ಮಡಿವಾಳ ಕೆರೆ ಪ್ರದೇಶದಲ್ಲಿ ಪಾಲಿಕೆ ಹಾಗೂ ಪರಿಸರ ಕಾರ್ಯಕರ್ತ ಪ್ಲಾಗ್ ರಾಜ ನೇತೃತ್ವದ ತಂಡದಿಂದ 120 ಕೆಜಿ ಪ್ಲಾಸ್ಟಿಕ್ ತೆರವು

ಬೆಂಗಳೂರು ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಮಡಿವಾಳ ಕೆರೆಯ ಆವರಣದಲ್ಲಿ ಪರಿಸರ ಸಂರಕ್ಷಣೆ ಹಾಗೂ ಜಲಮೂಲಗಳ ಸ್ವಚ್ಛತೆಯ ನಿಟ್ಟಿನಲ್ಲಿ ಪಾಲಿಕೆ ಹಾಗೂ ‘ದಿ ಇಂಡಿಯನ್ ಪ್ಲಾಗರ್ಸ್ ಆರ್ಮಿ’ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದ (ಬನ್ನೇರುಘಟ್ಟ ಕ್ಯಾಂಪಸ್) ವಿದ್ಯಾರ್ಥಿಗಳ ಸಹಯೋಗದೊಂದಿಗೆ ಬೃಹತ್ ಪ್ಲಾಗಿಂಗ್ (ಜಾಗಿಂಗ್ ಜೊತೆಗೆ ಪ್ಲಾಸ್ಟಿಕ್ ಆಯುವ) ಅಭಿಯಾನಕ್ಕೆ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಚಾಲನೆ ನೀಡಿದರು.

75 ನಿಮಿಷಗಳಲ್ಲಿ 120 ಕೆಜಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ
ಕಳೆದ ಒಂದು ದಶಕದಿಂದ ನಿರಂತರವಾಗಿ ಪರಿಸರ ಜಾಗೃತಿಯಲ್ಲಿ ತೊಡಗಿಸಿಕೊಂಡಿರುವ ಪ್ಲಾಗರ್ಸ್ ಆರ್ಮಿಯ 1032ನೇ ಪ್ಲಾಗಿಂಗ್ ಅಭಿಯಾನ ಅಂಗವಾಗಿ ವಾರಾಂತ್ಯದ ಈ ವಿಶೇಷ ಸ್ವಚ್ಛತಾ ಅಭಿಯಾನದಲ್ಲಿ 43 ಮಂದಿ ಪ್ಲಾಗರ್‌ಗಳು ಹಾಗೂ ವಿದ್ಯಾರ್ಥಿಗಳು ಕೇವಲ 75 ನಿಮಿಷಗಳಲ್ಲಿ ಕೆರೆಯ ಸುತ್ತಮುತ್ತಲಿನ 100 ಮೀಟರ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಾಟಲ್ ಗಳು, ಹಾಲಿನ ಪ್ಯಾಕೆಟ್‌ಗಳು, ಚಾಕೊಲೇಟ್ ರ‍್ಯಾಪರ್‌ಗಳು ಹಾಗೂ ಪ್ಲಾಸ್ಟಿಕ್ ಸ್ಟ್ರಾಗಳು ಸೇರಿದಂತೆ ಒಟ್ಟು 120 ಕೆಜಿ ಏಕಬಳಕೆಯ ಪ್ಲಾಸ್ಟಿಕ್ (Single-use plastics) ತ್ಯಾಜ್ಯವನ್ನು ಆಯ್ದು ಪ್ರತ್ಯೇಕ ಚೀಲಗಳಲ್ಲಿ ಶೇಖರಿಸಿ ಪಾಲಿಕೆಯ ಒಣಕಸ ಸಂಗ್ರಹಣಾ ಆಟೋಗೆ ನೀಡಲಾಯಿತು.

ಅಭಿಯಾನದಲ್ಲಿ ಅಧಿಕಾರಿಗಳು ಹಾಗೂ ಮಾರ್ಷಲ್‌ಗಳು ಭಾಗಿ
ಈ ಅಭಿಯಾನದಲ್ಲಿ ಪಾಲಿಕೆಯ ಆಯುಕ್ತರಾದ ಶ್ರೀ ರಮೇಶ್, ಅಧಿಕಾರಿಗಳು ಹಾಗೂ ಪಾಲಿಕೆಯ ಮಾರ್ಷಲ್‌ಗಳು ಖುದ್ದು ಭಾಗವಹಿಸಿ ಸ್ವಚ್ಛತಾ ಕಾರ್ಯಕರ್ತರನ್ನು ಹುರಿದುಂಬಿಸಿ, ಅಭಿಯಾನದಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ಸ್ಥಳದಲ್ಲೇ ಸಮರ್ಪಕವಾಗಿ ವಿಂಗಡಿಸಿ, ಪಾಲಿಕೆಯ ತ್ಯಾಜ್ಯ ಸಂಗ್ರಹಣಾ ವಾಹನಗಳ ಮೂಲಕ ವೈಜ್ಞಾನಿಕ ಹಾಗೂ ಜವಾಬ್ದಾರಿಯುತ ರೀತಿಯಲ್ಲಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಯಿತು.

ತ್ಯಾಜ್ಯ ನಿಯಂತ್ರಣಕ್ಕೆ ‘ಪ್ಲಾಗ್ ರಾಜಾ’ ಜಾಗೃತಿ ಕರೆ
ಈ ಅಭಿಯಾನದ ನೇತೃತ್ವ ವಹಿಸಿದ್ದ ‘ಪ್ಲಾಗ್ ರಾಜಾ’ ಅವರು ಮಾತನಾಡಿ, “ಕೇವಲ ರಸ್ತೆ ಮತ್ತು ಕೆರೆಗಳಿಂದ ಕಸ ಹೆಕ್ಕುವುದಷ್ಟೇ ಪ್ಲಾಗಿಂಗ್‌ನ ಮುಖ್ಯ ಉದ್ದೇಶವಲ್ಲ ಕಸ ಉತ್ಪತ್ತಿಯಾಗುವ ಮೂಲದಲ್ಲೇ ಅದನ್ನು ತಡೆಗಟ್ಟುವುದು ಮುಖ್ಯ. ಕಸ ಮಿಶ್ರಣವಾದರೆ ಅದನ್ನು ಯಾವುದೇ ಕಾರಣಕ್ಕೂ ಮರುಬಳಕೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ಮನೆಯಿಂದಲೇ ನೀರಿನ ಬಾಟಲಿ ಕೊಂಡೊಯ್ಯುವ ಮೂಲಕ ಏಕಬಳಕೆಯ ಪ್ಲಾಸ್ಟಿಕ್ ಬಳಕೆಯನ್ನು ಮೊದಲ ಹಂತದಲ್ಲೇ ಸಂಪೂರ್ಣವಾಗಿ ತಿರಸ್ಕರಿಸಬೇಕು. ಪ್ರತಿಯೊಬ್ಬರೂ ತಮ್ಮ ಜೀವನಶೈಲಿಯಲ್ಲಿ ಬದಲಾವಣೆ, ಚಿಂತನೆ, ಕಸ ನಿರ್ವಹಣೆ, ಪ್ಲಾಸ್ಟಿಕ್ ಬಳಕೆ ನಿರಾಕರಣೆ ಹಾಗೂ ಪ್ರಕೃತಿಗೆ ಗೌರವ ಎಂಬ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಸ್ವಚ್ಛ ಬೆಂಗಳೂರಿಗಾಗಿ ಪರಿಸರ ಸಂರಕ್ಷಣಾ ಪ್ರತಿಜ್ಞೆ
ಕಾರ್ಯಕ್ರಮದಲ್ಲಿ ಆಯುಕ್ತರು, ವಿದ್ಯಾರ್ಥಿಗಳು ಹಾಗೂ ಪರಿಸರ ಪ್ರೇಮಿಗಳು ಕೈಚಾಚಿ, “ಇಂದಿನಿಂದ, ಈ ಕ್ಷಣದಿಂದ ನನ್ನ ಕಸ ನನ್ನ ಜವಾಬ್ದಾರಿ, ನಿಮ್ಮ ಕಸ ನಿಮ್ಮ ಜವಾಬ್ದಾರಿ, ನಮ್ಮೆಲ್ಲರ ಕಸ ನಮ್ಮೆಲ್ಲರ ಜವಾಬ್ದಾರಿ. ಇದು ಸಾಮಾಜಿಕ ಜಾಲತಾಣಗಳ ಪ್ರಚಾರಕ್ಕಾಗಿ ಅಲ್ಲ, ನಮ್ಮ ಸ್ವಚ್ಛ ಬೆಂಗಳೂರು, ಸ್ವಚ್ಛ ಕರ್ನಾಟಕ ಹಾಗೂ ಸ್ವಚ್ಛ ಭಾರತಕ್ಕಾಗಿ” ಎಂದು ಏಕಬಳಕೆಯ ಪ್ಲಾಸ್ಟಿಕ್ ನಿರಾಕರಣೆ ಹಾಗೂ ಸಮರ್ಪಕ ತ್ಯಾಜ್ಯ ವಿಂಗಡಣೆಯ ದೃಢ ಸಂಕಲ್ಪದೊಂದಿಗೆ ಸಾಮೂಹಿಕ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ನಗರದ ಕೆರೆಗಳು ಮತ್ತು ಪರಿಸರವನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ನಾಗರಿಕರು, ಶಿಕ್ಷಣ ಸಂಸ್ಥೆಗಳು ಹಾಗೂ ಸ್ಥಳೀಯ ಆಡಳಿತ ಕೈಜೋಡಿಸಿ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಆಯುಕ್ತರು ತಿಳಿಸಿದರು.

More articles

Latest article

Most read