‘ಮಂಜುಮ್ಮೆಲ್ ಬಾಯ್ಸ್’ಗೆ ಲೀಗಲ್ ನೋಟೀಸ್ ಕಳುಹಿಸಿದ ಇಳಯರಾಜ : ಕಣ್ಮಣಿ ಹಾಡಿಗೆ ಕಂಟಕ

Most read

ಮಂಜುಮ್ಮೆಲ್ ಬಾಯ್ಸ್ ಇತ್ತಿಚೆಗಷ್ಟೇ ಮಲಯಾಳಂ ಇಂಡಸ್ಟ್ರಿಯನ್ನು ಅಲುಗಾಡಿಸಿದ ಸಿನಿಮಾ. ಅತಿ ಹೆಚ್ಚು ಗಳಿಕೆ ಕಂಡು ಬೇರೆ ಬೇರೆ ಇಂಡಸ್ಟ್ರಿಯವರು ಕೂಡ ತಿರುಗಿ ನೋಡುವಂತೆ ಮಾಡಿದ ಸಿನಿಮಾ. ಬರೋಬ್ಬರಿ 200 ಕೋಟಿ ಬಾಚಿಕೊಂಡ ಸಿನಿಮಾ. ಆದರೆ ಇದೀಗ ಇಳಯರಾಜ ಅವರು ಸಿನಿಮಾ ತಂಡಕ್ಕೆ ಲೀಗಲ್ ನೋಟೀಸ್ ಕೊಟ್ಟಿದ್ದಾರೆ.

ಯಾರ ಸೋಷಿಯಲ್ ಮೀಡಿಯಾದಲ್ಲಿ ನೋಡಿದರು ‘ಕಣ್ಮಣಿ’ ಹಾಡಿಗೊಂದು ರೀಲ್ಸ್ ಇರ್ತಾ ಇತ್ತು. ನೋಡ ನೋಡುತ್ತಲೇ ಟ್ರೆಂಡ್ ಆಗಿದ್ದಂತ ಹಾಡು ಅದು. ಇದೀಗ ಆ ಹಾಡಿನಿಂದಾನೇ ಸಂಕಷ್ಟ ಎದುರಾಗಿದೆ. ಈ ಹಾಡಿನ ಟ್ಯೂನ್ ಹಾಕಿದ್ದು ಸಂಗೀತ ಮಾಂತ್ರಿಕ ಇಳಯರಾಜ. ಕಮಲ್ ಹಾಸನ್ ನಟನೆಯ ‘ಗುಣ’ ಸಿನಿಮಾಕ್ಕಾಗಿ. ಆದರೆ ಈ ಸಿನಿಮಾದಲ್ಲೂ ಗುಣ ಸಿನಿಮಾ ಶೂಟ್ ಆದ ಲೊಕೇಶನ್ ಗೆ ಹೋದ ಮೇಲೆಯೇ ಕಥೆ ಟರ್ನಿಂಗ್ ಪಾಯಿಂಟ್ ತೆಗೆದುಕೊಳ್ಳುವುದು. ಅದೇ ಟ್ಯೂನ್ ಅನ್ನು ಅನುಮತಿ ಇಲ್ಲದೆ ಬಳಸಿಕೊಂಡಿದ್ದಾರೆಂದು ಲೀಗಲ್ ನೋಟೀಸ್ ನೀಡಲಾಗಿದೆ.

ಲೀಗಲ್ ನೋಟೀಸ್ ನಲ್ಲಿ ‘ಈ ಟ್ಯೂನ್ ಅನ್ನು ಅನುಮತಿ ಇಲ್ಲದೆ ಬಳಸಿಕೊಳ್ಳಲಾಗಿದೆ. ಸಿನಿಮಾದ ನಿರ್ಮಾಪಕರು ನನ್ನೊಂದಿಗೆ ಸರಿಯಾದ ರೀತಿಯಲ್ಲಿ ಅನುಮತಿ ಪಡೆಯಬೇಕು. ಇಲ್ಲವಾದರೆ ಸಿನಿಮಾದಿಂದ ಈ ಹಾಡನ್ನು ತೆಗೆದು ಹಾಕಬೇಕು’ ಎಂದು ನೋಟೀಸ್ ನೀಡಿದ್ದಾರೆ. 1990ರಲ್ಲಿ ಕಮಲ್ ಹಾಸನ್ ನಟಿಸಿದ್ದ ಗುಣ ಸಿನಿಮಾಗಾಗಿ ಇಳಯರಾಜ ಕಣ್ಮಣಿ ಅನ್ಬೋಡು ಹಾಡನ್ನು ಕಂಪೋಸ್ ಮಾಡಿದ್ದರು. ಈ ಹಾಡನ್ನು ತಮಿಳುನಾಡಿನ ಕೊಡೈಕೆನಾಲ್ ನ ಗುಹೆಯೊಂದರಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆದರೆ ಇಂದು ಸೋಷಿಯಲ್ ಮೀಡಿಯಾ ಸಿಕ್ಕಾಪಟ್ಟೆ ಸ್ಟ್ರಾಂಗ್ ಆಗಿರುವ ಕಾರಣ, ಈಗ ವೈರಲ್ ಆಗುತ್ತಿದೆ.

More articles

Latest article