ನೀಟ್‌ ಪರೀಕ್ಷೆ ರದ್ದಾದ ಬಳಿಕ ಇದುವರೆಗೂ 11 ಮಂದಿ ನಿಧನ

ನವದೆಹಲಿ :  ನೀಟ್‌ NEET-UG ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ   ಹಿನ್ನೆಲೆಯಲ್ಲಿ ಪರೀಕ್ಷೆ ರದ್ದುಗೊಂಡ ನಂತರ ಮತ್ತು ಜೂನ್ 21ರಂದು ಮರುಪರೀಕ್ಷೆ ನಿಗದಿಯಾಗುವವರೆಗೆ ಕಳೆದ 46 ದಿನಗಳಲ್ಲಿ, ದೇಶದಾದ್ಯಂತ ಕನಿಷ್ಠ 11  ನೀಟ್‌ ಅಭ್ಯರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ದಾಖಲೆಗಳು, ಕುಟುಂಬದವರ ಹೇಳಿಕೆಗಳು ಮತ್ತು ಮಾಧ್ಯಮ ವರದಿಗಳು  ಹೇಳಿವೆ. 

ಹಲವು ಪ್ರಕರಣಗಳಲ್ಲಿ ತನಿಖೆ ಇನ್ನೂ ನಡೆಯುತ್ತಿದ್ದು, ಈ ಸಾವುಗಳಿಗೆ ನೇರವಾಗಿ NEET ಪರೀಕ್ಷೆಯೇ ಕಾರಣ ಎಂಬುದನ್ನು ಅಧಿಕಾರಿಗಳು ಅಧಿಕೃತವಾಗಿ ದೃಢಪಡಿಸಿಲ್ಲ. ಆದಾಗ್ಯೂ, ಕುಟುಂಬ ಸದಸ್ಯರ ಹೇಳಿಕೆಗಳು, ಕೆಲವು ಆತ್ಮಹತ್ಯೆ ಪತ್ರಗಳು ಹಾಗೂ ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯ ಒತ್ತಡ ಪ್ರಮುಖ ಕಾರಣವಾಗಿರಬಹುದು ಎಂಬ ಆತಂಕ ವ್ಯಕ್ತವಾಗಿದೆ.

ಪ್ರಶ್ನೆಪತ್ರಿಕೆ ಸೋರಿಕೆ ಬೆಳಕಿಗೆ ಬರುವ ಮೊದಲು 551 ನಗರಗಳಲ್ಲಿ 22.7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಬಳಿಕ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಯಿತು.

ಈಗ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವಾಗ ಮತ್ತು ಸಿಬಿಐ Central Bureau of Investigation ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ಮುಂದುವರಿಸುತ್ತಿರುವ ಸಂದರ್ಭದಲ್ಲಿ, ತಮಿಳು ನಾಡು, ರಾಜಸ್ಥಾನ, ದೆಹಲಿ, ಉತ್ತರಪ್ರದೇಶ, ಉತ್ತರಾಖಂಡ, ಮಹಾರಷ್ಟ್ರ ಹಾಗೂ ಕರ್ನಾಟಕದಲ್ಲಿ ವರದಿಯಾಗಿರುವ ಸಾವುಗಳು ಈ ವಿವಾದದ ಮಾನವೀಯ ಬೆಲೆಯನ್ನು ಎತ್ತಿ ತೋರಿಸಿವೆ.
ತಮಿಳುನಾಡು : ಕೊಯಂಬತ್ತೂರಿನಲ್ಲಿ  ನಲ್ಲಿ 19 ವರ್ಷದ  ನೀಟ್ ಅಭ್ಯರ್ಥಿಯೊಬ್ಬಳ ಸಾವಿನ ಘಟನೆ, ‌ ಕಾರ್ಮಿಕ ಸಂಘದ ನಾಯಕರೊಬ್ಬರ ಪುತ್ರಿಯಾಗಿದ್ದು, 12ನೇ ತರಗತಿಯಲ್ಲಿ 96.7 ಶೇಕಡಾ ಅಂಕಗಳನ್ನು ಪಡೆದಿದ್ದಳು. ನಂತರ ಕಾಲೇಜಿನಲ್ಲೂ ಅಗ್ರಸ್ಥಾನ ಪಡೆದಿದ್ದಳು. 
ರಾಜಸ್ಥಾನ   23 ವರ್ಷದ ವಿದ್ಯಾರ್ಥಿಯು ಪರೀಕ್ಷೆ ರದ್ದಾದ ಕೆಲವೇ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ. ಆದರೆ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.

ದೆಹಲಿಯಲ್ಲಿ ಮೂರು ಸಾವುಗಳು  ಆಜಾದ್‌ ಪುರ ನಲ್ಲಿ 20 ವರ್ಷದ ನೀಟ್ ಅಭ್ಯರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.  ದಕ್ಷಿಣ-ಪಶ್ಚಿಮ ದೆಹಲಿಯ ಪಾಲಮ್‌ ಕಾಲೋನಿ ಯಲ್ಲಿ 17 ವರ್ಷದ ರೇಣು ಎಂಬ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. 18 ವರ್ಷದ ರೇಣು ಮೀನಾ ಮೂಲತಃ  ಅಲ್ವಾರ್‌  ಜಿಲ್ಲೆಯವಳಾಗಿದ್ದು, ವೈದ್ಯಕೀಯ ಪ್ರವೇಶ ಪರೀಕ್ಷೆಗೆ ತಯಾರಿ ನಡೆಸಲು ದೆಹಲಿಯಲ್ಲಿ ವಾಸಿಸುತ್ತಿದ್ದಳು. ಕುಟುಂಬದವರ ಪ್ರಕಾರ, ಮರುಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಆಕೆ, ಮೂಲ ಪರೀಕ್ಷೆ ರದ್ದಾದ ನಂತರ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಳು. 

ಉತ್ತರ ಪ್ರದೇಶ : ಲಕ್ನೋ ನಗರದ ಐಶ್‌ಬಾಗ್ ಪ್ರದೇಶದ ರೈಲ್ವೆ ಕಾಲೋನಿಯಲ್ಲಿ ವಾಸಿಸುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ನೀಟ್‌  ಪರೀಕ್ಷೆ ಬರೆದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ಉತ್ತರಾಖಂಡ :  ಡೆಹ್ರಾಡೂನ್‌ ನಲ್ಲಿ 23 ವರ್ಷದ ನೀಟ್ ಅಭ್ಯರ್ಥಿಯೊಬ್ಬಳು ಮರುಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಪೊಲೀಸರ ಪ್ರಕಾರ, ಆಕೆ 12ನೇ ತರಗತಿಯಲ್ಲಿ 96.7% ಅಂಕಗಳನ್ನು ಗಳಿಸಿದ್ದಳು ಮತ್ತು ನಂತರ ಕಾಲೇಜಿನಲ್ಲೂ ಅಗ್ರಸ್ಥಾನ ಪಡೆದಿದ್ದಳು.

ಮಹಾರಾಷ್ಟ್ರ ನಾಗ್ಪುರದಲ್ಲಿ  20 ವರ್ಷದ  ನೀಟ್ ಅಭ್ಯರ್ಥಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ. ಆಕೆಯ ಪೋಷಕರಿಗೆ ನಂತರ ದೊರೆತ ಪತ್ರದಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ವಿವಾದ ಮತ್ತು‌ ನೀಟ್ ಪರೀಕ್ಷೆ ರದ್ದಾದದ್ದು ತನ್ನ ನಿರ್ಧಾರಕ್ಕೆ ಕಾರಣವಾಗಿದೆ ಎಂದು ಬರೆದಿದ್ದಾಳೆ ಎನ್ನಲಾಗಿದೆ.

ಕರ್ನಾಟಕ ಕಲಬುರಗಿ ಜಿಲ್ಲೆಯಲ್ಲಿ 18 ವರ್ಷದ ವಿದ್ಯಾರ್ಥಿನಿಯೊಬ್ಬಳು ನೀಟ್ ಪರೀಕ್ಷೆ ರದ್ದಾದ ಕೆಲವೇ ದಿನಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ವರದಿಯಾಗಿದೆ.

ಉತ್ತರ ಪ್ರದೇಶ :  ಲಕ್ಷ್ಮಿಪುರ ಖೇರಿಯಲ್ಲಿ 20 ವರ್ಷದ  ಅಭ್ಯರ್ಥಿಯೊಬ್ಬನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.   ಇದು ಅವನ ಮೂರನೇ ಪ್ರಯತ್ನವಾಗಿದ್ದು, ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡುವ ವಿಶ್ವಾಸದಲ್ಲಿದ್ದನು ಎಂದು ಸಂಬಂಧಿಕರು ಹೇಳಿದ್ದಾರೆ.

ಗುಜರಾತ್ : ಅಹಮದಾಬಾದ್‌ ನಲ್ಲಿ 17 ವರ್ಷದ   ಅಭ್ಯರ್ಥಿಯೊಬ್ಬನು ಮರುಪರೀಕ್ಷೆಗೆ ಹಾಜರಾಗಬೇಕಿದ್ದ ದಿನದ ಕೆಲವೇ ಗಂಟೆಗಳ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ವರದಿಯಾಗಿದೆ.

More articles

Latest article

Most read