ಬೆಂಗಳೂರು: ಅಮೆರಿಕ , ಇಸ್ರೇಲ್ ಮತ್ತು ಇರಾನ್ ಯುದ್ಧದ ಪರಿಣಮವಾಗಿ ಜಾಗತಿಕ ಹಣಕಾಸು ಮಾರುಕಟ್ಟೆ ತಲ್ಲಣಗೊಂಡಿದೆ . ಇದರ ನೇರ ಪರಿಣಾಮ ಭಾರತೀಯ ಷೇರು ಮಾರುಕಟ್ಟೆ ಮೇಲೆ ಬಿದ್ದಿದು ಕಳೆದ ಹಲವು ವರ್ಷಗಳಲ್ಲೆ ಕಾಣದ ಕುಸಿತ ಕಂಡಿದೆ. ಇಂದು ಮಾರ್ಚ್ 02 ವಹಿವಾಟು ಆರಂಭವಾಗುತ್ತಿದ್ದಂತೆಯೇ ಹೂಡಿಕೆದಾರರು ಷೇರುಗಳನ್ನು ಮಾರಾಟಾ ಮಾಡಿದ್ದಾರೆ.
ಸೆನ್ಸೆಕ್ಸ್(Sensex): ಆರಂಭಿಕ ವಹಿವಾಟಿನಲ್ಲಿ 2,743 ಅಂಕಗಳ ಭಾರಿ ಕುಸಿತ ಕಂಡು , 78,543 ಮಟ್ಟಕ್ಕೆ ಜಾರಿದೆ.ನಿಫ್ಟಿ(Nifty 50): ಸುಮಾರು 533 ಅಂಕಗಳ ಕುಸಿತದೊಂದಿಗೆ 24,645 ಮಟ್ಟದಲ್ಲಿ ವಹಿವಾಟು ನೆಡೆಸುತ್ತಿದೆ.ಇದರ ಪರಿಣಾಮದಿಂದಾಗಿ ಕೇಲವೆ ನಿಮಿಷಗಳಲ್ಲಿ ಹೂಡಿಕೆದಾರರು ಸುಮಾರು ₹9 ಲಕ್ಷ ಕೋಟಿ ನಷ್ಟ ಅನುಭವಿಸಿದ್ದಾರೆ. ಡಾಲರ್ ಇದುರು ರೂಪಾಯಿ ಮೌಲ್ಯ 91.29 ಕ್ಕೆ ಕುಸಿದಿದ್ದು , ಇದು ಆಮದು ಬೆಲೆಯನ್ನು ಹೆಚ್ಚಿಸಬಹುದು.
ವಿಮಾನಯಾನ ಮತ್ತು ರಕ್ಷಣಾ ವಲಯ:
ಕಚ್ಚಾ ತೈಲ ಬೆಲೆ ಜಿಗಿತದಿಂದ ಜೆಟ್ ಇಂಧನ ದರ ಏರಿಕೆ ಆಗುವ ಭೀತಿ ಉಂಟಾಗಿದ್ದು ಇಂಡಿಗೋ ಶೇ. 7+ ಹಾಗೂ ಸ್ಪೈಸ್ಜೆಟ್ ಶೇ. 4+ ರಷ್ಟು ಕುಸಿತ ಕಂಡಿವೆ. ಯುದ್ಧದ ಭೀತಿಯಿಂದ ರಕ್ಷಣಾ ಕಂಪನಿಗಳ ಷೇರುಗಳಿಗೆ ಬೇಡಿಕೆ ಹೆಚ್ಚಾಗಿದೆ ಭಾರತ್ ಎಲೆಕ್ಟ್ರನಿಕ್ಸ್ ಶೇ. 2.5+ ಮತ್ತು ಭಾರತ್ ಡೈನಾಮಿಕ್ಸ್ ಶೇ. 3.5+ ರಷ್ಟು ಏರಿಕೆ ಕಂಡಿವೆ.
ಕಚ್ಚಾ ತೈಲ ದರ ಏರಿಕೆ – ಭಾರತಕ್ಕೆ ಶಾಕ್!
ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ತೈಲ ಪುರೈಕೆಯಲ್ಲಿ ಭಾರಿ ವ್ಯತ್ಯಸವಾಗುವ ಆತಂಕ ನಿರ್ಮಾಣವಾಗಿದೆ.ಬ್ರೇಂಟ್ ಕಚ್ಚಾ ತೈಲ ಬೆಲೆಯು ಶೇ. 10ರಷ್ಟು ಜಿಗಿದು, ಪ್ರತಿ ಬ್ಯಾರೆಲ್ಗೆ $82.40 (7534.19 ರೂಪಾಯಿ) ಕ್ಕೆ ತಲುಪಿದೆ . ಇದು ಕಳೆದ 14 ತಿಂಗಳಿನಲ್ಲೆ ಗರಿಷ್ಠ ದರವಾಗಿದೆ. ಹರ್ಮುಜ್ ಜಲಸಂಧಿ ವಿಶ್ವದ ಶೇ.20ರಷ್ಟು ತೈಲ ಸಾಗಣಿಯಾಗುವ ಹಾರ್ಮುಜ್ ಜಲಸಂಧಿಯಲ್ಲಿನ ಸಂಘರ್ಷದಿಂದಾಗಿ ನೌಕಯಾನ ಸ್ಥಗಿತಗೊಂಡಿದೆ. ಭಾರತದ ತೈಲ ಆಮದಿನ ಶೇ.40 ಕ್ಕೂ ಹೆಚ್ಚು ಪಾಲೂ ಇದೇ ಮಾರ್ಗವಾಗಿ ಬರುವುದರಿಂದ , ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ಭೀತಿ ಎದುರಾಗಿದೆ.
ಮಾರುಕಟ್ಟೆಯ ಈ ಎಲ್ಲ ಏರಿಳಿತಗಳ ನಂತರ ಹೂಡಿಕೆದಾರರು ಷೇರುಗಳನ್ನು ಮಾರಿ ಚಿನ್ನದ ಕಡೆಗೆ ಮುಖ ಮಾಡಿದ್ದಾರೆ , ಈ ಪರಿಣಾಮವಾಗಿ 24 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ₹16,980 ರಷ್ಠಿದ್ದರೆ, 22 ಕ್ಯಾರೆಟ್ ಚಿನ್ನದ ಬೆಲೆಯು ಪ್ರತಿ ಗ್ರಾಂಗೆ ₹15,565 ರಷ್ಠಿದೆ.

