ನಕಲಿ ಬೇಬಿ ಬಂಪ್ ಎಂದವರಿಗೆ ದೀಪಿಕಾ ಪಡುಕೋಣೆ ಸಖತ್ ಟಾಂಗ್..!

Most read

ದೀಪಿಕಾ ಪಡುಕೋಣೆ ಗರ್ಭಿಣಿ ಎಂದು ಹೇಳಿಕೊಂಡಾಗಿನಿಂದ ನೆಟ್ಟಿಗರು ಅದನ್ನು ಸುಳ್ಳು ಎಂದೇ ವಾದಿಸುತ್ತಿದ್ದಾರೆ. ದೀಪಿಕಾ ಬಾಡಿಗೆ ತಾಯ್ತನದಿಂದ ಮಗು ಪಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇತ್ತಿಚೆಗಷ್ಟೇ ಮತದಾನ ಮಾಡುವುದಕ್ಕೆಂದು ಬಂದಾಗಲೂ, ಇದು ಪ್ರೆಗ್ನೆನ್ಸಿ ಅಲ್ಲ ಫೇಕ್ ಪ್ರೆಗ್ನೆನ್ಸಿ ಎಂದೇ ಹಲವರು ಆಡಿಕೊಂಡಿದ್ದರು. ಇದೀಗ ಅಂಥವರಿಗೆ ದೀಪಿಕಾ ಪಡುಕೋಣೆ ಸಖತ್ ಟಾಂಗ್ ಕೊಟ್ಟಿದ್ದಾರೆ.

ಗರ್ಭಾವಸ್ಥೆಯನ್ನು ಎಂಜಾಯ್ ಮಾಡುತ್ತಿರುವ ದೀಪಿಕಾ ಒಂದು ಹೊಸ ವಿಡಿಯೋ ಒಂದನ್ನು ಹಂಚಿಕೊಂಡು ಆ ಮೂಲಕ ಆಡಿಕೊಂಡವರಿಗೆ ತಿರುಗೇಟು ನೀಡಿದ್ದಾರೆ. ಹಳದಿ ಬಣ್ಣದ ಉಡುಪಿನಲ್ಲಿ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಗಳಿದ್ದಾರೆ. ತುಂಬಾ ಸುಂದರವಾಗಿ ಕಾಣಿಸುತ್ತಿದ್ದೀರಿ ಎಂದು ಹೊಗಳಿದ್ದಾರೆ. ಪ್ರಾಡೆಕ್ಟ್ ಗಳನ್ನು ತೋರಿಸುವ ವಿಡಿಯೋದಲ್ಲಿ ದೀಪಿಕಾ ಬೇಬಿ ಬಂಪ್ ಸಹ ಕಾಣಿಸಿದೆ.

ಇತ್ತಿಚೆಗಷ್ಟೇ ದೀಪಿಕಾ ಪಡುಕೋಣೆ ಬೇಬಿ ಬಂಪ್ ಬಗ್ಗೆ ಆಡಿಕೊಂಡಿದ್ದವರಿಗೆ ಆಲಿಯಾ ಭಟ್ ಮುಟ್ಟಿ ನೋಡಿಕೊಳ್ಳುವಂತೆ ಹೇಳಿದ್ದರು. ಇದೀಗ ದೀಪಿಕಾ ಪಡುಕೋಣೆ ಕೂಡ ವಿಡಿಯೋ ಹಾಕಿ, ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ. ಸದ್ಯ ದೀಪಿಕಾ ಹಾಗೂ ರಣವೀರ್ ಸಿಂಗ್ ತಮ್ಮ ಮೊದಲ ಮಗುವಿನ ಆಗಮನ ನಿರೀಕ್ಷೆಯಲ್ಲಿದ್ದಾರೆ. ದೀಪಿಕಾರನ್ನು ಕಾಳಜಿ ಮಾಡುತ್ತಾರೆ. ಆದರೆ ಇಬ್ಬರ ನಡುವೆ ಡಿವೋರ್ಸ್ ಆಗ್ತಿದೆ ಅಂತಾನೂ ಜೋರು ಗಾಸಿಪ್ ಮಾಡಿದ್ದರು. ಯಾಕಂದ್ರೆ ರಣವೀರ್ ಸಿಂಗ್ ತುಂಬಾ ಹಳೆಯ ಫೋಟೋಗಳನ್ನು ಡಿಲೀಟ್ ಮಾಡಿರುವುದರ ಜೊತೆಗೆ ತಮ್ಮ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದಾರೆ. ಹೀಗಾಗಿ ಇಂಥದ್ದೊಂದು ಗಾಳಿ ಸುದ್ದಿ ಹಬ್ಬಿತ್ತು. ಈಗ ತಾಯ್ತನದ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ

More articles

Latest article