ನೆಲ್ಲಿದಡಿಗುತ್ತು ಜುಮಾದಿ ದೈವಸ್ಥಾನದ ಮೇಲೆ ಪ್ರಭುತ್ವ-ಕಾರ್ಪೋರೇಟ್-ಹಿಂದುತ್ವ ದಾಳಿ! – ‌13 ವರ್ಷಗಳ ಹೋರಾಟದ ಇತಿಹಾಸವೇನು ?

Most read

ಬಜಪೆ ಗ್ರಾಮದ ನೆಲ್ಲಿದಡಿಗುತ್ತಿನ ದೈವ ಕಾಂತೇರಿ ಜುಮಾದಿ ಸ್ಥಾನದಲ್ಲಿ ಮುಂದಿನ ದಿನಗಳಿಂದ ದೈವಾರಾಧನೆಗೆ ಅವಕಾಶ ನಿರಾಕರಿಸುವ ಮೂಲಕ ಸರಕಾರಿ ಸ್ವಾಮ್ಯದ  ಮಂಗಳೂರು ವಿಶೇಷ ಆರ್ಥಿಕ ವಲಯವು ತುಳುನಾಡಿನ ಜನರ ಧಾರ್ಮಿಕ ನಂಬಿಕೆಯನ್ನು ಘಾಸಿಗೊಳಿಸಿದೆ. ಸುಮಾರು 800 ವರ್ಷಕ್ಕೂ ಹಿಂದಿನ ದೈವದ ಆಚರಣೆ ಮತ್ತು ಆರಾಧನೆಗೆ ತಡೆಯೊಡ್ಡಿರುವುದರ ವಿರುದ್ಧ ಅಭಿಯಾನವೊಂದು ಶುರುವಾಗಿದೆ. ಈ ಅಭಿಯಾನಕ್ಕೆ ಸುದೀರ್ಘ ಇತಿಹಾಸವಿದೆ. ಜನರ  ಸಂಘಟಿತ ಪ್ರತಿರೋಧದಿಂದಾಗಿ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನ ಭೂ ಸ್ವಾಧೀನ ಪ್ರಕ್ರಿಯೆಯಿಂದ ಹೊರಗುಳಿಯಿತು. 2012 ರಿಂದ ಪ್ರಾರಂಭವಾದ ಹೋರಾಟ ಇನ್ನೂ ನಿಂತಿಲ್ಲ. ಈ 13 ವರ್ಷಗಳ ಹೋರಾಟದ ಇತಿಹಾಸವನ್ನು ಈ ಲೇಖನದಲ್ಲಿ ನೆನಪಿಸಿದ್ದಾರೆ ಪತ್ರಕರ್ತ ನವೀನ್‌ ಸೂರಿಂಜೆ.

2011-12 ನೇ ಇಸವಿಯಲ್ಲಿ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನವನ್ನು ಮಂಗಳೂರು ವಿಶೇಷ ಆರ್ಥಿಕ ವಲಯಕ್ಕಾಗಿ ತೆರವು ಗೊಳಿಸಬೇಕು ಎಂಬ ಒತ್ತಡಗಳು ಸರ್ಕಾರದಿಂದ ಪ್ರಾರಂಭವಾದವು. ಹೋರಾಟಗಾರ್ತಿ ವಿದ್ಯಾ ದಿನಕರ್ ನೇತೃತ್ವದ ಕೃಷಿ ಭೂಮಿ ಸಂರಕ್ಷಣಾ ಸಮಿತಿಯು ನೆಲ್ಲಿದಡಿ ಗುತ್ತು ರಕ್ಷಣೆಗೆ ನಿಂತಿತ್ತು. ಅದಾಗಲೇ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ದಿದ್ದ ಕೃಷಿ ಭೂಮಿ ಸಂರಕ್ಷಣಾ ಸಮಿತಿಯು 2035 ಎಕರೆ ಕೃಷಿ ಭೂಮಿಯನ್ನು ರೈತರಿಗೆ ಮರಳಿಸುವಲ್ಲಿ ಯಶಸ್ವಿಯಾಗಿತ್ತು. ಆದರೆ ಸುತ್ತಲೂ ಪೆಟ್ರೋಲಿಯಂ ಕೈಗಾರಿಕೆಗಳಿಂದ ಅವೃತ್ತವಾಗಿದ್ದ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನವನ್ನು ಉಳಿಸುವುದು ಸುಲಭ ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ನೆಲ್ಲಿದಡಿಗುತ್ತುವಿನ ಗುತ್ತಿನಾರ್ ಚೌಟರು ಮತ್ತು ಕುಟುಂಬದ ಜೊತೆ ಕೃಷಿ ಭೂಮಿ ಸಂರಕ್ಷಣಾ ಸಮಿತಿಯು ಬೆನ್ನೆಲುಬಾಗಿ ನಿಂತಿತ್ತು.

ನೆಲ್ಲಿದಡಿಗುತ್ತು ಜುಮಾದಿ ದೈವಸ್ಥಾನ

ಹೋರಾಟಗಾರ್ತಿ ವಿದ್ಯಾ ದಿನಕರ್ ಅರೆಸ್ಟ್

ನೆಲ್ಲಿದಡಿಗುತ್ತು ಜುಮಾದಿ ದೈವಸ್ಥಾನಕ್ಕೆ ದಾಳಿ

ಅಂದೇ ವಿದ್ಯಾದಿನಕರ್ ಸೂಚನೆಯಂತೆ ನಾವೆಲ್ಲರೂ ಬಜಪೆ ಪೊಲೀಸ್ ಠಾಣೆಗೆ ತೆರಳಿದೆವು.

ಹಿಂದುತ್ವ ಮತ್ತು ಕಾರ್ಪೋರೇಟ್ ಮೈತ್ರಿ

ಬಂಡವಾಳಶಾಹಿ-ಪ್ರಭುತ್ವ-ಹಿಂದುತ್ವ ಗೂಂಡಾಗಳಿಂದ ಹಲ್ಲೆಗೆ ಒಳಗಾಗಿದ್ದ ನೆಲ್ಲಿದಡಿ ಗುತ್ತಿನ ಗುತ್ತಿನಾರ್ ಲಕ್ಷ್ಮಣ ಚೌಟರು ಅನಿವಾರ್ಯವಾಗಿ ಪೊಲೀಸ್ ಠಾಣೆಗೆ ಬರುವಂತಾಯಿತು. ದೈವದ ಗಡಿಹಿಡಿದ ಗುತ್ತಿನಾರ್ ಠಾಣೆ-ಕೋರ್ಟ್ ಕಚೇರಿಗಳಿಂದ ದೂರ ಇರಬೇಕು ಎಂಬುದು ತುಳುವರ ಭಾವನಾತ್ಮಕ ಆಶಯ. ಆದರೆ ಹಿಂದುತ್ವವಾದಿ ಗೂಂಡಾಗಳು ನಡೆಸಿದ ದಾಳಿಯಿಂದಾಗಿ ದೂರು ನೀಡಲು ಅನಿವಾರ್ಯವಾಗಿ ಚೌಟರು ಠಾಣೆಗೆ ಬರಬೇಕಾಯಿತು. ಪೊಲೀಸರು ದೂರು ಪಡೆದುಕೊಳ್ಳಲು ಸಿದ್ದರಿರಲಿಲ್ಲ. ನಮ್ಮ ವಿಡಿಯೋ ದಾಖಲೆಗಳನ್ನು ವೀಕ್ಷಿಸಿ ಪೊಲೀಸರು ಕೊನೆಗೂ ಮೊಕದ್ದಮೆ ಸಂಖ್ಯೆ – 98/2012 ಎಂದು ಎಫ್ಐಆರ್ ದಾಖಲಿಸಿಕೊಂಡರು. ಎಸ್ಇಝಡ್ ಅಧಿಕಾರಿ ರಾಘವೇಂದ್ರ ಹೊಳ್ಳ, ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡೀಲ್ ಸೇರಿದಂತೆ ನಾಲ್ವರು ಹಲ್ಲೆಯ ಆರೋಪಿಗಳಾಗಿದ್ದರು. ಹಿಂದುತ್ವ ಮತ್ತು ಕಾರ್ಪೋರೇಟ್ ಮೈತ್ರಿ ಎಷ್ಟೊಂದು ಜನಪೀಡಕ ಎಂಬುದು ನಮಗೆ ಅಂದು ಅರಿವಾಗಿತ್ತು.

ಹಿಂದೂ ಜಾಗರಣಾ ವೇದಿಕೆಯನ್ನೇ ಎಸ್ಇಝಡ್ ಯಾಕೆ ಆಯ್ದು ಕೊಂಡಿತ್ತು?

ನೆಲ್ಲಿದಡಿ ಗುತ್ತು ನೆಲಸಮ ಕಾರ್ಯಾಚರಣೆ ವಿಫಲಗೊಂಡಿತ್ತು

ದಿನಪೂರ್ತಿ ರಾತ್ರಿಯವರೆಗೂ ನಾವು ಠಾಣೆಯಲ್ಲಿದ್ದು, ಎಲ್ಲಾ ಆರೋಪಿಗಳ ಮೇಲೆ ಎಫ್ಐಆರ್ ದಾಖಲಿಸಿದ ಬಳಿಕ ನೆಲ್ಲಿದಡಿ ಗುತ್ತುವಿನ ನೆಲಸಮಕ್ಕೆ ಬಂದಿದ್ದ ಜೆಸಿಬಿ, ಲಾರಿಗಳು ವಾಪಸ್ ಹೋದವು. ಆರೋಪಿಗಳು ತಲೆಮರೆಸಿಕೊಂಡರು. ನೆಲ್ಲಿದಡಿ ಗುತ್ತು ನೆಲಸಮ ಕಾರ್ಯಾಚರಣೆ ವಿಫಲಗೊಂಡಿತ್ತು. ಮರುದಿನ, ಅಂದರೆ ಮೇ 26 ರಂದು ಹೋರಾಟಗಾರ್ತಿ ವಿದ್ಯಾದಿನಕರ್ ಜೈಲಿನಿಂದ ಬಿಡುಗಡೆಗೊಂಡರು. ಇಡೀ ನೆಲ್ಲಿದಡಿ ಗುತ್ತುವಿನ ಕುಟುಂಬಸ್ಥರು ಮತ್ತು ಬಜಪೆ ನಿವಾಸಿಗಳ ಜೊತೆ ಸಭೆ ನಡೆಸಿ ಮುಂದಿನ ಕಾನೂನು ಹೋರಾಟದ ಬಗ್ಗೆ ಚರ್ಚೆ ನಡೆಸಲಾಯಿತು. ಸರ್ಕಾರ-ಪೊಲೀಸ್-ಎಸ್ಇಝಡ್-ಹಿಂದುತ್ವ ಸಂಘಟನೆ-ಬಹುರಾಷ್ಟ್ರೀಯ ಪೆಟ್ರೋಲಿಯಂ ಕಂಪನಿಗಳು ಒಟ್ಟಾಗಿ ನಡೆಸುವ ದಾಳಿಯನ್ನು ಎದುರಿಸುವುದು ಸುಲಭವಲ್ಲ.

ದೌರ್ಜನ್ಯದ ಸಾಕ್ಷ್ಯ ಚಿತ್ರ ತಯಾರಿ ಮತ್ತು ಆರೋಪಿಗಳ ವಿರುದ್ಧ ಚಾರ್ಜ್ ಶೀಟ್  

ದೈವಾರಾಧನೆ

ಪತ್ರಕರ್ತರ ಅಧ್ಯಯನ ಕೇಂದ್ರ ಮತ್ತು ವಿದ್ಯಾದಿನಕರ್ ಸೇರಿಕೊಂಡು ನೆಲ್ಲಿದಡಿ ಗುತ್ತು ಮೇಲೆ ನಡೆದ ದೌರ್ಜನ್ಯದ ಸಾಕ್ಷ್ಯ ಚಿತ್ರ ತಯಾರಿಸಿ ಅದನ್ನು ಇಮೇಲ್ ಮೂಲಕ ರಾಜ್ಯ, ಕೇಂದ್ರ ಸರ್ಕಾರ ಮತ್ತು ರಾಷ್ಟ್ರಾದ್ಯಂತ ಸಂಘಟನೆಗಳಿಗೆ ರವಾನಿಸಿದೆವು. ಮಕ್ಕಳು ಮತ್ತು ಮಹಿಳೆಯರ ಮೇಲೆ ನಡೆಸಿದ ದಾಳಿಯ ಚಿತ್ರಣಗಳು ಮನಕಲಕುವಂತಿದ್ದವು. ಜೆಸಿಬಿಗೆ ಎದುರಾಗಿ ನಿಂತಿದ್ದ ಪುಟ್ಟ ಮಕ್ಕಳನ್ನೂ ಹಿಂದುತ್ವ ಕಾರ್ಯಕರ್ತರು ಎತ್ತಿ ಬಿಸಾಡಿದ್ದರು. ನೆಲ್ಲಿದಡಿ  ಗುತ್ತುವಿನ ಮಹಿಳೆಯರ ಬಟ್ಟೆ ಹರಿದು ಹಾಕಿ ಹಲ್ಲೆ ನಡೆಸಿದ್ದರು. ‘ನನ್ನನ್ನು ಎರಡೂ ಕಿವಿಗಳಲ್ಲಿ ಎತ್ತಿ ಹಿಡಿದು ಬಿಸಾಡಿದರು’ ಎಂದು ನನ್ನ ಕ್ಯಾಮರಾದ ಎದುರು ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುವ ಪುಟ್ಟ ಮಗುವಿನ ವಿಡಿಯೋ ಸಾಮಾಜಿಕ ಜಾಲತಾಣ ದುರ್ಬಲವಾಗಿದ್ದ ಆ ಕಾಲದಲ್ಲೇ ವೈರಲ್ ಆಗಿತ್ತು. (ಈಗ ನೆಲ್ಲಿದಡಿ ಗುತ್ತು ಉಳಿಸಿ ಅಭಿಯಾನಕ್ಕೆ ಅದೇ ವಿಡಿಯೋವನ್ನು ಬಳಸಲಾಗುತ್ತಿದೆ) ಸರ್ಕಾರ, ಪೊಲೀಸರು, ಜಿಲ್ಲಾಡಳಿತ ಎಸ್ಇಝಡ್ ಪರವಾಗಿದ್ದರಿಂದ ಪೊಲೀಸರು ಒತ್ತಡಕ್ಕೆ ಒಳಗಾಗಿ ಎಫ್ಐಆರ್ ಗೆ ಬಿ ರಿಪೋರ್ಟ್ ಹಾಕಲು ಸಿದ್ದತೆ ನಡೆಸುತ್ತಿದ್ದರು. ಇದು ನಮ್ಮ ಅರಿವಿಗೆ ಬರುತ್ತಿದ್ದಂತೆ  ಮಕ್ಕಳ ಮೇಲೆ ನಡೆದ ದಾಳಿಯ ಚಿತ್ರ ಮತ್ತು ವಿಡಿಯೋವನ್ನು ಬಳಸಿಕೊಂಡು ‘ರಾಷ್ಟ್ರೀಯ ಮಕ್ಕಳ ಆಯೋಗ’ ಕ್ಕೆ ವಿದ್ಯಾ ದಿನಕರ್ ದೂರು ನೀಡಿದರು. ಈ ದೂರಿನ ಆಧಾರದ ಮೇಲೆ ರಾಷ್ಟ್ರೀಯ ಮಕ್ಕಳ ಆಯೋಗವು ಜಿಲ್ಲಾ ಪೊಲೀಸರಿಂದ ವಿವರಣೆ ಕೇಳಿ ಪತ್ರ ಬರೆಯಿತು. ಈ ಪತ್ರದ ಕಾರಣದಿಂದಾಗಿ ಪೊಲೀಸರು ಬಿ ರಿಪೋರ್ಟ್ ಹಾಕಲಾಗದೇ, ಅನಿವಾರ್ಯವಾಗಿ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಹಾಕಿದರು. 

ಎಫ್‌ಐಆರ್ ರದ್ದುಗೊಳಿಸಲು ಹೈಕೋರ್ಟ್ ಮೊರೆ

ಮಂಗಳೂರು ವಿಶೇಷ ಆರ್ಥಿಕ ವಲಯ ಅಧಿಕಾರಿ ರಾಘವೇಂದ್ರ ಹೊಳ್ಳ ಮತ್ತು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡೀಲ್ ಅವರುಗಳು  ಈ ಎಫ್‌ಐಆರ್ ಅನ್ನು ರದ್ದುಗೊಳಿಸಲು ಹೈಕೋರ್ಟ್ ಮೊರೆ ಹೋಗುತ್ತಾರೆ. ಈ ರೀತಿ ಎಂಆರ್‌ಪಿಎಲ್/ ಸೆಝ್ ಎಂಬ ಸರ್ಕಾರಿ ಸ್ವಾಮ್ಯದ ಕಾರ್ಪೋರೇಟ್ ಕಂಪನಿಯೊಂದು ಹೈಕೋರ್ಟ್ ಮೆಟ್ಟಿಲೇರುವಾಗ ಸುಭಾಷ್ ಪಡೀಲ್ ಎಂಬ ಆರೋಪಿಯ ಪರವಾಗಿಯೂ ಅಫಿದಾವಿತ್ ಹಾಕುತ್ತದೆ ಎಂದರೆ ಕಾರ್ಪೋರೇಟ್ ಮತ್ತು ಹಿಂದುತ್ವ ಮೈತ್ರಿ ಯಾವ ಮಟ್ಟಿನದ್ದು ಎಂಬುದನ್ನು  ಊಹಿಸಬಹುದು. ಹೈಕೋರ್ಟ್ ನಲ್ಲಿ ಸೆಝ್ ಅಧಿಕಾರಿ ರಾಘವೇಂದ್ರ ಹೊಳ್ಳ ಮತ್ತು ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸುಭಾಷ್ ಪಡೀಲ್ ಅವರು ಜಂಟಿಯಾಗಿ ಕ್ರಿಮಿನಲ್ ಪಿಟೀಷನ್ (CRL.P)- 6071/2014ರಂತೆ ಅರ್ಜಿ ಸಲ್ಲಿಸುತ್ತಾರೆ. ‘ನೀವುಗಳು ಹಲ್ಲೆ ಮಾಡಿರುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳು ಇವೆ. ಹಾಗಾಗಿ ವಿಚಾರಣೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡಲ್ಲ. ನೀವೇನಿದ್ದರೂ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾಗಿ’ ಎಂದು ಹೇಳಿದ ಹೈಕೋರ್ಟ್ ನ್ಯಾಯಪೀಠವು ರಾಘವೇಂದ್ರ ಹೊಳ್ಳ ಮತ್ತು ಸುಭಾಷ್ ಪಡೀಲ್ ಅರ್ಜಿಯನ್ನು ವಜಾಗೊಳಿಸಿತ್ತು. ಆ ಬಳಿಕವಷ್ಟೇ ಅಧಿಕಾರಿಗಳು-ಗೂಂಡಾಗಳು ನೆಲ್ಲಿದಡಿ ದೈವಸ್ಥಾನದ ಸಹವಾಸಕ್ಕೆ ಬರಲಿಲ್ಲ. ದೈವಸ್ಥಾನ ಉಳಿಯಿತು.

ಪ್ರಭುತ್ವ- ಕಾರ್ಪೋರೇಟ್-ಹಿಂದುತ್ವ ರಾಜಕಾರಣದ ದಾಳಿಯನ್ನು ತಡೆಯಬೇಕಿದೆ

ಈ ರೀತಿ ನಡೆಸಿದ ಸಂಘಟಿತ ಪ್ರತಿರೋಧದಿಂದಾಗಿ ಪ್ರಭುತ್ವ-ಕಾರ್ಪೊರೇಟ್-ಹಿಂದುತ್ವ ದಾಳಿಯಿಂದ ನೆಲ್ಲಿದಡಿ ಗುತ್ತು ಜುಮಾದಿ ದೈವಸ್ಥಾನ ಉಳಿಯಿತು. ಈಗ ಮಂಗಳೂರು ವಿಶೇಷ ವಲಯ ಅಧಿಕಾರಿಗಳು ಮತ್ತೆ ದೈವಸ್ಥಾನದ ಪೂಜಾದಿಗಳಿಗೆ ಅಡ್ಡಿಯಾಗುತ್ತಿದ್ದಾರೆ. 2012 ರಿಂದ ಪ್ರಾರಂಭವಾದ ಹೋರಾಟ ಇನ್ನೂ ನಿಂತಿಲ್ಲ. ತುಳುನಾಡಿನ ಕಿರು ಸಂಸ್ಕೃತಿಯಾದ ಭೂತಾರಾಧನೆಗೆ ಅಡ್ಡಿಯಾಗುತ್ತಿರುವ ಪ್ರಭುತ್ವ- ಕಾರ್ಪೋರೇಟ್-ಹಿಂದುತ್ವ ರಾಜಕಾರಣದ ದಾಳಿಯನ್ನು ತಡೆಯಬೇಕಿದೆ.

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ- ಕೊಹ್ಲಿ ಸೆಂಚುರಿ ತಪ್ಪಿಸಲು ಸಂಚು ನಡೆಸಲಾಗಿತ್ತೇ? | ಇದು ಸ್ಪೋರ್ಟ್ಸ್ ಪೊಲಿಟಿಕ್ಸ್!

More articles

Latest article