ಸಕಲೇಶಪುರ- ಬೇಲೂರು ರಾಜ್ಯ ಹೆದ್ದಾರಿಯಲ್ಲಿ ಬಾಯಿ ತೆರೆದ ಭೂಮಿ, ಭೂಕುಸಿತದ ಆತಂಕ

ಸಕಲೇಶಪುರ : ಪಟ್ಟಣದ ಆಚಂಗಿ ರೈಲ್ವೆ ಸೇತುವೆ ಸಮೀಪ ಭೂ ಕುಸಿತ ಉಂಟಾಗಿರುವುದರಿಂದ ರಸ್ತೆಯಲ್ಲಿ ದೊಡ್ಡ ಹೊಂಡ ಉದ್ಭವವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ರಸ್ತೆ ಬಾಯಿಬಿಟ್ಟ ಕಾರಣದಿಂದ ಸಕಲೇಶಪುರ ಹಾಗೂ ಬೇಲೂರು ನಡುವಿನ ರಾಜ್ಯ ಹೆದ್ದಾರಿ ಬಂದ್ ಆಗಿದೆ.

ಮಂಗಳವಾರ ಸುರಿದ ಭಾರಿ ಮಳೆಗೆ ಹೆದ್ದಾರಿ ಬದಿಯಲ್ಲಿ ಭೂಕುಸಿತ ಉಂಟಾಗಿದ್ದು ಇದೀಗ ರಸ್ತೆಯ ಮಧ್ಯದಲ್ಲಿ ಭೂ ಕುಸಿತ ಉಂಟಾಗಿರುವುದರಿಂದ ಸಕಲೇಶಪುರ ಬೇಲೂರು ರಾಜ್ಯ ಹೆದ್ದಾರಿಯನ್ನು ಬಂದ್ ಮಾಡಲಾಗಿದೆ.

ಭಾರಿವಾಹನಗಳು ಬೆಳಗೋಡು ಮಾರ್ಗವಾಗಿ ಬೇಲೂರು ಸಕಲೇಶಪುರ ನಡುವೆ ಸಂಚರಿಸಬೇಕಾಗಿದೆ. ಇನ್ನು ಲಘು ವಾಹನಗಳು ಹಲಸುಲಿಗೆ ರೈಲ್ವೆ ಗೇಟ್ ಒಸ್ಸೂರು ಹೋಟೆಲ್ ಮಾರ್ಗದಲ್ಲಿ ಸುತ್ತಿ ಬಳಸಿ ಸಂಚರಿಸಬೇಕಾಗಿದೆ.

More articles

Latest article

Most read