ಉಲ್ಫಾ ಮೇಲಿನ ನಿಷೇಧ ಮತ್ತೆ 5 ವರ್ಷ ಮುಂದುವರಿಕೆ; ಅಮಿತ್ ಶಾ

Most read

ನವದೆಹಲಿ: ಭಾರತದಿಂದ ಅಸ್ಸಾಂ ಪ್ರತ್ಯೇಕಗೊಳಿಸುವ ಉದ್ದೇಶ,ಸುಲಿಗೆ, ಹಿಂಸಾಚಾರ ಮತ್ತು ಇತರ ದಂಗೆಕೋರ ಗುಂಪುಗಳೊಂದಿಗೆ ಸಂಪರ್ಕದಲ್ಲಿರುವುದಕ್ಕಾಗಿ ಬಂಡುಕೋರ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ (ಉಲ್ಫಾ) ಮೇಲಿನ ನಿಷೇಧವನ್ನು ಕೇಂದ್ರ ಸರ್ಕಾರ ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿದೆ.

1990ರಲ್ಲಿ ಮೊದಲ ಬಾರಿಗೆ ಉಲ್ಫಾವನ್ನು ನಿಷೇಧಿತ ಸಂಘಟನೆ ಎಂದು ಘೋಷಿಸಲಾಗಿತ್ತು. ಅಂದಿನಿಂದ ನಿಷೇಧವನ್ನು ವಿಸ್ತರಿಸಲಾಗುತ್ತಾ ಬರಲಾಗಿದೆ. ಉಲ್ಫಾ ತನ್ನ ಎಲ್ಲಾ ಬಣಗಳು ಮತ್ತು ಮುಂಚೂಣಿ ಸಂಘಟನೆಗಳೊಂದಿಗೆ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಹಾನಿಯಾಗುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆಯಲ್ಲಿ ಹೇಳಿದೆ. ಅಸ್ಸಾಂ ಅನ್ನು ಭಾರತದಿಂದ ಪ್ರತ್ಯೇಕಿಸುವುದು ತನ್ನ ಉದ್ದೇಶವೆಂದು ಉಲ್ಫಾ ಘೋಷಿಸಿದೆ. ತಮ ಸಂಘಟನೆಗೆ ಹಣಕ್ಕಾಗಿ ಸುಲಿಗೆ ಮತ್ತು ಬೆದರಿಕೆಯನ್ನು ಮುಂದುವರೆಸಿದೆ. ಹಿಂಸಾಚಾರ ನಡೆಸಲು ಇತರ ಬಂಡಾಯ ಗುಂಪುಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಅಸ್ಸಾಂನಲ್ಲಿ ನಡೆದ 2019ರ ನವೆಂಬರ್ 27ರಿಂದ, 2024ರ ಜುಲೈ 1ರ ಅವಧಿಯಲ್ಲಿ ಹಲವಾರು ಸ್ಫೋಟ ಪ್ರಕರಣಗಳಲ್ಲಿ ಉಲ್ಪಾ ಭಾಗಿಯಾಗಿದೆ. ಈ ಸಂಘಟನೆಯ ವಿರುದ್ಧ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊಂದಿರುವ ಆರೋಪವೂ ಇದೆ. ಕಳೆದ ಐದು ವರ್ಷಗಳಲ್ಲಿ ಮೂರು ಉಲ್ಫಾ ಕಾರ್ಯಕರ್ತರು ಪೊಲೀಸ್ ಅಥವಾ ಭದ್ರತಾ ಪಡೆಗಳ ಕಾರ್ಯಾಚರಣೆಯಲ್ಲಿ ಹತರಾಗಿದ್ದಾರೆ. ಉಲ್ಪಾ ಕಾರ್ಯಕರ್ತರ ವಿರುದ್ಧ 15 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

More articles

Latest article