Saturday, May 18, 2024

ಬಿಜೆಪಿ ಮುಖಂಡ ರಂಜಿತ್ ಶ್ರೀನಿವಾಸನ್ ಹತ್ಯೆ ಪ್ರಕರಣ: 15 PFI ಸದಸ್ಯರಿಗೆ ಮರಣದಂಡನೆ

Most read

2021ರಲ್ಲಿ ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಗೆ ಕೇರಳ ನ್ಯಾಯಾಲಯ ಮಂಗಳವಾರ ಮರಣದಂಡನೆ ವಿಧಿಸಿದೆ. ಎಲ್ಲಾ ಅಪರಾಧಿಗಳೂ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರಾಗಿದ್ದರು.

ರಂಜಿತ್ ಶ್ರೀನಿವಾಸನ್ ಬಿಜೆಪಿ ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿದ್ದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಅವರನ್ನು ಡಿಸೆಂಬರ್ 19, 2021 ರಂದು ಅಲಪ್ಪುಳ ಪಟ್ಟಣದ ವೆಲ್ಲಕಿನಾರ್‌ನಲ್ಲಿ ಕುಟುಂಬದ ಎದುರೇ ಕೊಚ್ಚಿ ಕೊಲ್ಲಲಾಗಿತ್ತು. ಅವರ ಕುಟುಂಬವು ಈ ಅಪರಾಧಕ್ಕೆ ಸಾಕ್ಷಿಯಾಗಿದೆ.

ಪ್ರಾಸಿಕ್ಯೂಷನ್ ಪ್ರಕಾರ, ಈ ಪ್ರಕರಣದಲ್ಲಿ ನೇರವಾಗಿ ಎಂಟು ಮಂದಿ ಭಾಗಿಯಾಗಿದ್ದಾರೆ. ದಾಳಿಕೋರರೊಂದಿಗೆ ಇತರ ನಾಲ್ವರು ಆಯುಧಗಳೊಂದಿಗೆ ಸ್ಥಳಕ್ಕೆ ಬಂದಿದ್ದಾರೆ. ರಂಜಿತ್ ತಪ್ಪಿಸಿಕೊಳ್ಳದಂತೆ ಇತರರು ತಡೆದ್ದಾರೆ. ಮೃತನ ದೇಹದ ಮೇಲೆ 56 ಗಾಯಗಳಿದ್ದವು ಎಂದು ಹೇಳಿದೆ.

ಬಿಜೆಪಿ ನಾಯಕ ರಂಜಿತ್ ಶ್ರೀನಿವಾಸನ್ ಅವರನ್ನು ಅವನ ತಾಯಿ, ಹೆಂಡತಿ ಮತ್ತು ಮಗುವಿನ ಮುಂದೆ ಹತ್ಯೆ ಮಾಡಿದ್ದಾರೆ ಎಂದು ಪ್ರಾಸಿಕ್ಯೂಷನ್ ಹೇಳಿದೆ. ಅಪರಾಧಿಗಳನ್ನು ನೈಸಾಮ್, ಅಜ್ಮಲ್, ಅನೂಪ್, ಮೊಹಮ್ಮದ್ ಅಸ್ಲಾಂ, ಸಲಾಂ, ಸಫರುದ್ದೀನ್, ಅಬ್ದುಲ್ ಕಲಾಂ, ಮನ್ಶಾದ್, ಜಸೀಬ್ ರಾಜಾ, ನವಾಸ್, ಸಮೀರ್, ನಜೀರ್, ಜಾಕೀರ್ ಹುಸೇನ್, ಶಾಜಿ ಮತ್ತು ಶೆರ್ನಾಸ್ ಅಶ್ರಫ್ ಎಂದು ಗುರುತಿಸಲಾಗಿದೆ.

More articles

Latest article