‘ದಿ ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್’ಚಿತ್ರ ಸೆನ್ಸಾರ್‌ ಮಂಡಳಿಯಿಂದ ಸ್ಪಷ್ಟನೆ ಕೇಳಿದ ಕೇರಳ ಹೈಕೋರ್ಟ್‌

ಕೇರಳ  ಜಾತ್ಯತೀತ ರಾಜ್ಯ. ಇಲ್ಲಿನ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ : ಹೈಕೋರ್ಟ್‌

ಕೇರಳ :  ಮುಸ್ಲಿಂ ಸಮುದಾಯದ ಬಗ್ಗೆ ಪ್ರಚೋದನಕಾರಿ ಚಿತ್ರಣದಿಂದ ಆಕ್ರೋಶಕ್ಕೆ ಕಾರಣವಾಗಿರುವ ‘ದಿ ಕೇರಳ ಸ್ಟೋರಿ 2 : ಗೋಸ್ ಬಿಯಾಂಡ್’ ಚಿತ್ರಕ್ಕೆ ನೀಡಲಾಗಿರುವ ಸೆನ್ಸಾರ್ ಪ್ರಮಾಣೀಕರಣದ ಬಗ್ಗೆ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಗೆ (ಸಿಬಿಎಫ್‌ಸಿ) ಸ್ಪಷ್ಟೀಕರಣ ನೀಡುವಂತೆ ಕೇರಳ ಹೈಕೋರ್ಟ್‌ ಹೇಳಿದೆ.  

ನ್ಯಾಯಮೂರ್ತಿ ಬೆಚು ಕುರಿಯನ್ ಥಾಮಸ್, ಸಿನಿಮಾ ಬಿಡುಗಡೆ ತಡೆಗೆ ಹಾಗೂ ಸೆನ್ಸಾರ್‌ ಸರ್ಟಿಫಿಕೇಟ್‌ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಅವರು,  ಈ ಚಿತ್ರದಲ್ಲಿ ‘ಲವ್ ಜಿಹಾದ್’ ಎಂಬ ಪದ ಬಳಕೆಯಿಂದ, ಪ್ರೀತಿಯ ಹೆಸರಿನಲ್ಲಿ ಹಿಂದೂ ಮಹಿಳೆಯರನ್ನು ಆಕರ್ಷಿಸುವ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿ ಪರಿವರ್ತಿಸಲು ಸಮುದಾಯವು ಉದ್ದೇಶಿಸಿದೆ ಎಂದು ತೋರಿಸುತ್ತದೆ. ಕೇರಳ  ಜಾತ್ಯತೀತ ರಾಜ್ಯ. ಇಲ್ಲಿನ ಜನರು ಸಾಮರಸ್ಯದಿಂದ ಬದುಕುತ್ತಿದ್ದಾರೆ.   ಆದರೆ ರಾಜ್ಯದಾದ್ಯಂತ ಏನಾದರೂ ನಡೆಯುತ್ತಿದೆ ಎಂದು ಚಿತ್ರಿಸುವಾಗ ಈ ಅಂಶಗಳನ್ನು  ನೀವು ಪರಿಗಣಿಸಿದ್ದೀರಾ? ಇದು ತಪ್ಪುಸೂಚನೆಯನ್ನು ತೋರಿಸುತ್ತದೆ ಎಂದು ಹೈಕೋರ್ಟ್‌ ಕಳವಳ ವ್ಯಕ್ತಪಡಿಸಿದೆ.

ಚಿತ್ರದ ಶೀರ್ಷಿಕೆಯಲ್ಲಿ ಕೇರಳ ರಾಜ್ಯದ ಹೆಸರನ್ನು ಸೇರಿಸಲಾಗಿರುವುದರಿಂದ, ಕೇರಳದ ಜನರ ಆತಂಕಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ಅಲ್ಲದೇ, ಈ ಚಿತ್ರವು ನೈಜ ಘಟನೆಗಳನ್ನು ಆಧರಿಸಿದೆ ಎಂದು ಹೇಳಿಕೊಳ್ಳುವುದರಿಂದ, ತಪ್ಪು ನಿರೂಪಣೆ ಮತ್ತು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುವ ಸಾಧ್ಯತೆಯ ಬಗ್ಗೆ  ಅವರು ಆತಂಕ ವ್ಯಕ್ತಪಡಿಸಿದ್ದಾರೆ. 

ಕೋಮು ಸಂಘರ್ಷಕ್ಕೆ ಕಾರಣವಾಗಬಹುದು ಎಂಬ ಕಳವಳದ ಮೇಲೆ ಚಿತ್ರದ ಬಿಡುಗಡೆಗೆ ತಡೆ ನೀಡುವಂತೆ ಮತ್ತು ಅದರ ಪ್ರಮಾಣೀಕರಣವನ್ನು ರದ್ದುಗೊಳಿಸುವಂತೆ ಕೋರಿ ಮೂರು ಪಿಐಎಲ್‌ಗಳನ್ನು ಸಲ್ಲಿಸಲಾಗಿದೆ. ಹಿಂಸೆ ಮತ್ತು ಅನ್ಯೋನ್ಯತೆಯನ್ನು ಚಿತ್ರಿಸುವ ದೃಶ್ಯಗಳ 16 ಕಡಿತಗಳ ನಂತರ ಚಿತ್ರಕ್ಕೆ ಯು/ಎ 16+ ರೇಟಿಂಗ್ ನೀಡಲಾಗಿದೆ. ಪ್ರಸ್ತುತ ರೇಟಿಂಗ್ ಹದಿಹರೆಯದವರು ಪೋಷಕರ ಸಹಾಯದಿಂದ ಚಿತ್ರವನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ವಿವಾದಾತ್ಮಕ ಚಿತ್ರವು ಫೆಬ್ರವರಿ 27 ರಂದು ಬಿಡುಗಡೆಯಾಗಲಿದೆ.

More articles

Latest article

Most read