ಕ್ಷಮೆ ಕೇಳಿದ್ರೆ ಅರ್ಜಿ ಪರಿಗಣನೆ; ಕಮಲ್‌ ಹಾಸನ್‌ ಗೆ ಹೈಕೋರ್ಟ್‌ ತಾಕೀತು

Most read

ಬೆಂಗಳೂರು: ತಮಿಳಿನಿಂದ ಕನ್ನಡ ಹುಟ್ಟಿದೆ ಎಂಬ ಹೇಳಿಕೆ ನೀಡಿ ಕರ್ನಾಟಕದಲ್ಲಿ ತೀವ್ರ ಟೀಕೆಗೆ ಗುರಿಯಾಗಿರುವ ನಟ ಕಮಲ್​ ಹಾಸನ್​ ಅವರಿಗೆ ಕ್ಷಮೆ ಕೇಳಲು ಹೈಕೋರ್ಟ್ ಮೌಖಿಕವಾಗಿ ತಾಕೀತು ಮಾಡಿದೆ.

ಕಮಲ್‌ ನಟನೆಯ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ರಾಜ್ಯದಲ್ಲಿ ಪ್ರತಿರೋಧ ವ್ಯಕ್ತವಾದ ನಂತರ ಸಿನಿಮಾ ಬಿಡಗಡೆಗೆ ಅವಕಾಸ ಕೋರಿ ಕಮಲ್‌ ಹಾಸನ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ತಮ್ಮ ತಪ್ಪು ಹೇಳಿಕೆಗೆ ಕಮಲ್‌ ಹಾಸನ್‌ ಕ್ಷಮೆ ಕೇಳಿದರೆ ಮಾತ್ರ ಅರ್ಜಿ ಪರಿಗಣಿಸುತ್ತೇವೆ ಎಂದರು.

. ಯಾವುದೋ ಭಾಷೆಯಿಂದ ಇನ್ನೊಂದು ಭಾಷೆ ಹುಟ್ಟಿದೆ ಅಂದರೆ ಹೇಗೆ? ಕನ್ನಡ ಭಾಷೆ ತಮಿಳಿಂದ ಹುಟ್ಟಿದೆ ಎಂದು ಹೇಳಲು ಅವರೇನು ಇತಿಹಾಸಕಾರರೇ? ಈ ಹಿಂದೆ ರಾಜಾಜಿ ಅವರೂ ಇಂತಹುದೇ ಹೇಳೀಕೆ ನೀಡಿ ಕ್ಷಮೆ ಕೇಳಿದ್ದರು. ಇವತ್ತಿನ ಈ ಪರಿಸ್ಥಿತಿ ನಿರ್ಮಾಣಕ್ಕೆ ನೀವೇ ಕಾರಣ. ಕಮಲ್‌ ಹಾಸನ್ ಸಾಮಾನ್ಯ ವ್ಯಕ್ತಿ ಅಲ್ಲ, ಸಾರ್ವಜನಿಕವ್ಯಕ್ತಿ. ಅವರು ಮೊದಲು ಕ್ಷಮೆ ಕೇಳಲಿ, ಆಮೇಲೆ ಅರ್ಜಿ ಪರಿಗಣಿಸುತ್ತೇವೆ ಎಂದು ಸ್ಪಷ್ಟ ಮಾತುಗಳಲ್ಲಿ ಹೇಳಿದರು.

ಇದಕ್ಕೆ ಕಮಲ್ ಹಾಸನ್ ಪರ ವಕೀಲರು ಪ್ರತಿಕ್ರಿಯೆ ನೀಡಲು ಮಧ್ಯಾಹ್ನ 2.30ರವರೆಗೆ ಸಮಯಾವಕಾಶ ಕೋರಿದ್ದಾರೆ.

More articles

Latest article