ಮಂಗಳೂರು: ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಸಲ್ಲಿಸಿದ ಖಾಸಗಿ ದೂರಿನ ಆಧಾರದ ಮೇಲೆ ಲೋಟಸ್ ಗ್ರೂಪ್‌ನ ಪ್ರಸಿದ್ಧ ಬಿಲ್ಡರ್ ಮತ್ತು ಬಿಜೆಪಿಯ ಜಿತೇಂದ್ರ ಕೊಟ್ಟಾರಿ ವಿರುದ್ಧ ಎಫ್ಐಆರ್ ದಾಖಲಿಸಲು ಮಂಗಳೂರಿನ 6ನೇ ಜೆಎಂಎಫ್‌ಸಿ ನ್ಯಾಯಾಲಯ ಪೊಲೀಸರಿಗೆ ನಿರ್ದೇಶನ ನೀಡಿದೆ
ಕಳೆದ 2024 ರ ಅಕ್ಟೋಬರ್ 9 ರಂದು ತನುಷ್ ಶೆಟ್ಟಿ ಮತ್ತು ಅಂಕಿತ್ ಶೆಟ್ಟಿ ಬಜ್ಪೆಯಿಂದ ಕದ್ರಿಗೆ ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ಘಟನೆಯೊಂದು ನಡೆದಿತ್ತು. ಕೊಟ್ಟಾರಿ ಚಲಾಯಿಸುತ್ತಿದ್ದ ಎನ್ನಲಾದ ಬಿಳಿ ಆಡಿ ಕಾರು ಅತಿ ವೇಗದಲ್ಲಿ ಅಜಾಗರೂಕತೆಯಿಂದ ಓವರ್‌ಟೇಕ್ ಮಾಡಿತು. ಅಪಾಯಕಾರಿ ಚಾಲನೆಯ ಮಾತನಾಡಲು ತನುಷ್ ಹಾಗೂ ಅಂಕಿತ್ ಅವರುಗಳು ಕೊಟ್ಟಾರಿ ಮನೆ ಬಳಿಗೆ ಹೋಗಿದ್ದರು.
ಆ ವೇಳೆ, ಕೊಟ್ಟಾರಿ, ನಾನು ಯಾರೆಂದು ನಿಮಗೆ ತಿಳಿದಿದೆಯೇ? ನಾನು ಏನು ಬೇಕಾದರೂ ಮಾಡಬಹುದು ಎಂದು ದುರಹಂಕಾರದಿಂದ ಮಾತನಾಡಿದ್ದರು. ಅಲ್ಲದೇ, ಆತನ ಮಗಳು ಕೂಡ ಗುಂಡು ಹಾರಿಸಿ ಕೊಲ್ಲು ಎಂದು ಅಪ್ಪನಿಗೆ ಹೇಳಿದ್ದಳು. ಈ ಬಗ್ಗೆ ಪೊಲೀಸರಿಗೆ ದೂರು ನೀಡದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಬದಲಾಗಿ ಯುವಕರ ವಿರುದ್ಧ ಜೀವ ಬೆದರಿಕೆ, ಅತಿಕ್ರಮಣ, ಅವರ ಪತ್ನಿಯ ಮೇಲೆ ಹಲ್ಲೆ ಮತ್ತು ಅವರ ಮಗಳ ಮೇಲೆ ಕಿರುಕುಳದ ಆರೋಪ ಹೊರಿಸಿದ್ದರು. ಯುವಕರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು.
ಬಿಡುಗಡೆಯಾದ ನಂತರ, ತನುಷ್ ಶೆಟ್ಟಿ ನಿಜವಾದ ಘಟನೆಗಳನ್ನು ವಿವರಿಸುವ ವಿವರವಾದ ಖಾಸಗಿ ದೂರನ್ನು ಸಲ್ಲಿಸಿದರು. ಪರಿಶೀಲನೆಯ ನಂತರ ನ್ಯಾಯಾಲಯವು ಜಿತೇಂದ್ರ ಕೊಟ್ಟಾರಿ ವಿರುದ್ಧ ಎಫ್ಐಆರ್ ದಾಖಲಿಸಲು ಸೂಚಿಸಿದೆ.

