ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಕೋರಿ ಅರ್ಜಿ: ಇಂದು ಇವಿಎಂ ಸ್ಟ್ರಾಂಗ್ ರೂಂ ಓಪನ್

ಕೋಲಾರ: ಮಾಲೂರು ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಕೋರಿ ಸಲ್ಲಿಸಲಾಗಿರುವ ಅರ್ಜಿ‌ ಸಂಬಂಧ ಇಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆದು ಮಾಹಿತಿ ಸಂಗ್ರಹಿಸಲಾಗುವುದು.

ಸ್ಟ್ರಾಂಗ್ ರೂಂ ತೆರೆಯಲಿರುವ ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷಾ ಹೈಕೋರ್ಟ್ ಆದೇಶದಂತೆ ವಿವರ ಸಲ್ಲಿಸಲಿದ್ದಾರೆ.

ಫಾರಂ 17ಸಿ ಪಾರ್ಟ್ 2ರ ವಿವರ ಸಲ್ಲಿಸಲು ಹೈಕೋರ್ಟ್ ಸೂಚಿಸಿದ ಹಿನ್ನೆಲಯಲ್ಲಿ ಮಾಲೂರು ಕ್ಷೇತ್ರದ ಮತ ಎಣಿಕೆಯ ವಿವರವಿರುವ ಫಾರಂ 17ಸಿ ಮಾಹಿತಿಗಳನ್ನು ಇಂದು ಸಂಗ್ರಹಿಸಲಾಗುವುದು.

ಮತ ಎಣಿಕೆಯ ಸಿಸಿಟಿವಿ ದೃಶ್ಯ ಒದಗಿಸಲು ಹೈಕೋರ್ಟ್ ಸೂಚಿಸಿತ್ತು. ಈ ವಿವರಗಳನ್ನೂ ಕೋಲಾರ ಜಿಲ್ಲಾಧಿಕಾರಿಗಳೂ ಆಗಿರುವ ಚುನಾವಣಾಧಿಕಾರಿ ಅಕ್ರಂ ಪಾಶ ಒದಗಿಸಲಿದ್ದಾರೆ.

ಕಳೆದ ವಿಧಾನಸಭಾ ಚುಮಾವಣೆಯಲ್ಲಿ ಕೇವಲ 248 ಮತಗಳ ಅಂತರದಲ್ಲಿ ಕಾಂಗ್ರೆಸ್ ನ ನಂಜೇಗೌಡ ಗೆಲುವು ಸಾಧಿಸಿದ್ದರು. ಈ ಸಂಬಂಧ ಹೈಕೋರ್ಟ್ ಗೆ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ.ಎಸ್.ಮಂಜುನಾಥ ಗೌಡ ತಕರಾರು ಅರ್ಜಿ ಸಲ್ಲಿಸಿದ್ದರು.

More articles

Latest article

Most read