Friday, December 6, 2024

ಭಾರತ ಜೋಡೋ ನ್ಯಾಯ ಯಾತ್ರೆಗೆ ತೆರಳಿದ್ದ ಜೈರಾಮ್ ರಮೇಶ್ ಕಾರಿನ ಮೇಲೆ ಬಿಜೆಪಿ ದಾಳಿ

Most read

ರಾಹುಲ್ ಗಾಂಧಿ ನೇತೃತ್ವದ ಭಾರತ ಜೋಡೋ ನ್ಯಾಯ ಯಾತ್ರೆಗೆ ಪಾಲ್ಗೋಳ್ಳಲು ತೆರಳಿದ್ದ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಾರಿನ ಮೇಲೆ ಬಿಜೆಪಿಯ ಗುಂಪೊಂದು ದಾಳಿ ಮಾಡಿದೆ.

ಯಾತ್ರೆಯು ಇಂದು(ಭಾನುವಾರ) ಅಸ್ಸಾಂ ತಲುಪಿತ್ತು. ಬಿಸ್ವಂತ್ ಜಿಲ್ಲೆಯಿಂದ ಸೋನಿತ್ಪುರ್ ಗೆ ಪ್ರಯಾಣ ಬೆಳೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.

ಈ ಕುರಿತು ಜೈರಾಮ್ ರಮೇಶ್ ತಮ್ಮ’ಎಕ್ಸ್’ ಖಾತೆಯಲ್ಲಿ, ‘ಕೆಲವು ನಿಮಿಷಗಳ ಹಿಂದೆ ಸುನೀತ್‌ಪುರದ ಜುಮುಗುರಿಹತ್‌ನಲ್ಲಿ ನನ್ನ ವಾಹನದ ಮೇಲೆ ಬಿಜೆಪಿಯ ಗುಂಪು ದಾಳಿ ಮಾಡಿತು ಮತ್ತು ವಿಂಡ್‌ಶೀಲ್ಡ್‌ನಿಂದ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸ್ಟಿಕ್ಕರ್‌ಗಳನ್ನು ಹರಿದು ಹಾಕಿದರು. ನೀರು ಎಸೆದು ನಮ್ಮ ಭಾರತ ಜೋಡೊ ನ್ಯಾಯ ಯಾತ್ರೆಯ ವಿರುದ್ಧ ಘೋಷಣೆಗಳನ್ನು ಕೂಗಿದರು. ಆದರೆ ನಾವು ಸಂಯಮವನ್ನು ಕಾಪಾಡಿಕೊಂಡೆವು’ ಎಂದು ವಿಡಿಯೋ ಹಂಚಿಕೊಂಡು ಬರೆದುಕೊಂಡಿದ್ದಾರೆ.

ಈ ಘಟನೆಯ ಹಿಂದೆ ನಿಸ್ಸಂದೇವಾಗಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಅವರ ಕೈವಾಡವಿದೆ. ಆದರೆ ನಾವು ಈ ರೀತಿಯ ಬೆದರಿಕೆಗಳಿಗೆ ಹೆದರುವುದಿಲ್ಲ ಮತ್ತು ಸೈನಿಕರಂತೆ ಮುನ್ನಡೆಯುತ್ತೇವೆ ಎಂದು ಹೇಳಿದ್ದಾರೆ.

More articles

Latest article