ಇಂದು ಹಾವೇರಿಯಲ್ಲಿ ಬೃಹತ್ ಸಮಾವೇಶ

ಸಿದ್ದರಾಮಯ್ಯ ಸರ್ಕಾರಕ್ಕೆ ಸಹಸ್ರ ದಿನ

ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಭರ್ತಿ 1000 ದಿನ ಪೂರ್ಣಗೊಂಡಿದ್ದು, ಶನಿವಾರ ಫೆ.14, ಹಾವೇರಿಯಲ್ಲಿ ಬೃಹತ್ ಸಮಾವೇಶ ನಡೆಸಿ 3 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೂವರೆ ಸಾವಿರ ವಸತಿ ಪ್ರದೇಶಗಳಲ್ಲಿ ವಾಸವಾಗಿದ್ದರೂ ಹಕ್ಕುಪತ್ರಗಳಿರಲಿಲ್ಲ. ಈ ಪ್ರದೇಶಗಳನ್ನು ಕಂದಾಯ ಭೂಮಿ ಎಂದು ಘೋಷಿಸಿ ಹಕ್ಕುಪತ್ರ ನೀಡಲಾಗುತ್ತಿದೆ ಎಂದು ತಿಳಿಸಿದರು.

ಇದುವರೆಗೂ 2.20 ಲಕ್ಷ ಜನರಿಗೆ ಹಕ್ಕುಪತ್ರ ನೀಡಲಾಗಿದೆ. ಕಳೆದ ವರ್ಷ 36000 ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿದೆ. ಈ ವರ್ಷ 1 ಲಕ್ಷದ 6 ಸಾವಿರ ಜನರಿಗೆ ಹಕ್ಕುಪತ್ರ ನೀಡಲಾಗುವುದು. ಈ ಕಾರ್ಯಕ್ರಮಕ್ಕೆ ರಾಹುಲ್ ಗಾಂಧಿ ಬರುವುದಿಲ್ಲ. ಸರ್ಕಾರ ಸಾವಿರ ದಿನ ಪೂರೈಸಿದ ಹಿನ್ನೆಲೆ ಈ ಕಾರ್ಯಕ್ರಮ ಮಾಡಲಾಗುತ್ತಿದೆಎಂದರು.

ಮಲೆನಾಡಿನ ಕಾನು ಸೊಪ್ಪಿನ ಬೆಟ್ಟಗಳಿಗೆ ವಾಸಿಸುವವರಿಗೆ ಹಕ್ಕುಪತ್ರ ನೀಡಲು ಅರಣ್ಯ ಇಲಾಖೆಯ ಸಹಮತಿ ಸಿಕ್ಕಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಅರಣ್ಯ ಇಲಾಖೆ ಅನುಮತಿ ನೀಡುತ್ತಿಲ್ಲ. ಕಾನೂನಾತ್ಮಕವಾಗಿ ಪರಿಹಾರ ಸಿಕ್ಕರೆ ಮಾತ್ರ ಹಕ್ಕುಪತ್ರ ಕೊಡಲು ಸಾಧ್ಯ ಎಂದರು.

ರಾಜ್ಯದಲ್ಲಿ ಕಂದಾಯ ಇಲಾಖೆಯ ಸರ್ವರ್‌ಗಳ ಸಮಸ್ಯೆ ಇಲ್ಲ. ದಿನಕ್ಕೆ 9,000 ದಿಂದ 13 ಸಾವಿರದವರೆಗೆ ರಿಜಿಸ್ಟ್ರೇಷನ್ ಆಗುತ್ತಿದೆ. ಮಧ್ಯದಲ್ಲಿ ಒಂದೊಂದು ದಿನ ಸಮಸ್ಯೆ ಆಗುತ್ತಿದೆ. ಅದನ್ನು ಕೂಡ ಸರಿಪಡಿಸುವ ಕೆಲಸ ಆಗುತ್ತಿದೆ. ಕಂದಾಯ ಇಲಾಖೆಯಲ್ಲಿ ದಾಖಲಾತಿ ಡಿಜಿಟಲೈಸ್ ಮಾಡಲಾಗುತ್ತಿದೆ. ದಾಖಲೆಗಳನ್ನು ತಿದ್ದುವ, ಕಳೆದು ಹೋಗುವ ಕಾರಣದಿಂದ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದೆ. ಶಿಥಿಲಾವಸ್ಥೆಯಲ್ಲಿರುವ 67500 ಕೋಟಿ ಪುಟಗಳ ಸ್ಕ್ಯಾನಿಂಗ್ ಆಗಿದೆ ಎಂದರು.

ತುದಿಬೆರಳಲ್ಲಿ ವಂಶವೃಕ್ಷ : ಭೂ ಸುರಕ್ಷಾ ಯೋಜನೆ ಜಾರಿಗೆ ತಂದಿದ್ದೇವೆ. 100 ತಾಲೂಕುಗಳಲ್ಲಿ ಸ್ಕ್ಯಾನಿಂಗ್ ಕಂಪ್ಲೀಟ್ ಆಗಿದೆ. ಆನ್‌ಲೈನ್‌ನಲ್ಲಿ ಭೂ ಸುರಕ್ಷಾದಲ್ಲಿ ಜನರು ನೇರವಾಗಿ ಅಪ್ಲೈ ಮಾಡಿ ಮನೆಯಲ್ಲಿಯೇ ದಾಖಲೆಗಳನ್ನು ಪಡೆಯಬಹುದು. ವಂಶವೃಕ್ಷ ನಕಲಿ ಮಾಡಲು ಬರುವುದಿಲ್ಲ. ಮುಂದಿನ ವರ್ಷ ಸರ್ವೇ ಕಚೇರಿ ಹಾಗೂ ರಿಜಿಸ್ಟರ್ ಕಚೇರಿಗಳಲ್ಲಿ ಸ್ಕ್ಯಾನಿಂಗ್ ಕಾರ್ಯ ಪೂರ್ಣಗೊಳ್ಳಲಿದೆ. ಬೆರಳ ತುದಿಯಲ್ಲಿ ಜನತೆಗೆ ದಾಖಲೆ ಸಿಗಲಿದೆ. ಬ್ಯಾಂಕ್ ಮತ್ತು ಕೋರ್ಟ್‌ಗಳಲ್ಲಿ ವಂಶವೃಕ್ಷವನ್ನು ಆನ್ಲೈನಲ್ಲಿ ಚೆಕ್ ಮಾಡಬಹುದು ಎಂದರು.

ಒಣ ಉಸಾಬರಿ ಮಾಡಲು ಸಮಯವೇ ಇಲ್ಲ: ಬೈರೇಗೌಡ

ಶಾಸಕರು ವಿದೇಶ ಪ್ರವಾಸ ಹೊರಟಿರುವ ವಿಚಾರ ನನಗೆ ಗೊತ್ತಿಲ್ಲ. ಅದು ಅವರವರ ಇಚ್ಛೆ. ನನ್ನ ಇಲಾಖೆ ಸಂಪೂರ್ಣ ವಿಷಯಗಳನ್ನು ತಿಳಿದುಕೊಳ್ಳಲು ನನಗೆ ಸಮಯ ಸಾಕಾಗುತ್ತಿಲ್ಲ. ಎಷ್ಟು ಮಾಡಿದರೂ ನಮ್ಮ ಕೆಲಸಗಳೇ ಮುಗಿಯುತ್ತಿಲ್ಲ. ಇನ್ನೊಬ್ಬರ ಕೆಲಸದಲ್ಲಿ ಉಸಾಬರಿ ಮಾಡುವುದಕ್ಕೆ ನನಗೆ ಸಮಯ ಇಲ್ಲ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಸುದ್ದಿಗಾರರ ಜತೆ ಮಾತನಾಡಿ, ಇಲಾಖೆಯಲ್ಲಿ ಉಳಿದಿರುವ ಕೆಲಸ ಮಾಡಲು ಸಮಯ ಸಾಲುತ್ತಿಲ್ಲ. ಇನ್ನು ಯಾರು ಪ್ರವಾಸ ಹೋಗುತ್ತಿದ್ದಾರೆ ಎಲ್ಲಿಗೆ ಹೋಗುತ್ತಿದ್ದಾರೆ ಎನ್ನುವುದನ್ನು ನಾನೇಕೆ ತಿಳಿದುಕೊಳ್ಳಲಿ ಎಂದರು.

More articles

Latest article

Most read