ರೈತ ಹೋರಾಟಗಾರ ನಂಜುಂಡಸ್ವಾಮಿ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಭಾವಚಿತ್ರವನ್ನು ಇಟ್ಟುಕೊಂಡು, ತುರುವೇಕೆರೆ ತಾಲೂಕು ಕಚೇರಿಯ ಮುಂಭಾಗ ವಿಜಿಕುಮಾರ್ ಎಂಬ ಯುವ ರೈತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ತಾಲೂಕು ಕಚೇರಿ ಆಫೀಸ್ ಬಗ್ಗೆ ದಾಖಲೆ ಪತ್ರಗಳನ್ನು ಮಾಹಿತಿ ಹಕ್ಕು ನಿಯಮದಡಿ ಮಾಹಿತಿ ನೀಡುವಂತೆ ಕೇಳಿದ್ದ ಯುವಕ, ಬಳಿಕ ಮಾಹಿತಿ ಹಕ್ಕು ಅಧಿನಿಯಮದ ಅರ್ಜಿ ಗೆ ಪುಟಕ್ಕೆ 2ರೂನಂತೆ 50ಪುಟಗಳಿಗೆ ಹಣ ಸಂದಾಯ ಮಾಡುವಂತೆ ಅರ್ಜಿದಾರನಿಗೆ ತಾಲೂಕು ಕಚೇರಿ ವತಿಯಿಂದ ನೋಟೀಸ್ ನೀಡಿತ್ತು. ಅದರಂತೆ ನೋಟೀಸ್ ಪಡೆದು ಕೊಂಡು ಪುಟಕ್ಕೆ 2 ರೂ ನಂತೆ ಹಣ ಸಂದಾಯ ಮಾಡಿ, ಒಂದು ವಾರ ಕಳೆದರು, ಅರ್ಜಿದಾರನು ಕೇಳಿದ್ದ ಯಾವುದೇ ದಾಖಲೆಗಳನ್ನು ನೀಡಿರಲಿಲ್ಲ ಎಂದು ಆರೋಪಿಸಲಾಗಿದೆ.
ಇನ್ನು ತಾಲೂಕು ಕಚೇರಿಯಲ್ಲಿ ಸಂಬಂದ ಪಟ್ಟ ಸಿಬ್ಬಂದಿಗಳನು ವಿಚಾರಿಸಿದರೆ ಒಬ್ಬರ ಮೇಲೆ ಒಬ್ಬರು ನೆಪಹೇಳಿಕೊಂಡು ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ತಾಲೂಕು ಕಚೇರಿಯಲ್ಲಿ ಮಾಹಿತಿ ಹಕ್ಕಿನಡಿ ಕೇಳಿದ್ದ ಮಾಹಿತಿ ಸಿಗದ ಹಿನ್ನಲೆ ವಿಜಿ ಕುಮಾರ್ ಉಪವಾಸ ಸತ್ಯಾಗ್ರಹದ ಮೊರೆ ಹೋಗಿದ್ದಾನೆ. ತಾಲೂಕು ಆಡಳಿತದ ವಿರುದ್ದ ಅಸಮಧಾನ ಹೊರಹಾಕಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾನೆ.
ಈ ಕುರಿತು ತುರುವೇಕೆರೆ ತಹಶೀಲ್ದಾರ್ ರೇಣುಕುಮಾರ್ ಅವರನ್ನು ಕನ್ನಡ ಪ್ಲಾನೆಟ್ ಸಂಪರ್ಕಿಸಿದಾಗ, ವಿಜಯ್ ಎಂಬುವವರ ಆರ್ ಟಿ ಐ ಅರ್ಜಿ ಸಲ್ಲಿಸಿದ್ದಾರೆ. ಮಾಹಿತಿ ನೀಡುವುದನ್ನು ನಮ್ಮ ಸಿಬ್ಬಂದಿಗಳು ತಡ ಮಾಡಿದ್ದಾರೆ. ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಸುದ್ದಿ ನನ್ನ ಗಮನಕ್ಕೆ ಬಂದ ತಕ್ಷಣ ಪರಿಹರಿಸಿದ್ದೇನೆ ಎಂದು ಹೇಳಿದ್ದಾರೆ.
ವಿಜಯ್ ಅವರನ್ನು ಸಂಪರ್ಕಿಸಲು ಪ್ರಯತ್ನ ಮಾಡಿದಾಗ ಅವರು ಕರೆಯನ್ನು ಸ್ವೀಕರಿಸಲಿಲ್ಲ.