ಕೌಟುಂಬಿಕ ಮಹಿಳೆಯಾಗಿದ್ದ ಬಿ ಎಂ ರೋಹಿಣಿಯವರು ಸಾಮಾಜಿಕ ಮಹಿಳೆಯಾಗಿ ಜಿಗಿದರು- ಡಾ.ಎಚ್‌ ಎಸ್‌ ಅನುಪಮಾ

ಬಿ.ಎಂ. ರೋಹಿಣಿಯವರಿಗೆ `ಆರೋಹಿಣಿ’ ಗ್ರಂಥ ಗೌರವ

ಮಂಗಳೂರು, ಫೆ. 21:  ಕೌಟುಂಬಿಕ ಮಹಿಳೆ ಸಾಮಾಜಿಕ ಮಹಿಳೆಯಾಗಿ ಮಹಾ ಜಿಗಿತವನ್ನು ಕಂಡುಕೊಂಡ ಬದುಕು ರೋಹಿಣಿಯವರದ್ದು. ಬಾಲ್ಯದಲ್ಲೇ ಹೇಳಿದ್ದನ್ನೆಲ್ಲ ಒಪ್ಪಿಕೊಂಡು  ಗುಡ್ ಗರ್ಲ್‌  ಅನ್ನಿಸಿಕೊಳ್ಳುವುದರಿಂದ ಹೊರಬಂದು  ಪ್ರಶ್ನೆಗಳನ್ನು  ಕೇಳುತ್ತಾ ಸತ್ಯ  ನ್ಯಾಯವನ್ನು ಪ್ರತಿಫಲಿಸುವ ಕನ್ನಡಿಯಂತಹ  ವ್ಯಕ್ತಿತ್ವವನ್ನು ರೂಪಿಸಿಕೊಂಡು ಮುನ್ನಡೆದಿರುವುದು  ರೋಹಿಣಿಯವರ ಸತ್ವ ಎಂದು ಡಾ.ಎಚ್‌ ಎಸ್‌ ಅನುಪಮಾ ಅಭಿಪ್ರಾಯಪಟ್ಟರು.

ಅವರು ಬಿ ಎಂ ರೋಹಿಣಿ ಅಭಿನಂದನಾ ಸಮಿತಿ, ಮಂಗಳೂರು ಮತ್ತು ಎಸ್‌ ವಿ ಪಿ ಕನ್ನಡ ಅಧ್ಯಯನ ಸಂಸ್ಥೆ, ಮಂಗಳಗಂಗೋತ್ರಿ ಇವರ ಆಶ್ರಯದಲ್ಲಿ ನಡೆದ ಬಿ ಎಂ ರೋಹಿಣಿ ಅಭಿನಂದನೆ ಮತ್ತು ಗ್ರಂಥ ಗೌರವ ಸಮಾರಂಭದಲ್ಲಿ ಅಭಿನಂದನಾ ಗ್ರಂಥ ಆರೋಹಿಣಿಯ ಬಗ್ಗೆ ಮಾತಾಡುತ್ತಿದ್ದರು

ಈಗೀಗ ಬರುವ ಅಭಿನಂದನಾ ಗ್ರಂಥಗಳಲ್ಲಿ  ಶೇ.99  ಹೊಗಳಿ ಅಟ್ಟಕ್ಕೇರಿಸಿದ ಭಜನೆಯ ಗ್ರಂಥಗಳೇ ಆಗಿರುತ್ತವೆ. ಅಲ್ಲದೆ ಶೇ. 99 ಪುರುಷರದೇ  ಆಗಿರುತ್ತವೆ. 56 ಇಂಚು ಇದೆ ಎಂದು ಯಾರೂ ಕೊಚ್ಚಿಕೊಳ್ಳದೆ ಇರುವೆ ತರ ಬದುಕಿರುವವರಿಗೆ  ಅಭಿನಂದನಾ ಗ್ರಂಥ ಯಾರು ತರುತ್ತಾರೆ?  ಅದನ್ನು ಹೆಣ್ಣು ಮಕ್ಕಳು ತರುತ್ತಾರೆ. ಇದಕ್ಕೊಂದು ಮಾದರಿ “ಆರೋಹಿಣಿ”. ಇರುವೆ ತರ ಬದುಕಿದ  ರೋಹಿಣಿಯವರಿಗೆ ಸಲ್ಲಿಸಿದ  ಆರೋಹಿಣಿ  ಅಭಿನಂದನಾ ಗ್ರಂಥ ಅವರ ಸಾಧನೆಗೆ ಸಲ್ಲಿಸಿದ ಅಕ್ಷರ ಗೌರವವಾಗಿದೆ ಎಂದರು.

ಇರುವೆ ಗೋಡೆಯ ಮೇಲೆ ಒಬ್ಬಂಟಿಯಾಗಿದ್ದರೂ ಎಂತಹಾ ತಲ್ಲಣ ಬಿಕ್ಕಟ್ಟುಗಳ ಸನ್ನಿವೇಶ ಎದುರಾದಾಗಲೂ ಮುಂದೆ ತನ್ನವರ ಜತೆ ಸೇರುವೆನೆಂದು ನಿರ್ಭೀತಿಯಿಂದ ನಿರಂತರ ಚಲನೆಯನ್ನು ಮುಂದುವರಿಸುತ್ತದೆ. ಅಂತಹ ಇರುವೆಯ ರೀತಿಯಲ್ಲೇ ಬಿಕ್ಕಟ್ಟಿನ ಯಾವುದೇ ಸನ್ನಿವೇಶಗಳಲ್ಲೂ ಭರವಸೆಯನ್ನು ಕಳೆದುಕೊಳ್ಳದೆ, ಕೆಳಕ್ಕುರುಳದೆ ಸತ್ಯವನ್ನು ನ್ಯಾಯವನ್ನು  ಪ್ರತಿಫಲಿಸುವ ವ್ಯಕ್ತಿತ್ವವನ್ನು ರೂಪಿಸಿಕೊಂಡು ನ್ಯಾಯದ ಕಡೆ ನಡೆದವರು ರೋಹಿಣಿಯವರು ಎಂದು ಅಭಿಪ್ರಾಯಿಸಿದರು.

ಹೆಣ್ಣು ವಿವೇಕದ ಸಾಕಾರ ರೋಹಿಣಿಯವರು ಎಂದ ಅನುಪಮಾ ಬದುಕು ಉಯ್ಯಾಲೆಯಂತೆ ತೊಯ್ದಾಡಿದರೂ ಎದೆಗುಂದದೆ, ಬೌದ್ಧಿಕ ಸಮಗ್ರತೆಯನ್ನು ಕಳೆದುಕೊಳ್ಳದೆ ಮುನ್ನಡೆದಿರುವ ಅವರ ಬದುಕನ್ನು ಆರೋಹಿಣಿ ಗ್ರಂಥ ತೆರೆದಿಟ್ಟಿದೆ ಎಂದು ಅನುಪಮಾ ಗ್ರಂಥದ ಬಗ್ಗೆ ವಿವರ ನೀಡಿದರು.

ಗ್ರಂಥ ಅನಾವರಣಗೊಳಿಸಿದ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ. ನಾಗಪ್ಪ ಗೌಡ ಆರ್. ಅವರು ರೋಹಿಣಿಯವರಿಗೆ ಮನೆಯಲ್ಲಿ ಆರ್ಥಿಕ ಬಡತನ ಇದ್ದರೂ ಭಾವಕೋಶ, ಜ್ಞಾನಕೋಶಕ್ಕೆ ಬಡತನವಿರಲಿಲ್ಲ, ಬಡತನ ಅವಮಾನಕರವಲ್ಲ ಬಡತನವನ್ನು ಮೀರಲು ಪ್ರಯತ್ನಿಸದಿರುವುದು ಅವಮಾನಕರ ಎಂದ ಸಂದರ್ಶನಗಳಲ್ಲಿನ ಅವರ ಮಾತುಗಳು ಅವರ ವ್ಯಕ್ತಿತ್ವವನ್ನು  ಕಟ್ಟಿಕೊಡುತ್ತವೆ ಅಂದರು. ಇದೀಗ  ಪ್ರಶಿಸುವುದನ್ನು ನಿಲ್ಲಿಸುವ ನೆಲೆಯಲ್ಲಿ ನಾವು ನಿಂತಿದ್ದೇವೆ. ಮನುಷ್ಯನ ಸಾಧನೆಯಲ್ಲಿ ಚಿಂತಿಸುವುದು, ಪ್ರಶ್ನಿಸುವುದು ಬಹಳ ಮುಖ್ಯ.  ಪ್ರಶ್ನೆ ಮಾಡದೆ, ಚಿಂತನೆ ಇಲ್ಲದೆ ಬೆಳೆಯಲು ಆಗದು, ಸಾಧನೆ ಮಾಡಲು ಆಗದು ಎಂಬುದಕ್ಕೆ ನಿದರ್ಶನ ಸಾಹಿತಿ ಬಿ.ಎಂ. ರೋಹಿಣಿಯವರು  ಎಂದರು.

ಅಭಿನಂದನೆಯನ್ನು ಸ್ವೀಕರಿಸಿ ಮಾತಾಡಿದ ಬಿ ಎಂ ರೋಹಿಣಿಯವರು ಗಂಡು ಮಗುವಿಗೆ ನೀಡುವ ಎಲ್ಲಾ ಸ್ವಾತಂತ್ರ್ಯವನ್ನು ಹೆಣ್ಣು ಮಗುವಾದ ತನಗೆ ನೀಡಿ ಧೈರ್ಯದಿಂದ ನಡೆಯುವಂತೆ  ಮಾಡಿದವರು ನನ್ನ ತಂದೆಯವರು ಎಂದ ಅವರು  ತನ್ನ ಸಾಧನೆಗೆ ಸಹಕರಿಸಿದ ಕುಟುಂಬದವರನ್ನು,  ಸಹೋದ್ಯೋಗಿಗಳನ್ನು ಮತ್ತಿತರರನ್ನು  ಸ್ಮರಿಸಿದರು.

ಕೆಥೋಲಿಕ್ ಧರ್ಮ ಪ್ರಾಂತ್ಯದ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ತಲಿನೋ ಅಭಿನಂದನಾ ನುಡಿಗಳನ್ನಾಡಿದರು. ಅತಿಥಿಗಳಾಗಿ ಪ್ರಜ್ಞಾ ರೋಹನ್ ಕುಮಾರ್ ನೆಲ್ಲಿಂಗೇರಿ, ಮಂಗಳೂರು ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ಪ್ರಣೀತಾ ಮೊಂತೆರೋ ಭಾಗವಹಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಡಾ. ಗಣಪತಿ ಗೌಡ ಶುಭ ಹಾರೈಸಿದರು. ಬಿ.ಎಂ. ರೋಹಿಣಿ ಅಭಿಂದನಾ ಸಮಿತಿ ಅಧ್ಯಕ್ಷೆ ಶಕುಂತಳಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಸಮಿತಿಯ ಕಾರ್ಯದರ್ಶಿ ಡಾ. ಜ್ಯೋತಿ ಚೇಳ್ಯಾರು, ಆಶಾ ಸುವರ್ಣ, ರೆನ್ನಿ ಡಿಸೋಜಾ, ಸಿ. ಸಿಂತಿಯಾ, ಗೋಕುಲ್‍ದಾಸ್, ಮಂಜುಳಾ ಸುನಿಲ್, ನರೇಶ್, ವಾಣಿ ಪೆರಿಯೋಡಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮರ್ಲಿನ್ ಮಾರ್ಟಿಸ್ ಸ್ವಾಗತಿಸಿದರು. ಸುಮಲತಾ ಸುವರ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾವ್ಯಶ್ರೀ ಅಭಿನಂದನಾ ಗೀತೆ ಹಾಡಿದರು.

ಇದನ್ನೂ ಓದಿ- http://ಸಾಹಿತ್ಯ ಮತ್ತು ಹೋರಾಟದ ಮಿಳಿತ – ಬಿ ಎಂ ರೋಹಿಣಿ https://kannadaplanet.com/a-combination-of-literature-and-struggle-b-m-rohini/

More articles

Latest article

Most read