33 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

1993ರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿ

ಕೋಲಾರ. ಕಳೆದ 33 ವರ್ಷಗಳಿಂದ ಪೊಲೀಸರಿಗೂ ಸಿಗದೆ, ನ್ಯಾಯಾಲಯಕ್ಕೂ ಸಿಗದೆ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಆರೋಪಿ ಒಬ್ಬನನ್ನು ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ನಗರ ಠಾಣೆ ಪಿಎಸ್ಐ ಸಂಗಪ್ಪ ಮೇಟಿ ಹಾಗೂ ಮುಖ್ಯ ಪೇದೆ ಶೇಖರ್ ಹಾಗೂ ಪೇದೆ ರಮೇಶ್ ಎಂಬುವರು ದರ್ಗಾ ಶಾಹಿ ಮೊಹಲ್ಲಾದ ನಿವಾಸಿ ಜಮೀರ್ ನನ್ನು ಬಂಧಿಸಿದ್ದಾರೆ ಸದರಿ ಆರೋಪಿ ಜಮೀರ್ ನಗರ ಠಾಣೆ ವ್ಯಾಪ್ತಿಯಲ್ಲಿ 1993ರ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿತ್ತು.
ಅಕ್ರಮವಾಗಿ ಗುಂಪು ಕಟ್ಟಿಕೊಂಡು ಗಲಭೆಯನ್ನು ಮಾಡಿದ್ದು ಅಲ್ಲದೆ ಅಪಾಯಕಾರಿ ಆಯುಧಗಳಿಂದ ವ್ಯಕ್ತಿಯೊಬ್ಬರಿಗೆ ಗಾಯಗೊಳಿಸಿರುವ ಕುರಿತು ಪ್ರಕರಣ ಒಂದು ದಾಖಲಾಗಿತ್ತು. ಆರೋಪಿಯು ವಿಚಾರಣೆಗೂ ಹಾಜರಾಗದೆ ಅಂದಿನಿಂದ ಇಂದಿನವರೆಗೂ ತಲೆಮಾರಿಸಿಕೊಂಡಿದ್ದ ಎನ್ನಲಾಗಿದೆ

More articles

Latest article

Most read