ಅವಧಿ ಪೂರ್ಣಗೊಳಿಸುತ್ತೇನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ

Most read

ಮೈಸೂರು: ಮುಂದಿನ ಎರಡೂವರೆ ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೇಳಿದರು. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ವರ್ಷ ದಸರಾ ಜಂಬೂಸವಾರಿಯಲ್ಲಿ ಪುಷ್ಪಾರ್ಚನೆ ಮಾಡಿಕೊಂಡು ಬಂದಿದ್ದೇನೆ. ಮುಂದಿನ ವರ್ಷವೂ ನಾನೇ ಪುಷ್ಪಾರ್ಚನೆ ಮಾಡುತ್ತೇನೆ ಎಂದರು.

ನಾನು ಎರಡನೇ ಬಾರಿ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಬಿಜಪಿಯವರು ಹೇಳುತ್ತಲೇ ಬಂದರು. ಬಜೆಟ್‌ ಅನ್ನೂ ಮಂಡಿಸುವುದಿಲ್ಲ ಎಂದ ರಾಜ್ಯದುದ್ದಗಲಕ್ಕೂ ಸಾರಿದರು. ಆದರೆ, ನಾನು ಸಿಎಂ ಆಗಿಲ್ಲವೇ? ನನ್ನ ಕಾರಿನ ಮೇಲೆ ಕಾಗೆ ಕೂತಿದ್ದಕ್ಕೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು. ಆದರೆ, ಅವರ ನಿರೀಕ್ಷೆಯಂತೆ ಯಾವುದೂ ನಡೆದಿಲ್ಲ. ನವೆಂಬರ್ ನಲ್ಲಿ ಕ್ರಾಂತಿ ಸಂಭವಿಸುತ್ತದೆ. ಸಿಎಂ ಬದಲಾಗುತ್ತಾರೆ ಎಂದು ತುಂಬಾ ಮಂದಿ ಹೇಳುತ್ತಾರೆ ಎಂದರು.

ನವೆಂಬರ್‌ ಗೆ ನಮ್ಮ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತದೆ. ಹಾಗಾಗಿ ಸಿಎಂ ಬದಲಾಗುತ್ತಾರೆ ಎಂದು ಮಾತನಾಡುತ್ತಾರೆ. ಆದರೆ ನಾನೂ ಸೇರಿದಂತೆ ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರಬೇಕು. ಅವರ ತೀರ್ಮಾನದಂತೆ ಎಲ್ಲರೂ ನಡೆದುಕೊಳ್ಳಬೇಕು, ನಡೆದುಕೊಳ್ಳುತ್ತೇವೆ ಎಂದು ಹೇಳಿದರು.

More articles

Latest article