ಅಮ್ಮನಿಗೆ ವಿಶೇಷ ಗೌರವ ಕೊಟ್ಟ ವಿಜಯ್ ಸೂರ್ಯ : ಹೆಸರನ್ನೇ ಬದಲಿಸಿಕೊಂಡರು..!

Most read

ತಾಯಿ ಅಂದ್ರೆ ಎಲ್ಲಾ ಮಕ್ಕಳಿಗೂ ಆಕಾಶದೆತ್ತರದಷ್ಟು ಪ್ರೀತಿ. ಅವಳೊಬ್ಬಳು ಜೊತೆಗಿದ್ದರೆ ಸಾಕು ಅದೆನೋ ಒಂಥರ ಧೈರ್ಯ. ಬದುಕು ಸರಳವೆನಿಸುತ್ತದೆ. ತಾಯಿಯೂ ಅಷ್ಟೇ ಎಲ್ಲಾ ಕಷ್ಟ, ನೋವುಗಳನ್ನ ನುಂಗಿಕೊಂಡು ಮಕ್ಕಳಿಗೆ ಸದಾ ಒಳಿತನ್ನೇ ಬಯಸುತ್ತಾಳೆ. ತಾಯಂದಿರ ದಿನಕ್ಕೆ ಮಕ್ಕಳು ವಿಶೇಷವಾದದೇನಾದರೂ ಅಮ್ಮನಿಗೆ ಕೊಡಬೇಕೆಂದು ಬಯಸುತ್ತಿರುತ್ತಾರೆ. ಇದೀಗ ಕಿರುತೆರೆ ನಟ ವಿಜಯ್ ಸೂರ್ಯ ಒಂದು ಸಾರ್ಥಕವಾದಂತ ಕೆಲಸ ಮಾಡಿದ್ದಾರೆ. ಅಮ್ಮನ ಮೇಲಿನ ಪ್ರೀತಿಯಿಂದ ತಮ್ಮ ಹೆಸರನ್ನೇ ಬದಲಾಯಿಸಿಕೊಂಡಿದ್ದಾರೆ.

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಸಿದ್ದಾರ್ಥ್ ಪಾತ್ರದ ಮೂಲಕ ಎಲ್ಲರಿಗೂ ಪರಿಚಿತರು. ಬಳಿಕ ಸಿನಿಮಾದಲ್ಲೂ ನಟನಾಗಿ ಮಿಂಚಿದವರು. ಇತ್ತಿಚೆಗೆ ನಮ್ಮ ಲಚ್ಚಿ ಮೂಲಕ ಸಂಗಮ್ ಎಂಬ ಹೆಸರಿನಲ್ಲಿ ಸಂಗೀತಗಾರನಾಗಿ ಕಾಡಿದವರು. ಇದೀಗ ತಮ್ಮ ರಿಯಲ್ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ವಿಜಯ್ ಸೂರ್ಯ ಇನ್ಮುಂದೆ ‘ವಿಜಯ್ ಲಲಿತಾ ಸೂರ್ಯ’ ಆಗಿದ್ದಾರೆ‌. ಈ ಬಗ್ಗೆ ನಟ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

https://www.instagram.com/p/C63Q7ZHPL31/?igsh=M2xkZTZldXY3bzdk

‘ನನ್ನ ಅಮ್ಮ ನನ್ನ ಉಸಿರು. ಆಕೆಯ ಹೆಸರು ಲಲಿತಾ. ಇಂದಿನಿಂದ ನನ್ನ ಹೆಸರಿನ ಜೊತೆಗೆ ನನ್ನ ಅಮ್ಮ ಲಲಿತಾ ಹೆಸರು ಕೂಡ ಇರುತ್ತದೆ. ಹಾಗಾಗಿ ನಾನು ಇನ್ಮುಂದೆ ವಿಜಯ್ ಲಲಿತಾ ಸೂರ್ಯ. ಇದು ನಾನು ಅಮ್ಮನಿಗೆ ಕೊಡುತ್ತಿರುವ ಗೌರವ’ ಎಂಬುದಾಗಿ ತಿಳಿಸಿದ್ದಾರೆ.

ವಿಜಯ್ ಸೂರ್ಯಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಅದರಲ್ಲೂ ಕಿರುತೆರೆಯಲ್ಲಿ ಮಹಿಳಾ ಅಭಿಮಾನಿಗಳೇ ಜಾಸ್ತಿ. ಅಗ್ನಿಸಾಕ್ಷಿ ಧಾರಾವಾಹಿಯಿಂದಾನೂ ವಿಜಯ್ ಸೂರ್ಯ ಮೇಲೆ ಕ್ರೇಜ್ ಜಾಸ್ತಿ ಇದೆ. ಸದ್ಯ ಸೀರಿಯಲ್ ಸರದಿ ಮುಗಿದಿದೆ. ಸಿನಿಮಾಗಳ ಕಡೆಯೂ ಹೆಚ್ಚಿನ ಗಮನ ನೀಡಿದ್ದಾರೆ. ಬಿಗ್ ಸ್ಕ್ರೀನ್ ಮೇಲೆ ಇವರನ್ನು ನೋಡುವುದೇ ಚೆಂದ ಅಂತಾರೆ ಲೇಡೀಸ್ ಫ್ಯಾನ್ಸ್.

More articles

Latest article