ಸಿದ್ದರಾಮಯ್ಯ ಅವರ ಹೆಸರಿನಲ್ಲಿ ರಾಮ, ನನ್ನ ಹೆಸರಿನಲ್ಲಿ ಶಿವನಿದ್ದಾನೆ, ಬೇರಿಯಾರಿಂದಲೂ ಭಕ್ತಿ ಮತ್ತು ಧರ್ಮದ ಪಾಠ ಕಲಿಸುವ ಅಗತ್ಯವಿಲ್ಲ. ನಮ್ಮ ಕರ್ತವ್ಯವನ್ನು ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹೇಳಿದರು.
ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠಾಪನ ಸಮಾರಂಭ ನಡೆಯಲಿರುವ ಜನವರಿ 22 ರಂದು ರಾಜ್ಯದಲ್ಲಿ ಸಾರ್ವಜನಿಕ ರಜೆ ಘೋಷಿಸದ ಉದ್ದೇಶದಿಂದ, ಬಿಜೆಪಿಯವರು ನಮ್ಮನ್ನು ಗುರಿಯಾಗಿಸುತ್ತಿದ್ದಾರೆ. ನಾವು ನಮ್ಮ ಧರ್ಮ ಮತ್ತು ಭಕ್ತಿಯನ್ನು ನಿಮ್ಮಂತೆ ಪ್ರಚಾರ ಮಾಡಿವುದಿಲ್ಲ ಎಂದು ಟೀಕಿಸಿದರು.
ಪ್ರಾಥನೆಗಳಿಂದ ಫಲ ಸಿಗುತ್ತದೆ ಎಂಬುದು ನಮ್ಮ ನಂಬಿಕೆ. ಆದ್ದರಿಂದ ಪ್ರಾಥನೆ ಮಾಡಲು ಹೇಳಿದ್ದೇವೆ. ಬಿಜೆಪಿಯವರು ಹೇಳುವ ಮೊದಲೇ ನಮ್ಮ ಸರ್ಕಾರ ಮುಜರಾಯಿ ಇಲಾಖೆ ದೇವಾಸ್ಥಾನಗಳಲ್ಲಿ ಪೂಜೆ ಮಾಡಲು ಸೂಚನೆ ನೀಡಿದ್ದೇವೆ. ನಾವು ಬೇರೆಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದರು.