ಇರಾನ್‌ ವಿರುದ್ಧದ ಯುದ್ಧ : ಇರಾಕಿ ಕುರ್ದಿಶ್ ನಾಯಕರೊಂದಿಗೆ ಡೊನಾಲ್ಡ್ ಟ್ರಂಪ್ ಮಾತುಕತೆ

ವಾಷಿಂಗ್ಟನ್/ಎರ್ಬಿಲ್: ಇರಾನ್ ಮತ್ತು ಅಮೆರಿಕ-ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ಇರಾಕ್‌ನ ಪ್ರಮುಖ ಕುರ್ದಿಶ್ ನಾಯಕರೊಂದಿಗೆ ದೂರವಾಣಿ ಕರೆ ಮೂಲಕ ಮಹತ್ವದ ಚರ್ಚೆ ನಡೆಸಿದ್ದಾರೆ.

ಇರಾಕ್‌ನ ಕುರ್ದಿಶ್ ಪ್ರಾಂತ್ಯದ ಪ್ರಭಾವಿ ನಾಯಕರಾದ ಮಸೂದ್ ಬರ್ಜಾನಿ (KDP ನಾಯಕ) ಮತ್ತು ಬಾಫೆಲ್ ತಲಬಾನಿ (PUK ಮುಖ್ಯಸ್ಥ) ಅವರೊಂದಿಗೆ ಟ್ರಂಪ್ ಮಾತನಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹಲವು ತಿಂಗಳುಗಳ ರಾಜತಾಂತ್ರಿಕ ಒತ್ತಡದ ನಂತರ ಈ ಮಾತುಕತೆ ನಡೆದಿದೆ ಎನ್ನಲಾಗಿದೆ.

ಕುರ್ದಿಶ್ ನಾಯಕರ ಸಂಪರ್ಕದ ಹಿಂದಿರುವ ತಂತ್ರವೇನು?

ಉತ್ತರ ಇರಾಕ್‌ನಲ್ಲಿರುವ ಕುರ್ದಿಶ್ ಪಡೆಗಳು (ಪೆಶ್ಮರ್ಗಾ) ಅತ್ಯಂತ ಶಿಸ್ತುಬದ್ಧ ಮತ್ತು ಸಮರ್ಥ ಸೈನ್ಯವನ್ನು ಹೊಂದಿವೆ. ಇರಾನ್‌ನೊಳಗೆ ಇರುವ ಕುರ್ದಿಶ್ ಸಮುದಾಯಗಳೊಂದಿಗೆ ಇವರು ಬಲವಾದ ಸಂಬಂಧವನ್ನು ಹೊಂದಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಯಾವ ಉದ್ದೇಶಗಳಿಗಾಗಿ ಇವರ ಸಹಾಯ ಕೋರುತ್ತಿವೆ ಎಂದು ನೋಡುವುದಾದರೆ.  ಇರಾಕ್ ಮತ್ತು ಇರಾನ್ ನಡುವಿನ ಆಯಕಟ್ಟಿನ ಪ್ರದೇಶಗಳ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಮತ್ತುಇರಾನ್‌ನಲ್ಲಿರುವ ಕುರ್ದಿಶ್ ವಿರೋಧ ಪಕ್ಷಗಳೊಂದಿಗೆ ಸಮನ್ವಯ ಸಾಧಿಸಿ, ಅಲ್ಲಿನ ಇಸ್ಲಾಮಿಕ್ ಗಣರಾಜ್ಯದ ವಿರುದ್ಧದ ಪ್ರತಿಭಟನೆಗಳಿಗೆ ಶಕ್ತಿ ತುಂಬುವುದು ಅಮೆರಿಕ ಮತ್ತು ಇಸ್ರೇಲ್‌ನ ತಂತ್ರವಾಗಿದೆ.

ಪ್ರತೀಕಾರವಾಗಿ PDKI ಕೇಂದ್ರದ ಮೇಲೆ ಇರಾನ್ ದಾಳಿ

ಟ್ರಂಪ್ ಅವರ ಈ ಮಾತುಕತೆಯ ಬೆನ್ನಲ್ಲೇ ಇರಾನ್ ಸರ್ಕಾರ ಎಚ್ಚರಿಕೆಯ ಸಂದೇಶ ರವಾನಿಸಿದೆ. ಮಂಗಳವಾರ ಮಾರ್ಚ್ 3 ರಂದು, ಇರಾಕ್‌ನ ಕುರ್ದಿಶ್ ಪ್ರದೇಶದಲ್ಲಿರುವ ಇರಾನ್ ಕುರ್ದಿಸ್ತಾನ್ ಡೆಮಾಕ್ರಟಿಕ್ ಪಾರ್ಟಿ (PDKI) ಕೇಂದ್ರ ಕಚೇರಿಯ ಮೇಲೆ ಇರಾನ್ ಪಡೆಗಳು ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿವೆ.

More articles

Latest article

Most read