿ ಪುನರ್ವಸತಿ ಸೌಲಭ್ಯಕ್ಕಾಗಿ ಸ್ವಯಂ-ಪ್ರೇರಿತವಾಗಿ 670 ಕುಟುಂಬಗಳು ಅರ್ಜಿ ಸಲ್ಲಿಸಿವೆ.  ಅರ್ಜಿ ಸಲ್ಲಿಸಿದವರ ಪೈಕಿ 356 ಕುಟುಂಬಗಳಿಗೆ ಪುನರ್ವಸತಿ ಪ್ರಕ್ರಿಯೆ ಪೂರ್ಣಗೊಳಿಸಿ, ಒಟ್ಟು ರೂ. 142.0934 ಕೋಟಿ ಪರಿಹಾರ ಧನವನ್ನು ವಿತರಿಸಲಾಗಿದೆ. ಇನ್ನುಳಿದ 314 ಕುಟುಂಬಗಳಿಗೆ ಪರಿಹಾರ ವಿತರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ತಿಳಿಸಿದರು.

ಬಾಕಿ ಇರುವ 314 ಕುಟುಂಬಗಳ ಪೈಕಿ 76 ಕುಟುಂಬಗಳ ಸ್ಥಿರಾಸ್ತಿಯ ಮೌಲ್ಯಮಾಪನವನ್ನು ಈಗಾಗಲೇ ವಿವಿಧ ಇಲಾಖೆಗಳ ವತಿಯಿಂದ ಪೂರ್ಣಗೊಳಿಸಲಾಗಿದೆ. ಅರ್ಜಿದಾರರ ಮನೆ, ಜಮೀನು ಹಾಗೂ ಇತರೆ ತೋಟಗಾರಿಕಾ ಬೆಳೆ ಮತ್ತು ಮರಗಳ ಮೌಲ್ಯಮಾಪನವನ್ನು ಪ್ರಸ್ತುತ ಚಾಲ್ತಿಯಲ್ಲಿರುವ ದರಗಳ ಪಟ್ಟಿಯಂತೆ ಮಾಡಲಾಗುತ್ತಿದೆ. ಜಿಲ್ಲಾಧಿಕಾರಿಗಳ ಸಮಿತಿಯು ಈ ಮೌಲ್ಯಮಾಪನಕ್ಕೆ ಅನುಮೋದನೆ ನೀಡಿದ ನಂತರ, ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ ಪರಿಹಾರ ಮೊತ್ತವನ್ನು ಪಾವತಿಸಲಾಗುವುದು.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮತ್ತು ಮಾನದಂಡಗಳ ಆಧಾರದ ಮೇಲೆ ಸ್ವಂತ ಜಮೀನು ಹೊಂದಿರುವವರು,  ಕಂದಾಯ ಜಮೀನನ್ನು ಒತ್ತುವರಿ ಮಾಡಿಕೊಂಡಿರುವವರು ಮತ್ತು  ಕಿರು ಅರಣ್ಯ ಹಾಗೂ ರಾಜ್ಯ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ಭೂಸ್ವಾಧೀನ ಮತ್ತು ಪರಿಹಾರವನ್ನು ಒದಗಿಸಲಾಗುತ್ತಿದೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಸರ್ಕಾರದ ನಿಯಮಾವಳಿಗಳ ಅಡಿಯಲ್ಲಿ ಅತ್ಯಂತ ಪಾರದರ್ಶಕವಾಗಿ ನಿರ್ವಹಿಸಲಾಗುತ್ತಿದೆ ಎಂದು ಸಚಿವರು ಸ್ಪಷ್ಟಪಡಿಸಿದರು.

More articles

Latest article

Most read