ಬಜೆಟ್ ಹೈಲೈಟ್ಸ್: ನೂತನ “ಜವಳಿ ನೀತಿ 2025-30” ಜಾರಿ; 2ಲಕ್ಷ ಉದ್ಯೋಗ ಸೃಷ್ಟಿ ಗುರಿ

Most read

ವಾಣಿಜ್ಯ ಮತ್ತು ಕೈಗಾರಿಕೆ

• ಕೈಗಾರಿಕೋದ್ಯಮಿಗಳ ಅನುಸರಣೆಯ ನಿಯಮಗಳು ಮತ್ತು ಷರತ್ತುಗಳ ಸರಳೀಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಉದ್ಯೋಗದಾತ ನಂಬಿಕೆ ವಿಧೇಯಕ ಹಾಗೂ ಕರ್ನಾಟಕ ಉದ್ಯೋಗದಾತ ಅನುಸರಣೆ ಜಾಲಬಂಧ ಮಸೂದೆಗಳ ಜಾರಿಗೆ ಕ್ರಮ.
• ರಾಜ್ಯ ಸರ್ಕಾರವು Karnataka Clean Mobility Policy 2025-30 ಯಡಿ 50 ಸಾವಿರ ಕೋಟಿ ರೂ. ಹೂಡಿಕೆ ಹಾಗೂ 1 ಲಕ್ಷ ಹೊಸ ಉದ್ಯೋಗ ಸೃಜನೆಯ ಗುರಿ.
• ಬೆಂಗಳೂರು ವಲಯದಲ್ಲಿ E.V. ವಾಹನಗಳ ತಯಾರಿಕೆ ಹಾಗೂ ಬಳಕೆ ಉತ್ತೇಜನಕ್ಕಾಗಿ ೨೫ ಕೋಟಿ ರೂ. ವೆಚ್ಚದಲ್ಲಿ ಅತ್ಯಾಧುನಿಕ E.V ಕ್ಲಸ್ಟರ್ ನಿರ್ಮಾಣ.
• 21911 ಕೋಟಿ ರೂ. ಹೂಡಿಕೆಯೊಂದಿಗೆ ಪ್ರಾರಂಭವಾದ Foxconn ಸಂಸ್ಥೆಗೆ ಮೊಬೈಲ್ ಫೋನ್ ಗಳ ಉತ್ಪಾದನಾ ಫಟಕಕ್ಕೆ 6970 ಕೋಟಿ ರೂ. ಮೌಲ್ಯದ ಪ್ರೋತ್ಸಾಹಕ ನೀಡಲು ಕ್ರಮ. ಇದರಿಂದ 50ಸಾವಿರ ಉದ್ಯೋಗ ಸೃಜನೆಯ ನಿರೀಕ್ಷೆ.
• ಉದ್ಯೋಗಸ್ಥ ಮಹಿಳೆಯರಿಗೆ ಕೋಲಾರ ಜಿಲ್ಲೆಯ ನರಸಾಪುರದಲ್ಲಿ ಹಾಗೂ ತುಮಕೂರು ಜಿಲ್ಲೆಯ ವಸಂತನರಸಾಪುರದ ಕೈಗಾರಿಕಾ ಪ್ರದೇಶದಲ್ಲಿ ಒಟ್ಟು 193 ಕೋಟಿ ರೂ. ವೆಚ್ಚದಲ್ಲಿ ಮಹಿಳಾ ವಸತಿ ನಿಲಯ ನಿರ್ಮಾಣ.
• ವಿಜಯಪುರದ ತಿಡಗುಂಡಿಯಲ್ಲಿ Plug & Play ಸೌಲಭ್ಯವಿರುವ Flat Factory ಗಳ ಸ್ಥಾಪನೆಗೆ ಕ್ರಮ.
• ಕೋಲಾರ ಜಿಲ್ಲೆಯ ಶಿವಾರಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ Multi Sector Net Zero Sustainability Industrial Park ಅಭಿವೃದ್ಧಿ.(ಪಿ.ಪಿ.ಪಿ)
• ಚೆನ್ನೈ-ಬೆಂಗಳೂರು ಇಂಡಸ್ಟ್ರಿಯಲ್‌ ಕಾರಿಡಾರ್‌ ಯೋಜನೆಯಡಿ ತುಮಕೂರು ಕೈಗಾರಿಕಾ ನೋಡ್‌ನಲ್ಲಿ ಜಪಾನೀಸ್‌ ಇಂಡಸ್ಟ್ರಿಯಲ್‌ ಪಾರ್ಕ್‌ ಸ್ಥಾಪನೆ.
• ಕರಕುಶಲಕರ್ಮಿಗಳಿಗೆ ಬಿದರಿ ಕಲಾಕೃತಿಗಳ ಹಾಗೂ ಶ್ರೀಗಂಧ ಕಲಾಕೃತಿಗಳ ಕಚ್ಚಾ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡಲು ಒಂದು ಕೋಟಿ ರೂ. ಅನುದಾನ
• MSME ಘಟಕಗಳಿಗೆ ವಿವಿಧ ಪ್ರೋತ್ಸಾಹಕಗಳನ್ನು ನೀಡಲು 185 ಕೋಟಿ ರೂ. ಹಂಚಿಕೆ.
• MSME ವಲಯಕ್ಕೆ ಅಗತ್ಯವಾದ ಬೆಂಬಲವನ್ನು ಒದಗಿಸುವ ಉದ್ದೇಶದಿಂದ ಪ್ರತ್ಯೇಕ MSME ನೀತಿ ಜಾರಿ.
• ಜಿ.ಎಸ್.ಟಿ / ರಾಯಧನ ವಂಚನೆಯನ್ನು ತಡೆಯಲು ಸಣ್ಣ ಖನಿಜಗಳಿಗೆ
ಇ-ವೇ ಬಿಲ್.
• ಸಕ್ಕರೆ ಕಾರ್ಖಾನೆಗಳ ವ್ಯಾಪ್ತಿಯಲ್ಲಿನ ರಸ್ತೆಗಳ ಅಭಿವೃದ್ಧಿಗಾಗಿ 2025-26ನೇ ಸಾಲಿಗೆ 20 ಕೋಟಿ ರೂ. ಅನುದಾನ
• ನೇಕಾರಿಕೆ ಉದ್ದಿಮೆಯನ್ನು ಉತ್ತೇಜಿಸಲು “ನೇಕಾರರ ಪ್ಯಾಕೇಜ್-2.0” ಜಾರಿ.
• 90,645 ನೇಕಾರರಿಗೆ ಉಚಿತ ವಿದ್ಯುತ್ ಹಾಗೂ ರಿಯಾಯಿತಿ ವಿದ್ಯುತ್ ಸವಲತ್ತನ್ನು ಒದಗಿಸಲು 100 ಕೋಟಿ ರೂ. ಅನುದಾನ
• ನೂತನ “ಜವಳಿ ನೀತಿ 2025-30” ಜಾರಿ; ಎರಡು ಲಕ್ಷ ಉದ್ಯೋಗ ಸೃಜನೆಯ ಗುರಿ
• ಪಿಪಿಪಿ ಮಾದರಿಯಲ್ಲಿ ೫ ಜವಳಿ ಪಾರ್ಕ್ ಅಭಿವೃದ್ಧಿ. PM-MITRA ಯೋಜನೆಯಡಿ ಕಲಬುರಗಿಯಲ್ಲಿ ಜವಳಿ ಪಾರ್ಕ್ ಸ್ಥಾಪನೆ.
ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ
• ಹೊಸ ಐ.ಟಿ ನೀತಿ ಜಾರಿಗೆ ಕ್ರಮ. ಕ್ಲೌಡ್ ಕಂಪ್ಯೂಟಿಂಗ್ (Cloud Computing) ಅಭಿವೃದ್ಧಿಗೆ ಒತ್ತು. 2 ಮತ್ತು 3ನೇ ಹಂತದ ನಗರಗಳಿಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರ ವಿಸ್ತರಣೆಗೆ ಆದ್ಯತೆ.
• ಬೆಂಗಳೂರು ಹೊರತು ಪಡಿಸಿ, ಇತರ ನಗರಗಳಗಲ್ಲೂ ನಾವೀನ್ಯತೆ ಮತ್ತು ಉದ್ಯಮಶೀಲತೆಯನ್ನು ಉತ್ತೇಜಿಸಲು, 1 ಸಾವಿರ ಕೋಟಿ ರೂ. ವೆಚ್ಚದ ಸ್ಥಳೀಯ ಆರ್ಥಿಕ ಆಕ್ಸಿಲರೇಟರ್ ಕಾರ್ಯಕ್ರಮ -LEAP ಪ್ರಾರಂಭ. ಈ ವರ್ಷ 200 ಕೋಟಿ ರೂ. ಅನುದಾನ. 5 ಲಕ್ಷ ಹೊಸ ಉದ್ಯೋಗ ಸೃಷ್ಟಿಯ ಗುರಿ.
• 50 ಕೋಟಿ ರೂ. ಹೂಡಿಕೆಯೊಂದಿಗೆ Centre for Applied AI for Tech Solutions (CATS) ಸ್ಥಾಪನೆ. ಈ ವರ್ಷ 7.5 ಕೋಟಿ ರೂ. ಅನುದಾನ.
• ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ
48 ಕೋಟಿ ರೂ. ವೆಚ್ಚದಲ್ಲಿ ಕ್ವಾಂಟಮ್ ರಿಸರ್ಚ್ ಪಾರ್ಕ್-ಹಂತ-2 ಸ್ಥಾಪನೆ.
• ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 2024-2029, MSME ಮತ್ತು ದೊಡ್ಡ ಉದ್ಯಮ ವಿಭಾಗದಲ್ಲಿ 1,500 ಕೋಟಿ ರೂ. ಹೂಡಿಕೆಯನ್ನು ಆಕರ್ಷಿಸುವ ಗುರಿ. ಪ್ರೋತ್ಸಾಹಕಗಳಿಗಾಗಿ 220 ಕೋಟಿ ರೂ.
• ಕಲಬುರಗಿಯಲ್ಲಿ Plug and Play ಮಾದರಿಯಲ್ಲಿ Flat Floor Factory ಸ್ಥಾಪನೆ.
• ಬೆಂಕಿ ಅನಾಹುತದಲ್ಲಿ ತೀವ್ರ ಹಾನಿ ಸಂಭವಿಸಿದ ಬೆಂಗಳೂರು ಬಯೋ-ಇನ್ನೋವೇಷನ್ ಸೆಂಟರ್‌ನ ಪುನರ್‌ ನಿರ್ಮಾಣಕ್ಕೆ ಒಟ್ಟು 57 ಕೋಟಿ ರೂ. ನೆರವು, ಈ ವರ್ಷ 20 ಕೋಟಿ ರೂ. ಅನುದಾನ
• ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಧಾರವಾಡದಲ್ಲಿ ಕಿಯೊನಿಕ್ಸ್ ಮೂಲಕ ಗ್ಲೋಬಲ್ ಇನ್ನೋವೇಶನ್ ಡಿಸ್ಟ್ರಿಕ್ಟ್ ಅಭಿವೃದ್ಧಿಗೆ ಕ್ರಮ.
• ಕೋಲಾರ, ರಾಮನಗರ, ಚಿತ್ರದುರ್ಗ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹೊಸ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳ ಸ್ಥಾಪನೆ; 9 ಕೋಟಿ ರೂ. ಅನುದಾನ.
• ಮೈಸೂರಿನ 150 ಎಕರೆ ಪ್ರದೇಶದಲ್ಲಿ ಪಿಸಿಬಿ ಪಾರ್ಕ್ ಅಭಿವೃದ್ಧಿ.
• ಭಾರತ ಸರ್ಕಾರ ಮತ್ತು ಕೈಗಾರಿಕೆಗಳ ಸಹಭಾಗಿತ್ವದಲ್ಲಿ 99 ಕೋಟಿ ರೂ. ವೆಚ್ಚದಲ್ಲಿ ಸೆನ್ಸರ್‌ಟೆಕ್ ಇನ್ನೋವೇಶನ್ ಹಬ್ ಸ್ಥಾಪನೆ.
• ಕಿಯೋನಿಕ್ಸ್ ವತಿಯಿಂದ ಮಂಗಳೂರು, ಹುಬ್ಬಳ್ಳಿ ಮತ್ತು ಬೆಳಗಾವಿಯಲ್ಲಿ ಪ್ಲಗ್-ಅಂಡ್-ಪ್ಲೇ ಸೌಲಭ್ಯಗಳಾಗಿ ಮೂರು ಹೊಸ ಜಾಗತಿಕ ತಂತ್ರಜ್ಞಾನ ಕೇಂದ್ರ(GTC)ಗಳ ಸ್ಥಾಪನೆ.
• ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಏಕೀಕರಣಕ್ಕಾಗಿ ಕಲಬುರ್ಗಿಯಲ್ಲಿ ಅಗ್ರಿ-ಟೆಕ್‌ ವೇಗವರ್ಧಕ ಸ್ಥಾಪನೆ.

More articles

Latest article