ಬೆಂಗಳೂರಿನ ನಿವಾಸಿಗಳೇ ನಾಳೆ ಈ ಏರಿಯಾಗಳಲ್ಲಿ ವಿದ್ಯುತ್‌ ಇರಲ್ಲ

Most read

ಬೆಸ್ಕಾಂ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಆಗಸ್ಟ್‌ 22 ಕ್ಕೆ (ಗುರುವಾರ) ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯುತ್‌ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಬೆಸ್ಕಾಂ, ಗುರುವಾರ ಬೆಳಿಗ್ಗೆಯಿಂದ ಸಂಜೆವರೆಗೂ ವಿವಿಧ ಸ್ಟೇಷನ್‌ಗಳಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ನಿರ್ವಹಿಸುವುದರಿಂದ ಈ ಸಮಯದಲ್ಲಿ ಸಂಬಂಧಪಟ್ಟ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಿದೆ.

ಬೆಳಿಗ್ಗೆ 10 ರಿಂದ ಮಧ್ಯಾಹ್ನ 2 ಗಂಟೆವರೆಗೂ ರೆಸಿಡೆನ್ಸಿ ರಸ್ತೆ, ಹೊಂಡೈ ಆರ್.ಎಮ್.ಯು, ಲ್ಯಾವೆಲ್ಲೆ ರಸ್ತೆ, ವಾಲ್ಟನ್ ರಸ್ತೆ, ವಿಟ್ಟಲ್ ಮಲ್ಯ ರಸ್ತೆ, ಚರ್ಚ್‌ ಸ್ಟ್ರೀಟ್, ಕಸ್ತೂರಬಾ ರಸ್ತೆ, ಸೇಂಟ್ ಮಾರ್ಥಾಸ್‌ ರಸ್ತೆ, ಕ್ವೀನ್ಸ್ ವೃತ್ತ, ರೆಸಿಡೆನ್ಸಿ ರಸ್ತೆ ಕ್ರಾಸ್, ಐ.ಟಿ.ಸಿ ಹೋಟೆಲ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ, ಎಚ್.ಬಿ.ಆರ್ 1ನೇ ಬ್ಲಾಕ್, 2ನೇ ಬ್ಲಾಕ್, ಯಾಸಿನ್‌ನಗರ, ಸುಭಾಶ್ ಲೇಔಟ್, ರಾಮ ದೇವಸ್ಥಾನದ ರಸ್ತೆ, ರಾಮದೇವ್ ಗಾರ್ಡನ್, ಕೃಷ್ಣ ರೆಡ್ಡಿ ಲೇಔಟ್, ಟೀಚರ್ಸ್‌ ಕಾಲೋನಿ, ಎಚ್.ಬಿ.ಆರ್. 3ನೇ ಬ್ಲಾಕ್, ಶಿವರಾಮಯ್ಯ ಲೇಔಟ್, ರಿಂಗ್ ರಸ್ತೆ, ಸರ್ವೀಸ್ ರಸ್ತೆ, ಕೆ.ಕೆ. ಹಳ್ಳಿ ಗ್ರಾಮ, ಸಿ.ಎಂ.ಆರ್.ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ರಾಮಯ್ಯ ಲೇಔಟ್, ಲಿಂಗರಾಜಪುರ, ಜಾನಕೀರಾಮ್ ಲೇಔಟ್, ಕನಕದಾಸ ಲೇಔಟ್, ಗೋವಿಂದಪುರ ಮುಖ್ಯರಸ್ತೆ, ರಶದ್‌ನಗರ, ಫರೀದಾ ಶೂ ಫ್ಯಾಕ್ಟರಿ, ಅರೇಬಿಕ್ ಕಾಲೇಜ್, ಕೆ.ಜಿ.ಹಳ್ಳಿ, ಗೋವಿಂದಪುರ ಗ್ರಾಮ, ಕೆ.ಜಿ.ಹಳ್ಳಿ, ವಿನೋಬನಗರ, ಬಿ.ಎಂ.ಲೇಔಟ್, ಆರೋಗ್ಯಮ್ಮ ಲೇಔಟ್, ಕಾವೇರಿ ಗಾರ್ಡನ್ ಮತ್ತು ಸುತ್ತಲಿನ ಪ್ರದೇಶ.

ಎಚ್.ಬಿ.ಆರ್. ಲೇಔಟ್ 4ನೇ ಬ್ಲಾಕ್, ಯಾಸಿನ್‌ನಗರ, 5ನೇ ಬ್ಲಾಕ್, ಎಚ್.ಬಿ.ಆರ್. ನಾಗವಾರ ಮುಖ್ಯರಸ್ತೆ, ನಾಗವಾರ, ಎನ್.ಜೆ.ಕೆ. ಗಾರ್ಮೆಂಟ್ಸ್, ಬೈರನಕುಂಟೆ, ಕುಪ್ಪುಸ್ವಾಮಿ ಲೇಔಟ್, ಎಚ್.ಕೆ.ಬಿ.ಕೆ ಕಾಲೇಜ್, 4ನೇ ಮತ್ತು 5ನೇ ಹೆಚ್.ಬಿ.ಆರ್. ಲೇಔಟ್, ವಿದ್ಯಾ ಸಾಗರ, ಥಣಿಸಂದ್ರ, ಆರ್.ಕೆ. ಹೆಗಡೆನಗರ, ಕೆ.ನಾರಾಯಣಪುರ, ಎನ್.ಎನ್.ಹಳ್ಳಿ, ಬಾಲಾಜಿ ಲೇಔಟ್, ಫೇಸ್ 1 ರಿಂದ 3, ರೈಲ್ವೆ ಮೆನ್ಸ್ ಲೇಔಟ್, ಬಿ.ಡಿ.ಎಸ್. ಲೇಔಟ್, ಕೆ.ಕೆ. ಹಳ್ಳಿ, ಹೆಣ್ಣೂರು ಮುಖ್ಯರಸ್ತೆ, ಎಚ್.ಆರ್.ಬಿ.ಆರ್. 3ನೇ ಬ್ಲಾಕ್,ಆಯಿಲ್ ಮಿಲ್ ರಸ್ತೆ, ಅರವಿಂದನಗರ, ನೆಹರು ರಸ್ತೆ, ಕಮ್ಮನಹಳ್ಳಿ ಮುಖ್ಯರಸ್ತೆ, ಬೆಥೆಲ್‌ ಸ್ಟ್ರಿಟ್‌, ಎ.ಕೆ.ಕಾಲೋನಿ, ಎಚ್.ಆರ್.ಬಿ.ಆರ್. 1ನೇ ಬ್ಲಾಕ್, 80 ಅಡಿರಸ್ತೆ, ಸಿ.ಎಂ.ಆರ್. ರಸ್ತೆ, ಕಾರ್ಲೆ, ಹೆಗಡೆನಗರ, ನಾಗೇನಹಳ್ಳಿ, ಪೊಲೀಸ್ ಕ್ವಾಟರ್ಸ್‌, ಕೆಂಪೇಗೌಡ ಲೇಔಟ್, ಶಬರೀನಗರ, ಕೆ.ಎಂ.ಟಿ. ಲೇಔಟ್, ಭಾರತೀಯ ಸಿಟಿ, ನೂರ್ ನಗರ ಭಾರತ ಮಾತ ಲೇಔಟ್, ಭಾರತ ಮಾತ ಲೇಔಟ್, ಹಿದಾಯತ್ ನಗರ, ಲಿಡ್ಕರ್ ಕಾಲೋನಿ., ಬಿ.ಎಮ್.ಆರ್.ಸಿ.ಎಲ್, ಗಾಂಧಿನಗರ, ಕುಶಾಲನಗರ, ಶಾಂಪುರ ಮೇನ್ ರೋಟ್‌ನಲ್ಲಿ ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ ವಿದ್ಯುತ್‌ ಇರುವುದಿಲ್ಲ.



More articles

Latest article