ಜೀವಾವಧಿ ಶಿಕ್ಷೆ : ಮರಕುಂಬಿಯ 97 ಮಂದಿಗೆ ಜಾಮೀನು

ಧಾರವಾಡ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೊಪ್ಪಳ ಜಿಲ್ಲೆಯ ಮರಕುಂಬಿ ಗ್ರಾಮದ 97 ಜನರಿಗೆ ಇಲ್ಲಿನ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ 98 ಜನರಿಗೆ ಕೊಪ್ಪಳ ಜಿಲ್ಲಾ ನ್ಯಾಯಾಲಯ ಇತ್ತೀಚೆಗೆ ಜೀವಾವಧಿ ಶಿಕ್ಷೆ ನೀಡಿ ಆದೇಶಿಸಿತ್ತು.
ಬಳಿಕ ಜಿಲ್ಲಾ ನ್ಯಾಯಾಲಯದ ಆದೇಶವನ್ನು ಆರೋಪಿತರು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆರೋಪಿತರ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶ್ರೀನಿವಾಸ ಹರೀಶಗೌಡ ಮತ್ತು ಶಿವಲಿಂಗೇಗೌಡ ಅವರನ್ನೊಳಗೊಂಡ ಪೀಠವು, ಆರೋಪಿತರಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿದೆ.

ಆರೋಪಿತರ ಪರವಾಗಿ ಅವಿನಾಶ ಅಂಗಡಿ, ನೀಲೇಂದ್ರ ಗುಂಡೆ, ಸಂತೋಷ ಮಲಗೌಡರ, ವಿ.ಎಂ.ಶೀಲವಂತ, ಆನಂದ ಕೊಳ್ಳಿ, ಈರಣ್ಣ ಕಬ್ಬೂರ ಇತರ ವಕೀಲರು ವಾದ ಮಂಡಿಸಿದ್ದರು

More articles

Latest article

Most read