ಟೆಹ್ರಾನ್: ಇರಾನ್ನಲ್ಲಿ ನಾಟಕೀಯ ರಾಜಕೀಯ ಬೆಳವಣಿಗೆಯೊಂದರಲ್ಲಿ , ದಿವಂಗತ ಅಯತುಲ್ಲಾ ಅಲಿ ಖಮಿನಿಯವರ ಪುತ್ರ ಮೊಜ್ತಾಬಾ ಖಮೀನಿ ಅವರನ್ನು ಇರಾನ್ನ 88 ಸದಸ್ಯರ ʼಅಸೆಂಬ್ಲಿ ಆಫ್ ಎಕ್ಸ್ಪರ್ಟ್ʼ ದೇಶದ ನೂತನ ಸುಪ್ರೀಂ ಲೀಡರ್ ಆಗಿ ಅಧಕೃತವಾಗಿ ಘೋಷಿಸಿದೆ. ಇರಾನ್ ರೆವಲ್ಯೂಷನರಿ ಗಾರ್ಡ್ಸ್ ಮತ್ತು ರಾಜಕೀಯ ಮುಖಂಡರು ಅವರಿಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.
ಮತ್ತೊಂದೆಡೆ , ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲಿನ ದಾಳಿಯನ್ನು ಮುಂದುವರೆಸಿವೆ . ಟೆಹ್ರಾನ್ನ ತೈಲ ಸಂಸ್ಕರಣಾಗಾರಗಳ ಮೇಲೆ ನಡೆದ ಬಾಂಬ್ ದಾಳಿಯಿಂದಗಿ ಇಡೀ ನರಗರವು ಕಪ್ಪು ವಿಷಕಾರಿ ಹೊಗೆಯಿಂದ ಅವೃತವಾಗಿದೆ . ಕ್ಯೂಮ್ ನಗರದಲ್ಲಿಯು ಭಾರಿ ಸ್ಫೋಟಗಳು ವರಾದಿಯಾಗಿವೆ
ಈ ಯುದ್ಧದ ಪರಿಣಾಮ ನೆರೆಯ ದೇಶದ ಮೇಲು ಉಂಟಾಗಿದ್ದು , ಸೌದಿ ಅರೇಬಿಯಸದಲ್ಲಿ ಇರಾನ್ ಕ್ಷಿಪಣಿ ದಾಳಿಗೆ ಇಬ್ಬರು ಬಲಿಯಾಗಿದ್ದಾರೆ . ಲೆಬನಾನ್ನಲ್ಲಿ ನೆಡೆಯುತ್ತಿರುವ ಘರ್ಷಣೆಯಿಂದಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ . ಜಾಗತಿಕವಾಗಿ ತೈಲ ಬೆಲೆ ಏರಿಕೆ ಆಗುವ ಆತಂಕ ಎದುರಾಗಿದೆ.

