ರಾಜ್ಯದ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಮುಕ್ತಾಯ, 64.37% ರಷ್ಟು ಮತದಾನ

Most read

ಬೆಂಗಳೂರು: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ ಸಣ್ಣಪುಟ್ಟ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತವಾಗಿ ನಡೆಯಿತು.

ರಾಜ್ಯದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಶೇ. 64.37ರಷ್ಟು ಮತದಾನ ನಡೆಯಿತು.

ರಾಜ್ಯದ 14 ಕ್ಷೇತ್ರಗಳಲ್ಲಿ ನಡೆದ ಶೇಖಡಾವಾರು ಮತದಾನದ ವಿವರ ಈ ಕೆಳಕಂಡಂತಿದೆ.

  1. ಬೆಂಗಳೂರು ಸೆಂಟ್ರಲ್ – 49.21%
  2. ಬೆಂಗಳೂರು ಉತ್ತರ – 50.91%
  3. ಬೆಂಗಳೂರು ಗ್ರಾಮಾಂತರ – 61.78%
  4. ಬೆಂಗಳೂರು ದಕ್ಷಿಣ – 49.37%
  5. ಚಾಮರಾಜನಗರ – 69.60%
  6. ಚಿಕ್ಕಬಳ್ಳಾಪುರ – 71.85%
  7. ಚಿತ್ರದುರ್ಗ -67.52%
    8.ದಕ್ಷಿಣ ಕನ್ನಡ – 71.83%
  8. ಹಾಸನ – 72.13%
  9. ಕೋಲಾರ – 73.25%
  10. ಮಂಡ್ಯ – 74.87%
  11. ಮೈಸೂರು – 66.96%
  12. ಉಡುಪಿ-ಚಿಕ್ಕಮಗಳೂರು – 72.69%
  13. ತುಮಕೂರು – 72.10%

ಅತಿಹೆಚ್ಚು ಮತದಾನ ಮಂಡ್ಯದಲ್ಲಿ ನಡೆದಿದ್ದರೆ, ಅತಿ ಕಡಿಮೆ ಮತದಾನ ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ನಡೆದಿದೆ. ಬೆಂಗಳೂರಿನ ಎಲ್ಲ ಕ್ಷೇತ್ರಗಳಲ್ಲಿ ಎಂದಿನಂತೆ ಕಡಿಮೆ ಪ್ರಮಾಣದ ಮತದಾನವಾಗಿದೆ. ‌

More articles

Latest article