ನಾನು ನಂದಿನಿ ವಿಡಿಯೋ ಮೂಲಕ ರಾಜ್ಯಾದ್ಯಂತ ಖ್ಯಾತಿ ಪಡೆದುಕೊಂಡಿದ್ದ ವಿಕ್ಕಿಪೀಡಿಯಾ ವಿಕಾಸ್ ತಮಾಷೆಗಾಗಿ ಮಾಡಿದ ಒಂದು ರೀಲ್ಸ್ ನಿಂದಾಗಿ ಪೊಲೀಸ್ ವಿಚಾರಣೆ ಎದುರಿಸಿದ ಪ್ರಸಂಗ ನಡೆದಿದೆ. ಹೌದು, ರೀಲ್ಸ್ ಒಂದರಲ್ಲಿ ಡ್ರಗ್ಸ್ ಸೇವಿಸುವ ಪದ ಬಳಕೆ ಮಾಡಿದ ಕಾರಣ ಬೆಂಗಳೂರು ಪೊಲೀಸರು ಅವರಿಗೆ ಎಚ್ಚರಿಕೆ ಕೊಟ್ಟು ವಿಡಿಯೋ ಡಿಲಿಟ್ ಮಾಡಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಕ್ಕಿಪೀಡಿಯಾ ವಿಕಾಸ್ ತಮ್ಮ ಕ್ರಿಯೇಟಿವ್ ವಿಡಿಯೋಗಳು ಹೆಚ್ಚು ಹೆಸರುವಾಸಿಯಾದವರು. ಆನ್ಲೈನ್ ಗ್ಯಾಮ್ಲಿಂಗ್ ನಿಂದ ಆಗುವ ಅವಾಂತರಗಳನ್ನು ತಮ್ಮದೇ ಆದ ವಿಡಯೋ ಅಥವಾ ರೀಲ್ಸ್ ಮೂಲಕ ಜನರಿಗೆ ತಲುಪಿಸಿ ಜನಮನ್ನಣೆ ಪಡೆದುಕೊಂಡಿದ್ದರು. ಇದೀಗ ಅಂತಹದ್ದೆ ಸಾಹಸ ಮಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.
ತಮಾಷೆಯಾಗಿ ಒಂದು ಗಂಭೀರ ವಿಷಯವನ್ನು ಹೇಳಲು ಹೊರಟಿದ್ದ ವಿಕಾಸ್ ಸಮಸ್ಯೆ ಎದುರಾಗಿದೆ. ಮನುಷ್ಯ ಜೀವನದಲ್ಲಿ ಹೇಗಿರಬೇಕು ಹೇಗಿರಬಾರದು ಎಂದು ರೀಲ್ಸ್ ಮಾಡಿ ಕಡೆಗೆ ಏನ್ ಮಾಡ್ತಿರಿ ಖುಷಿಯಾಗಿರಲು ನೀವು ಎಂದು ಕೇಳಿದಾಗ ಡ್ರಗ್ಸ್ ತೆಗೆದುಕೊಳ್ಳುತ್ತೇನೆ ಎಂಬ ಪದ ಬಳಸಿದ್ದರು ಈಗ ಅದು ಅವರಿಗೆ ಮುಳ್ಳಾಗಿ ಪರಿಣಮಿಸಿದೆ.
ಈ ವಿಡಿಯೋಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ, ಇದನ್ನು ಕರ್ನಾಟಕ ಪೊಲೀಸ್ ಸೋಷಿಯಲ್ ಮೀಡಿಯಾ ವಿಂಗ್ ಗಮನಿಸಿ ಬೈಯ್ಯಪ್ಪನಹಳ್ಳಿ ಪೊಲೀಸರಿಗೆ ಇದರ ಬಗ್ಗೆ ಪರಿಶೀಲಿಸುವಂತೆ ಸೂಚನೆ ನೀಡಿದ್ದರು. ನಂತರ ವಿಕಾಸ್ ಅವರನ್ನು ಪೊಲೀಸ್ ಠಾಣೆಗೆ ವಿಚಾರಣೆಗೆ ಕರೆದಿದೆ. ನಂತರ ಆತ ಪೊಲೀಸರಿಗೆ ಮನವರಿಕೆ ಮಾಡಿಕೊಟ್ಟರು, ಈ ಒಂದು ವಿಡಿಯೋ ಸಮಾಜದ ವ್ಯವಸ್ಥೆಯನ್ನು ಕೆಡಿಸುವಂತ ಕಂಟೆಂಟ್ ಇರುವುದರಿಂದ ವಿಡಿಯೋ ಡಿಲೀಟ್ ಮಾಡಿಸಿ ಇನ್ನು ಮುಂದೆ ಈತರ ವಿಡಿಯೋ ಮಾಡಬೇಡಿ ಎಂದು ಎಚ್ಚರಿಕೆ ಕೊಟ್ಟು ಕಳಿಸಿದ್ದಾರೆ.