Saturday, December 7, 2024

ನಿತ್ಯ ಕೋರೆಗಾಂವ್…

Most read

ಕವನ

ಕೋರೆಗಾವ್ ಯುದ್ಧ
ನಿತ್ಯ ನಡೆಯಬೇಕು
ನೀನು ಎಂದವನಿಗೆ
ನಿಮ್ಮಪ್ಪ ಎನಬೇಕು

ಕೋರೆಗಾಂವ್ ಸದ್ದು
ನಿತ್ಯ ಮೊಳಗಬೇಕು
ನೀರು ಕೊಡಲ್ಲ ಎಂದವನಿಗೆ
ನೀರಿಳಿಸಬೇಕು

ಕೋರೆಗಾಂವ್ ಕಹಳೆ
ಸದಾ ಮೊಳಗಬೇಕು
ಮುಟ್ಟಿಸಿಕೊಳ್ಳದವನ ಮುಟ್ಟದೆ
ನಾವೇ ದೂರ ತಳ್ಳಬೇಕು

ಕೋರೆಗಾಂವ್ ಚಿಂತನೆ
ನಿತ್ಯ ನಡೆಯಬೇಕು
ಭೇದ ಭಾವ ನಡೆಸುವವನ ಬಳಿ
ವ್ಯಾಪಾರ ನಿಲ್ಲಿಸಬೇಕು

ಕೋರೆಗಾಂವ್ ದಿನಾಚರಣೆ
ನಿತ್ಯ ಆಚರಿಸಬೇಕು
ಅಸ್ಪೃಶ್ಯತೆ ಆಚರಿಸುವವರಿಗೆ
ಅಲ್ಲೇ ರಿವರ್ಸ್ ಆಗಬೇಕು

ಕೋರೆಗಾಂವ್ ಭಾವನೆ
ಸದಾ ಮನದಲ್ಲಿರಬೇಕು
ದೇವಸ್ಥಾನಕ್ಕೆ ಕರೆದವನಿಗೆ
ಬುದ್ಧನ ತೋರಿಸಬೇಕು
ಹಾದಿಯಲಿ ಸಾಗಬೇಕು

More articles

Latest article