ಆರ್‌ಎಸ್‌ಎಸ್ ಅಂಚೆ ಚೀಟಿ, ನಾಣ್ಯ ಬಿಡುಗಡೆ: ಸಂವಿಧಾನಕ್ಕೆ ಮಾಡಿದ ಅಪಚಾರ: ಸಿಪಿಐ(ಎಂ) ಖಂಡನೆ

Most read

ನವದೆಹಲಿ: ಆರ್‌ಎಸ್‌ಎಸ್ ಸ್ಥಾಪನೆಯ 100 ನೇ ವಾರ್ಷಿಕೋತ್ಸವವನ್ನು ಆಚರಿಸಲು ಪ್ರಧಾನ ಮಂತ್ರಿ ಮೋದಿ ಅವರು ಅಂಚೆ ಚೀಟಿ ಮತ್ತು 100 ರೂಪಾಯಿ ನಾಣ್ಯವನ್ನು ಬಿಡುಗಡೆ ಮಾಡಿರುವುದು  ಎಂದಿಗೂ ಒಪ್ಪಿಕೊಂಡಿರದ  ಭಾರತದ ಸಂವಿಧಾನಕ್ಕೆ ಒಂದು ಗಂಭೀರ ಗಾಯ ಮತ್ತು ಅವಮಾನವಾಗಿದೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖಂಡಿಸಿದೆ. 

ಅಧಿಕೃತ ನಾಣ್ಯವೊಂದು ಆರೆಸ್ಸೆಸ್‍ನ ಹಿಂದುತ್ವ ರಾಷ್ಟ್ರ ಎಂಬ ಸಂಕುಚಿತ ಪಂಥವಾದೀ ಪರಿಕಲ್ಪನೆಯ ಸಂಕೇತವಾಗಿರುವ “ಭಾರತ ಮಾತಾ” ಚಿತ್ರವನ್ನು ಆರೆಸ್ಸೆಸ್‍ ಪ್ರಚುರಪಡಿಸಿದ ಒಂದು ಹಿಂದೂ ದೇವತೆಯ “ಭಾರತ ಮಾತಾ” ಚಿತ್ರವನ್ನು ನಕಲಿಸುವುದು ಅತ್ಯಂತ ಆಕ್ಷೇಪಾರ್ಹ ಸಂಗತಿ. ಅಂಚೆ ಚೀಟಿಯೂ 1963 ರ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ಸಮವಸ್ತ್ರ ಧರಿಸಿದ ಆರೆಸ್ಸೆಸ್‍ ಸ್ವಯಂಸೇವಕರನ್ನು ತೋರಿಸಿರುವುದು ಕೂಡ ಇತಿಹಾಸವನ್ನು ಸುಳ್ಳಾಗಿಸಿದೆ. ಇದು ಭಾರತ-ಚೀನಾ ಯುದ್ಧದ ಸಮಯದಲ್ಲಿ ಆರೆಸ್ಸೆಸ್‍ನ ದೇಶಭಕ್ತಿಯನ್ನು ಗುರುತಿಸಿ ನೆಹರು 1963 ರ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು ಅದನ್ನು ಆಹ್ವಾನಿಸಿದ್ದರು ಎಂಬ ಸುಳ್ಳನ್ನು ಆಧರಿಸಿದೆ. ಏಕೆಂದರೆ  1963 ರ ಗಣರಾಜ್ಯೋತ್ಸವ ಮೆರವಣಿಗೆ ಒಂದು ಲಕ್ಷಕ್ಕೂ ಹೆಚ್ಚು ನಾಗರಿಕರ ಒಂದು ಬೃಹತ್ ಸಭೆಯೇ ಆಗಿತ್ತು ಎಂದು ಪುರಾವೆಗಳ ಮೂಲಕ ತೋರಿಸಲಾಗಿದೆ. ಅದರಲ್ಲಿ ಸಮವಸ್ತ್ರ ಧರಿಸಿದ ಆರೆಸ್ಸೆಸ್‍ ಸ್ವಯಂಸೇವಕರ ಉಪಸ್ಥಿತಿಯೇನಾದರೂ ಇದ್ದಿದ್ದರೆ ಅದು ಆಕಸ್ಮಿಕವಷ್ಟೇ,  ಆ ಬಗ್ಗೆ ವರದಿಯೇನೂ ಆಗಿಲ್ಲ ಎಂದು ಸಿಪಿಐ(ಎಂ) ಹೇಳಿದೆ.

ಆರೆಸ್ಸೆಸ್‌ನ ನಾಚಿಕೆಗೇಡಿನ ಪಾತ್ರವನ್ನು ಮರೆಮಾಚುವುದಕ್ಕಾಗಿಯೇ ಈ ಸಂಪೂರ್ಣ ಕಸರತ್ತು. ಏಕೆಂದರೆ ಅದು ಸ್ವಾತಂತ್ರ್ಯ ಹೋರಾಟದಿಂದ ದೂರವಿತ್ತು. ಮಾತ್ರವಲ್ಲದೆ, ವಾಸ್ತವವಾಗಿ ಅದು ಬ್ರಿಟಿಷರ ಒಡೆದು ಆಳುವ ತಂತ್ರವನ್ನು ಬಲಪಡಿಸಿತು. ಈ ಮೂಲಕ ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಹೋರಾಟದ ನಿರ್ಣಾಯಕ ಅಂಶವಾಗಿದ್ದ ಭಾರತದ ಜನತೆಯ ಐಕ್ಯತೆಯನ್ನು ದುರ್ಬಲಗೊಳಿಸಲು ಅದು ಪ್ರಯತ್ನಿಸಿತು. ಸ್ವತಂತ್ರ ಭಾರತದ ಇತಿಹಾಸವು ಅತ್ಯಂತ ಹೀನ ಕೋಮು ಹಿಂಸಾಚಾರವನ್ನು ಕಂಡಿದೆ, ಇದರಲ್ಲಿ ಆರೆಸ್ಸೆಸ್‍ನ ಪಾತ್ರವನ್ನು ಅಧಿಕೃತ ತನಿಖಾ ಆಯೋಗಗಳ ಹಲವಾರು ವರದಿಗಳಲ್ಲಿ ವಿವರಿಸಲಾಗಿದೆ.

ಇಂದು ಆರೆಸ್ಸೆಸ್‍ ಮತ್ತು ಅದರ ಪರಿವಾರವು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಗುರಿ ಮಾಡುವುದನ್ನು ಮುಂದುವರೆಸಿದೆ ಮತ್ತು ಮನುವಾದಿ ಸಿದ್ಧಾಂತಗಳ ಪ್ರಚಾರದ ಮೂಲಕ ಸಮಾಜದ ಅಂಚಿನಲ್ಲಿರುವ ವಿಭಾಗಗಳನ್ನು ಕೂಡ ಗುರಿಯಾಗಿಸುತ್ತಿದೆ. ಇದು ಆರೆಸ್ಸೆಸ್‍ನ ವಾಸ್ತವ ಚರಿತ್ರೆ, ಪ್ರಧಾನ ಮಂತ್ರಿಗಳು ಇದನ್ನು ಮರೆಮಾಚಲು ತಮ್ಮ ಸ್ಥಾನವನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಪ್ರಯತ್ನಿಸುತ್ತಿದ್ದಾರೆ. ಹಾಗೆ ಮಾಡುವುದರಿಂದ, ಅವರು ತಾವು ಹೊಂದಿರುವ ಸಾಂವಿಧಾನಿಕ ಸ್ಥಾನದ ಘನತೆಯನ್ನು ಕೆಳಮಟ್ಟಕ್ಕೆ ಇಳಿಸಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಖೇದ ವ್ಯಕ್ತಪಡಿಸಿದೆ.

More articles

Latest article