ಬೆಂಗಳೂರು : ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮೌಂಟ್ ಎವರೆಸ್ಟ್ ಅನ್ನು ಹತ್ತಲು ಕರ್ನಾಟಕ ಪರ್ವತಾರೋಹಣ ಸಂಘದ ಸದಸ್ಯರಾದ ಸಂತೋಷ್ ದೇವರಾಜಪ್ಪ ಮತ್ತು ಮಹಿಳಾ ಪರ್ವತಾರೋಹಿ ಪ್ರೊ. ಡಾ. ಚಿನ್ಮಯಿ ತ್ರಿಶೂಲಮೂರ್ತಿ ಸಿದ್ಧತೆ ನಡೆಸಿದ್ದಾರೆ.
ಈ ಇಬ್ಬರು ಪರ್ವತಾರೋಹಿಗಳು ಸೋಮವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಈ ಸಂದರ್ಭದಲ್ಲಿ ಪರ್ವತಾರೋಹಣದ ಕುರಿತು ಮುಖ್ಯಮಂತ್ರಿಗಳಿಗೆ ವಿವರಗಳನ್ನು ನೀಡಿದರು.
ಬಳಿಕ, ಮುಖ್ಯಮಂತ್ರಿಗಳು ತಂಡಕ್ಕೆ ಶುಭ ಸೂಚಕವಾಗಿ ರಾಷ್ಟ್ರೀಯ ತ್ರಿವರ್ಣ ಧ್ವಜ, ಕರ್ನಾಟಕ ರಾಜ್ಯ ಲಾಂಛನ ಮತ್ತು ಕನ್ನಡ ಧ್ವಜ ಹಸ್ತಾಂತರಿಸಿ ಶುಭಕೋರಿದರು.
ಈ ಸಂದರ್ಭದಲ್ಲಿ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಕರ್ನಾಟಕ ಪರ್ವತಾರೋಹಣ ಸಂಘದ ಕಾರ್ಯದರ್ಶಿ ನಾಗೇಂದ್ರ ಕುಮಾರ್ ಆರ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಮೌಂಟ್ ಎವರೆಸ್ಟ್ ಏರಲಿರುವ ಸಂತೋಷ್ ದೇವರಾಜಪ್ಪ, ಡಾ. ಚಿನ್ಮಯಿ ತ್ರಿಶೂಲಮೂರ್ತಿ
ಸಿಎಂ ಭೇಟಿಯಾದ ಪರ್ವತಾರೋಹಿಗಳು