ದೇಶದಲ್ಲಿ ಮತ್ತೆ ಕೋವಿಡ್ ರೂಪಾಂತರ ಭೀತಿ ಕಾಡುತ್ತಿದ್ದು, ಕರ್ನಾಟಕದಲ್ಲಿ ಕೋವಿಡ್ ಜೆನ್-1 ರೂಪಾಂತರ ಪ್ರಕರಣಗಳ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ ೧೪೮ ಕೋವಿಡ್ ಪಾಸಿಟಿವ್ ಕೇಸ್ಗಳು ದಾಖಲಾಗಿದ್ದು, ಒಂದು ಸಾವು ವರದಿಯಾಗಿದೆ ಎಂದು ಆರೋಗ್ಯಇಲಾಖೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿದುಬಂದಿದೆ.
ರಾಜ್ಯದಲ್ಲಿ ಒಟ್ಟು 1144 ಸಕ್ರಿಯ ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರದಲ್ಲಿ 545 ಸಕ್ರಿಯ ಪ್ರಕರಣಗಳು, ಬೆಂಗಳೂರು ಗ್ರಾಮಾಂತರದಲ್ಲಿ 28 ಮತ್ತು ಉಳಿದಂತೆ ಬೇರೆ ಬೇರೆ ಜಿಲ್ಲೆಗಳಲ್ಲಿ 199 ಪ್ರಕರಣಗಳು ದಾಖಲಾಗಿದೆ.
ಹೆಚ್ಚುತ್ತಿರುವ ಪ್ರಕರಣಗಳನ್ನು ಪರಿಹರಿಸಲು ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿದೆ. ಜನವರಿ 2 ರ ಹೊತ್ತಿಗೆ, ಭಾರತದಲ್ಲಿ 4565 ಸಕ್ರಿಯ COVID-19 ಪ್ರಕರಣಗಳಿವೆ.