ಜೈ ಶ್ರೀರಾಮ್  V/s ಹೇರಾಮ್

ರೂಪದಲ್ಲಿ ಒಂದೇ ರೀತಿ ಇರುವ, ವೇಷಭೂಷಣಗಳಲ್ಲಿ ಬೇರೆಯಾಗಿರುವ ಜೈ ಶ್ರೀರಾಮ ಮತ್ತು ಹೇರಾಮ ದೇವರುಗಳು ಪರಸ್ಪರ ಭೇಟಿಯಾಗುತ್ತಾರೆ)

ಜೈ ಶ್ರೀರಾಮ : ಯಾರು ನೀನು? ನೋಡಲು ನನ್ನ ಹಾಗೆಯೇ ಇದ್ದೀಯಲ್ಲಾ.

ಹೇರಾಮ್ : ನಾನಾss, ನಾನು ಹೇರಾಮ್.

ಜೈ ಶ್ರೀರಾಮ : (ಗಹಗಹಿಸಿ ನಕ್ಕು) ರಾಮ ಅಂತೀಯಾ, ನಿನ್ನ ಆಯುಧಗಳೆಲ್ಲಿ? ಬಿಲ್ಲು ಬಾಣಗಳೆಲ್ಲಿ? ರತ್ನ ಖಚಿತ ಕಿರೀಟಾಭರಣಗಳೆಲ್ಲಿ?. ಏನ್ ತಮಾಷೆ ಮಾಡ್ತಿದ್ದೀಯಾ?

ಹೇರಾಮ್ : ಅವೆಲ್ಲಾ ನನಗ್ಯಾಕೆ? ಅವು ಹಿಂಸೆ ಪ್ರತಿಷ್ಟೆಯ ಸಂಕೇತಗಳು. ನನಗವುಗಳ ಅಗತ್ಯವೂ ಇಲ್ಲ, ಅನಿವಾರ್ಯವೂ ಅಲ್ಲ. ಬೇಕಾಗಿಯೂ ಇಲ್ಲ.

ಜೈ ಶ್ರೀರಾಮ : ಏನು ಹೇಳ್ತಿದ್ದೀಯಾ? ಧರ್ಮ ರಕ್ಷಣೆಗಾಗಿ ಇವೆಲ್ಲಾ ಬೇಕೇ ಬೇಕಲ್ವಾ. ಧರ್ಮೋ ರಕ್ಷತಿ ರಕ್ಷಿತಃ ಅನ್ನೋದು ಕೇಳಿಲ್ವಾ..

ಹೇರಾಮ್ : ಹೌದು, ಆದರೆ ಅದು ಸಮಸ್ತ ಮಾನವ ಧರ್ಮ ರಕ್ಷಣೆ ಆಗಿದ್ದರೆ ನನ್ನ ಅಭ್ಯಂತರವಿಲ್ಲ. ಮನುಜ ಧರ್ಮ ರಕ್ಷಣೆಗೆ ಮಾನವೀಯತೆ, ಕರುಣೆ, ದಯೆ ಇದ್ದರೆ ಸಾಕಲ್ವಾ? ಬೇರಾವ ಆಯುಧಗಳು ಬೇಕಿಲ್ಲಾ.

ಜೈ ಶ್ರೀರಾಮ : ನೀನ್ಯಾವನಯ್ಯಾ ಸಣಕಲ ರಾಮ. ಧರ್ಮ ರಕ್ಷಣೆ ಅಂದ್ರೆ ಸುಮ್ಮನೇನಾ? ಅನ್ಯ ಧರ್ಮೀಯರನ್ನ ನಾಶ ಮಾಡಬೇಕಲ್ವಾ? ಧರ್ಮದ್ರೋಹಿಗಳನ್ನ ಸಂಹಾರ ಮಾಡಲೇ ಬೇಕಲ್ವಾ?. ಅದಕ್ಕೆ ಈ ಆಯುಧಗಳು ಇರಲೇ ಬೇಕಲ್ವಾ?. ಇಲ್ಲಾ ಅಂದ್ರೆ ಈ ಜನರಿಗೆ ಭಯ ಭಕ್ತಿ ಅನ್ನೋದೇ ಇರೋದಿಲ್ಲ ಅಲ್ವಾ?

ಹೇರಾಮ : ಇರಬಹುದು, ಆದರೆ.. ಅನ್ಯ ಧರ್ಮೀಯರೂ ಮನುಷ್ಯರಲ್ವಾ? ನಿನ್ನದೇ ಧರ್ಮವನ್ನು ಪ್ರಶ್ನಿಸುವ ಸ್ವಧರ್ಮೀಯರೂ ಮಾನವರಲ್ವಾ?  ಮನುಷ್ಯತ್ವ ಉಳಿಸಲು ದಯೆ ಇರಬೇಕೆ ಹೊರತು ಭಯ ಹುಟ್ಟಿಸುವಂತಿರಬಾರದು. ಅಹಿಂಸೆ, ಶಾಂತಿ ಸಹಬಾಳ್ವೆ ಮನುಕುಲಕೆ ಇರಬೇಕಾದ ವರ. ಹಿಂಸೆ ಹಾಗೂ ಅದರಿಂದ ಹುಟ್ಟುವ ಅಶಾಂತಿ ಅಸಹನೆಗಳು ನೆಮ್ಮದಿ ನಾಶಕ್ಕೆ ಕಾರಣ ಅಲ್ವಾ? ಹೋಗಲಿ.. ಗಾಂಧಿಯವರ ಭಜನೆಯಲ್ಲಿರುವ  “ರಘುಪತಿ ರಾಘವ ರಾಜಾರಾಂ, ಪತೀತ ಪಾವನ ಸೀತಾರಾಂ”  ಕೇಳಿದ್ದೀಯಾ?

ಜೈ ಶ್ರೀರಾಮ : ಅದು ನನ್ನನ್ನು ಕುರಿತೇ ಹಾಡುವ ಭಜನೆ ಅಲ್ಲವೇ?

ಹೇರಾಮ್ : ಅಲ್ಲಾ.. ಅದರ ಮುಂದಿನ ಸಾಲು ಹೀಗಿದೆ ಕೇಳು. ” ಈಶ್ವರ ಅಲ್ಲಾ ತೇರೆ ನಾಮ್, ಸಬಕೋ ಸನ್ಮತಿ ದೇ ಭಗವಾನ್”

ಜೈ ಶ್ರೀರಾಮ : ಇದರಲ್ಲಿ ನಮ್ಮ ಧರ್ಮದವರಲ್ಲದ ಅಲ್ಲಾನನ್ನು ಯಾಕೆ ಸೇರಿಸಿದ್ದಾರೆ?. ಇದನ್ನು ನಾನು ಒಪ್ಪಲಾರೆ. ಇದು ಹಿಂದೂ ಧರ್ಮಕ್ಕೆ ಎಸಗಿದ ಅಪಚಾರ.

ಹೇರಾಮ್ : ಇಲ್ಲೇ ಇರುವುದು ನನಗೂ ನಿನಗೂ ವ್ಯತ್ಯಾಸ. ಎಲ್ಲ ಧರ್ಮೀಯರಿಗೂ ಸನ್ಮತಿ  ಕೊಡಬೇಕೆಂದು ಗಾಂಧಿಯವರು ನನ್ನನ್ನು ಅಂದರೆ ಹೇರಾಮನನ್ನು ಕೇಳಿಕೊಳ್ಳುತ್ತಿದ್ದಾರೆ. ಆದರೆ ಅನ್ಯ ಧರ್ಮದ ದೇವರನ್ನೇ ಒಪ್ಪಿಕೊಳ್ಳದ ನೀನು ರಘುಪತಿ  ಆಗಲು ಸಾಧ್ಯವೇ ಇಲ್ಲ. ವೈದಿಕಪತಿ ಎನ್ನಬಹುದೇನೋ?

ಜೈ ಶ್ರೀರಾಮ : ಯಾರು ಏನಾದರೂ ಅಂದುಕೊಳ್ಳಲಿ. ಹಿಂದೂ ಧರ್ಮ ರಕ್ಷಣೆ ನನ್ನ ಜವಾಬ್ದಾರಿ. ಅದನ್ನು ಹಿಂಸೆಯಿಂದಾದರೂ ಸಾಧಿಸಲೇಬೇಕಿದೆ. ಜೈ ಶ್ರೀರಾಮನ ಭಕ್ತ ಗಣ ಅದನ್ನೇ ಮಾಡುತ್ತಿದ್ದಾರೆ. ಅದಕ್ಕೆ ನನ್ನ ಹೆಸರು ಹೇಳುತ್ತಿದ್ದಾರೆ. ಗುಡಿ ಕಟ್ಟಿ ಮೆರೆಸುತ್ತಿದ್ದಾರೆ.

ಹೇರಾಮ್ : ಯಾರು ಏನಾದರೂ ಮಾಡಲಿ. ಆದರೆ ದೇವರಾದ ನಿನಗೆ ಹಿಂಸೆ ಮಹಾ ಪಾಪ ಎನ್ನುವ ಅರಿವಿಲ್ಲವೇ?. ಎಷ್ಟೇ ಆದರೂ ವೈದಿಕರ ಮಾತು ಕೇಳಿ ತಪಸ್ಸಿಗೆ ಕುಳಿತನೆಂದು ಶೂದ್ರ ಶಂಭೂಕನನ್ನು ಕೊಂದವ ನೀನೇ ಅಲ್ಲವೇ?  ಮರೆಯಲ್ಲಿ ನಿಂತು ಮಹಾ ವೀರ ವಾಲಿಯನ್ನು ಹತ್ಯೆ ಮಾಡಿದವನೂ ನೀನೇ ಅಲ್ಲವೇ? ಪ್ರೇಮ ಬಯಸಿ ಬಂದ ಶೂರ್ಪನಖಿಯ ಮೂಗು ಮೊಲೆ ಕೊಯ್ದಿದ್ದಕ್ಕೆ ಸಾಕ್ಷಿ ನೀನೇ ಅಲ್ಲವೇ?. ಅದೆಷ್ಟು ಅರಣ್ಯವಾಸಿಗಳನ್ನು ರಕ್ಕಸರು ಎಂದು ಆರೋಪಿಸಿ ರಕ್ತ ಹರಿಸಿದ್ದು ನೀನೇ ಅಲ್ಲವೇ? ಇದೆಲ್ಲದಕ್ಕೂ ಧರ್ಮ ರಕ್ಷಣೆ ಎನ್ನುವ ಗುರಾಣಿ ಬೇರೆ…

ಜೈ ಶ್ರೀರಾಮ : ಈ ನಿನ್ನ ಪ್ರವಚನ ಸಾಕು. ಇಲ್ಲಿ ನಿನ್ನ ಈ ಉಪದೇಶ ಯಾರಿಗೂ ಬೇಕಿಲ್ಲ. ಇಲ್ಲಿ ಎಲ್ಲರಿಗೂ ಧರ್ಮ ಮುಖ್ಯ. ಧರ್ಮ ರಕ್ಷಣೆ ಎಲ್ಲರ ಕರ್ತವ್ಯ. ಹಿಂದೂ ಧರ್ಮ ರಕ್ಷಣೆ ಮಾಡುವವರ ರಕ್ಷಣೆ ಮಾಡುವುದು ದೇವರಾದ ನನ್ನ ಕೆಲಸ.

ಹೇರಾಮ : ರಕ್ಷಣೆ ?.. ರಕ್ಷಣೆಯ ಹೆಸರಲ್ಲಿ ಭಯ ಹುಟ್ಟಿಸುವ ರಕ್ಕಸ ಪ್ರವೃತ್ತಿ ಖಂಡಿತಾ ಸಮರ್ಥನೀಯವಲ್ಲ. ದಯೆ ಇಲ್ಲದ ಧರ್ಮ ಅದ್ಯಾವುದಯ್ಯಾ?

ಜೈ ಶ್ರೀರಾಮ : ನೋಡು.. ಈ ದಯೆ ದಾಕ್ಷಿಣ್ಯಗಳು ಧರ್ಮ ರಕ್ಷಣೆಯ ಕಾಯಕದಲ್ಲಿ ಕೆಲಸಕ್ಕೆ ಬಾರದ ಮಾತುಗಳು. ಭಯಾ.. ಭಯ ಇದ್ದಲ್ಲಿ ಭಕ್ತಿ, ಭಕ್ತಿ ಇದ್ದಲ್ಲಿ ಭಕ್ತ. ಭಕ್ತಗಣ ಹೆಚ್ಚಿದಷ್ಟೂ ನಾನು ಸರ್ವಶಕ್ತ. ಇಷ್ಟಕ್ಕೂ ನೀನ್ಯಾರು? ನನ್ನದೇ ರೂಪವಾದರೂ ನಿನ್ನ ಗುಣ ಬೇರೆಯಾಗಿದೆಯಲ್ಲಾ? ನಾನು ಭಯ ಅಂದರೆ ನೀನು ದಯೆ ಅಂತೀಯಾ? ನಾನು ಹಿಂಸೆ ಅಂದರೆ ನೀನು ಅಹಿಂಸೆ ಅಂತೀಯಾ. ನಾನು ಹಿಂದೂ ಧರ್ಮ ರಕ್ಷಣೆ ಅಂದರೆ ನೀನು ಮಾನವ ಧರ್ಮ ಸಂರಕ್ಷಣೆ ಅಂತೀಯಾ? ಯಾಕೆ ಈ ವೈರುಧ್ಯ.. ಛದ್ಮವೇಷಧಾರಿಯಾದ ನೀನು ಯಾರೆಂದು ಹೇಳದೆ ಇದ್ದರೆ ಈ ನನ್ನ ಶಸ್ತ್ರಗಳನ್ನು ಪ್ರಯೋಗಿಸಬೇಕಾಗುತ್ತದೆ.

ಹೇರಾಮ್ : ಶಾಂತಿ.. ಶಾಂತಿ ಇರಲಿ. ನಾನೂ ರಾಮನೇ.. ಮಹಾತ್ಮಾ ಗಾಂಧಿಯವರ ರಾಮ. ಹೇರಾಮ. ಅಹಿಂಸೆ ದಯೆ ಕರುಣೆಗಳನ್ನೇ ಗಾಂಧಿ ಆಚರಿಸಿದರು. ಅದನ್ನೇ ನನ್ನಲ್ಲಿ   ಆವರಿಸಿದರು. ಅವರವರ ಭಾವಕ್ಕೆ ಅವರವರ ತೆರನಾಗಿ ದೇವರೆಂಬುದು ಕವಿವಾಣಿ. ಯಾರು ಹೇಗಿರುತ್ತಾರೋ ಹಾಗೆಯೇ ಅವರ ದೇವರೂ ರೂಪುಗೊಳ್ಳುತ್ತಾನೆ. ರೂಹು ರೂಪಗಳಿಲ್ಲದ ದೇವರನ್ನು ಜನರು ತಮ್ಮ ಮನೋಭಾವಕ್ಕೆ ತಕ್ಕಂತೆ ಕಲ್ಪಿಸಿಕೊಳ್ಳುತ್ತಾರೆ ಅಷ್ಟೇ..

ಜೈ ಶ್ರೀರಾಮ : ಅಷ್ಟೇ ಆದರೂ ಸ್ಪಷ್ಟವಾಗಿ ಕೇಳು. ಈಗ ಹಿಂದುತ್ವ ರಕ್ಷಕರುಗಳು ನನ್ನನ್ನು ಅಂದರೆ ಜೈ ಶ್ರೀರಾಮನನ್ನು  ಹಿಂದೂ ಧರ್ಮ ರಕ್ಷಕ ಎಂದು ವಿಜೃಂಭಿಸುತ್ತಿದ್ದಾರೆ. ಬೃಹತ್ ದೇವಾಲಯ ಕಟ್ಟಿ ಕುಣಿದಾಡುತ್ತಿದ್ದಾರೆ. ಅದೆಂತುಹುದೇ ಇರಲಿ ಅಂತವರ ಧರ್ಮ ರಕ್ಷಣೆ ಮಾಡುವ ಹೊಣೆ ನನ್ನದಾಗಿದೆ.

ಹೇರಾಮ : ಇರಬಹುದು.. ಆದರೆ ನಿನ್ನ ಹೆಸರಲ್ಲಿ ಆ ಧರ್ಮರಕ್ಷಕರುಗಳು ಹುಟ್ಟಿಸುತ್ತಿರುವ ಭಯ, ಮಾಡುತ್ತಿರುವ ಹಿಂಸೆಗಳೆಲ್ಲಾ ನಿನ್ನ ಲೆಕ್ಕಕ್ಕೆ ಸೇರುತ್ತವೆ. ಅಧಿಕಾರ ಪ್ರತಿಷ್ಠಾಪನೆ ಹಾಗೂ ತಮ್ಮ ವೈದಿಕ ಧರ್ಮ ಸಿದ್ಧಾಂತದ ಪ್ರತಿಪಾದನೆಗಾಗಿ ಜೈ ಶ್ರೀರಾಮನ ಹೆಸರನ್ನು ಬಳಸಿ ಜನರಲ್ಲಿ ಭಾವೋದ್ರೇಕ ಹುಟ್ಟಿಸಲು ಯತ್ನಿಸುತ್ತಿದ್ದಾರೆ ಎಂಬ ಅರಿವು ನಿನಗಿದೆಯೇ.

ಜೈ ಶ್ರೀರಾಮ : ಇಲ್ಲಿ ಅರಿವು ಉಳಿವು ಅಳಿವಿನ ಪ್ರಶ್ನೆಯೇ ಇಲ್ಲ. ನನಗೆ ಅಂತಾ ಯಾವ ಸ್ವಂತ ಅಸ್ತಿತ್ವವೂ ಇಲ್ಲ. ಭಕ್ತರು ಹೇಗಿರುತ್ತಾರೋ ಹಾಗೆಯೇ ಭಗವಂತ ಇರಬೇಕಾದ ಅನಿವಾರ್ಯತೆ ಇದೆ. ನನ್ನ ಅಸ್ತಿತ್ವವೂ ಕೂಡಾ ಭಕ್ತರ ನಂಬಿಕೆಯ ಮೇಲೆ ನಿಂತಿದೆ. ಹೀಗಾಗಿ ನಾನೀಗ ಮರ್ಯಾದಾ ಪುರುಷೋತ್ತಮ ಪ್ರಜಾಪಾಲಕ ರಾಮನಲ್ಲ, ಸೀತಾರಾಮನೂ ಅಲ್ಲ.. ನಾನೀಗ ಜೈ ಶ್ರೀರಾಮ. ಅಂದರೆ ನಾಥೂರಾಮ.. ನನ್ನಲ್ಲಿ ಗಾಂಧಿ ಹಂತಕ ನಾಥೂರಾಮನನ್ನು ಕಾಣುವ ವರ್ಗವೊಂದು ಅಧಿಕಾರದಲ್ಲಿರುವಾಗ ನಾನು ತಾನೇ ಏನು ಮಾಡಲು ಸಾಧ್ಯ? ಗಾಂಧಿ ರಾಮನಾದ ನೀನೂ ಸಹ ನನ್ನ ಸ್ತುತಿ ಮಾಡಲೇಬೇಕು. ಅಹಿಂಸೆ ಕರುಣೆ ಎಂದರೆ ಗಾಂಧಿಗೆ ಬಂದ ಗತಿಯೇ ನಿನಗೂ ಬರುತ್ತದೆ ಹುಷಾರು.

ಹೇರಾಮ : ನಿನ್ನ ಬೆದರಿಕೆಗೆ ನಾನು ಬಗ್ಗುವವನಲ್ಲ. ಗಾಂಧಿಯವರ ತತ್ವ ಸಿದ್ಧಾಂತವೇ ನನ್ನದು. ಯಾಕೆಂದರೆ ನಾನು ಜೈ ಶ್ರೀರಾಮನೂ ಅಲ್ಲಾ, ನಾಥೂರಾಮನೂ ಅಲ್ಲಾ. ನಾನು ಹೇರಾಮ.

ಜೈ ಶ್ರೀರಾಮ : ಹಿಂದೂ ಧರ್ಮ ರಕ್ಷಣೆಯ ಕ್ಷೇತ್ರ ಕಾರ್ಯದಲ್ಲಿ ನಿನ್ನಂತವರಿಗೆ ಅಸ್ತಿತ್ವ ಇಲ್ಲಾ. ಮೊದಲು ಜೈಶ್ರೀರಾಂ ಎಂದು ಹೇಳಿ ನನ್ನನ್ನು ಆರಾಧಿಸು. ಇಲ್ಲವಾದರೆ ಸರ್ವನಾಶಕ್ಕೆ ಸಿದ್ಧನಾಗು.

ಹೇರಾಮ : ಅದೆಂದಿಗೂ ಸಾಧ್ಯವಿಲ್ಲ ಬಿಡು. ಹಿಂಸೆ ಧ್ವಂಸಗಳಿಂದ ಧರ್ಮ ರಕ್ಷಣೆ ಮಾಡುತ್ತೇನೆನ್ನುವ ಮನಸ್ಥಿತಿಗೆ ನನ್ನ ಧಿಕ್ಕಾರ. ಅಹಿಂಸೆ ಒಂದೇ ಎಲ್ಲರನ್ನೂ ಒಳಗೊಳ್ಳುವ ಏಕೈಕ ಮಾರ್ಗ.

ಜೈ ಶ್ರೀರಾಮ : ಓ ಹಾಗಾ, ( ಬಿಲ್ಲನ್ನೇರಿಸಿ ಬಾಣ ಬಿಡುತ್ತಾ). ಹಾಗಾದರೆ ತಗೋ ನಿನ್ನ ಅಹಿಂಸೆಗೆ ಈ ಬಾಣ. ನಿನ್ನ ಕರುಣೆಗೆ ಇನ್ನೊಂದು ಬಾಣ. ದಯೆಗೆ ಮತ್ತೊಂದು ಬಾಣ. ಇದ್ದರೆ ಒಬ್ಬನೇ ರಾಮನಿರಬೇಕು, ಅವನು ಜೈ ಶ್ರೀರಾಮನೇ ಆಗಿರಬೇಕು. ಹೇರಾಮ ಅಂತ್ಯಗೊಳ್ಳಲೇಬೇಕು. ತಗೋ ಶಾಂತಿಗಾಗಿ  ಇನ್ನೊಂದು ಬಾಣ.

ಹೇರಾಮ : (ಗಾಂಧಿಯಂತೆ ಕೆಳಕ್ಕುರುಳಿ ಬೀಳುತ್ತಾ) ಹೇರಾಮ.. ಹೇರಾಮ.. ಇಲ್ಲಿ ಕೇಳು ಜೈರಾಮಾ. ನಿನ್ನ ಅಧಿಕಾರದಿಂದ, ನಿನ್ನ ಅಹಂಕಾರದಿಂದ ಹೇರಾಮನನ್ನು ತಾತ್ಕಾಲಿಕವಾಗಿ ತಡೆಯಬಹುದೇ ಹೊರತು ನಾಶ ಮಾಡಲು ಸಾಧ್ಯವಿಲ್ಲ. ಗಾಂಧಿಯನ್ನು ಕೊಂದಿರಬಹುದು ಆದರೆ ಆ ಮಹಾತ್ಮನ ತತ್ವ ಸಿದ್ಧಾಂತ ಆದರ್ಶಗಳನ್ನು ನಾಶ ಮಾಡಲು ಸಾಧ್ಯವೇ ಇಲ್ಲ. ಗೋಡ್ಸೆಗಳ ಅಟ್ಟಹಾಸ ಮೆಟ್ಟಿನಿಲ್ಲಲು ಗಾಂಧಿ ಮತ್ತೆ ಮತ್ತೆ ಜನರ ಮನದಲ್ಲಿ ಹುಟ್ಟುತ್ತಲೇ ಇರುತ್ತಾನೆ. ಜೈ ಶ್ರೀರಾಮನ ಹಿಂಸೆಯನ್ನು ಮಟ್ಟಹಾಕಲು ಅಹಿಂಸಾವಾದಿ ಹೇರಾಮ ಮರುಸೃಷ್ಟಿ ಆಗುತ್ತಲೇ ಇರುತ್ತಾನೆ. ಮನುಕುಲಕೆ ಶಾಂತಿ ಬೇಕಿದೆ, ಜನಕುಲಕೆ ನೆಮ್ಮದಿ ಅಗತ್ಯವಿದೆ. ಹಿಂಸೆಗೂ ಅಂತ್ಯವಿದೆ. ಅಹಿಂಸೆ ಗೆಲ್ಲಲೇ ಬೇಕಿದೆ. ಹೇರಾಮ.. ಹೇರಾಮ್. ( ಎನ್ನುತ್ತಾ ಧರಾಶಾಹಿಯಾಗುತ್ತಾನೆ. ಜೈರಾಮ ಗಹಗಹಿಸಿ ನಗುತ್ತಾನೆ)

ಶಶಿಕಾಂತ ಯಡಹಳ್ಳಿ

ರಂಗಕರ್ಮಿ

ಇದನ್ನೂ ಓದಿ- ಗಾಂಧಿ ಕೈಗೆ ಆರೆಸ್ಸೆಸ್ ಕೋಲು; ಅಹಿಂಸೆಗೆ ಒಡ್ಡಿದ ಸವಾಲು

More articles

Latest article

Most read