ಬೆಂಗಳೂರಿನಿಂದ ಡ್ರಗ್ಸ್‌ ಕಳ್ಳಸಾಗಣೆ: ಕೇರಳದಲ್ಲಿ ಮಹಿಳೆ ಬಂಧನ

ಕೊಲ್ಲಂ (ಕೇರಳ): ಬೆಂಗಳೂರಿನಿಂದ ಸಿಂಥೆಟಿಕ್‌ ಡ್ರಗ್‌ ಎಂಡಿಎಂಎ ಕಳ್ಳಸಾಗಣೆ ಮಾಡುತ್ತಿದ್ದ ಅಂಚಲುಮೂಡು ನಿವಾಸಿ ಅನಿಲಾ ರವೀಂದ್ರನ್‌ ಅವರನ್ನುಕೇರಳದ ಕೊಲ್ಲಂನಲ್ಲಿ ಬಂಧಿಸಲಾಗಿದೆ ಎಂದು ಅಲ್ಲಿನ ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಅನಿಲಾ ಮಾದಕವಸ್ತು ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದಿದ್ದು ಶಿಕ್ಷೆ ಅನುಭವಿಸಿದ್ದರು.

ಬೆಂಗಳೂರಿನಿಂದ ಕಾರಿನಲ್ಲಿ ತೆರಳುತ್ತಿದ್ದ ಅನಿಲಾ ಅವರನ್ನು ನೀಂಡಕರ ಸೇತುವೆ ಸಮೀಪ ವಶಕ್ಕೆ ಪಡೆಯಲು ಶಕ್ತಿಕುಲಂಗರ ಪೊಲೀಸರು ಹಾಗೂ ಕೊಲ್ಲಂ ನಗರ ಪೊಲೀಸರ ಜಿಲ್ಲಾ ಮಾದಕದ್ರವ್ಯ ವಿರೋಧಿ ವಿಶೇಷ ಕಾರ್ಯಾಚರಣೆ ಪಡೆಯ ಸಿಬ್ಬಂದಿ ಪ್ರಯತ್ನಿಸಿದರು. ಆದರೆ ಕಾರು ಚಾಲಕ ಕಾರನ್ನು ವೇಗವಾಗಿ ಓಡಿಸುವ ಮೂಲಕ ಸ್ಥಳದಿಂದ ತಪ್ಪಿಸಿಕೊಂಡಿದ್ದ. ಆದರೂ  ಅನಿಲಾರನ್ನು ಬೆನ್ನಟ್ಟಿದ್ದ ಪೊಲೀಸರು, ಕಾರನ್ನು ತಡೆದು ಲಕ್ಷಾಂತರ ರೂಪಾಯಿ ಮೌಲ್ಯದ 90 ಗ್ರಾಂ ಎಂಡಿಎಂಎ ವಶಪಡಿಸಿಕೊಂಡಿದ್ದಾರೆ.

ಕಾರನ್ನು ತಪಾಸಣೆ ನಡೆಸಿದಾಗ 50 ಗ್ರಾಂ ಎಂಡಿಎಂಎ ಸಿಕ್ಕಿತ್ತು. ಅನಿಲಾರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಖಾಸಗಿ ಭಾಗಗಳಲ್ಲಿ ಅಡಗಿಸಿಟ್ಟಿದ್ದ 40 ಗ್ರಾಂ ಎಂಡಿಎಂಎ ಅಡಗಿಸಿಟ್ಟುಕೊಂಡಿದ್ದು ಪತ್ತೆಯಾಯಿತು. ಇದರ ನಿಖರ ಪ್ರಮಾಣವನ್ನು ಇನ್ನೂ ನಿರ್ಧರಿಸಲಾಗಿ‌ಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಾದಕವಸ್ತುವನ್ನು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡಲು ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.

More articles

Latest article

Most read