ಜರ್ಮನಿ : ಗುರುವಾರ ಜರ್ಮನಿಯ ರಾಜಧಾನಿಯಲ್ಲಿ ಇರಾನ್‌ನ ಗಡಿಪಾರುಗೊಂಡ ಕ್ರೌನ್ ಪ್ರಿನ್ಸ್ ರೆಜಾ ಪಹ್ಲವಿ ಪತ್ರಿಕಾಗೋಷ್ಠಿ ನಡೆಸಿ ಹೊರ ಬರುವಾಗ ಅವರ ಮೇಲೆ ಇರಾನ್ ಅಭಿಮಾನಿಯೊಬ್ಬ ಟೊಮೆಟೊ ಸಾಸ್ ಎರಚಿ ತನ್ನ ಆಕ್ರೋಶ ವ್ಯಕ್ತಪಡಿಸಿದ್ದಾನೆ.
ಪಹ್ಲವಿ ವರದಿಗಾರರನ್ನು ಉದ್ದೇಶಿಸಿ ಮಾತನಾಡಿದ ಸ್ವಲ್ಪ ಸಮಯದ ನಂತರ ಫೆಡರಲ್ ಕಟ್ಟಡದ ಹೊರಗೆ ಈ ಘಟನೆ ನಡೆದಿದೆ. ಅಲ್ಲಿ ಅವರು ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವಿನ ಕದನ ವಿರಾಮದ ಬಗ್ಗೆ ತೀಕ್ಷ್ಣವಾದ ಟೀಕೆಗಳನ್ನು ಮಾಡಿದ್ದರು.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಒಬ್ಬ ಪ್ರತಿಭಟನಾಕಾರನು ಹತ್ತಿರ ಬಂದು ಕೆಂಪು ಪದಾರ್ಥವನ್ನು – ನಂತರ ಟೊಮೆಟೊ ಸಾಸ್ ಎಂದು ಗೊತ್ತಾಗಿದೆ. ಪಹ್ಲವಿ ಅವರ ಬ್ಲೇಜರ್ ಮತ್ತು ಕುತ್ತಿಗೆಯ ಹಿಂಭಾಗಕ್ಕೆ ಎಸೆದನು. ಆ ಕ್ಷಣ ಆಘಾತದ ಹೊರತಾಗಿಯೂ, ಪಹ್ಲವಿ ಶಾಂತಚಿತ್ತರಾಗಿದ್ದರು. ಅವರಿಗೆ ಯಾವುದೇ ಗಾಯಗಳಾಗಿಲ್ಲ, ಬೆಂಬಲಿಗರು ಹತ್ತಿರವೇ ಇದ್ದರು. ಬಳಿಕ ಅವರನ್ನು ಕಾಯುತ್ತಿದ್ದ ವಾಹನಕ್ಕೆ ಕರೆದೊಯ್ಯಲಾಯಿತು ಎಂದು ಪ್ರತ್ಯಕ್ಚದರ್ಶಿಗಳು ಹೇಳಿದ್ದಾರೆ.
ಜರ್ಮನ್ ಪೊಲೀಸರು ತ್ವರಿತವಾಗಿ ಕಾರ್ಯನಿರ್ವಹಿಸಿ, ಶಂಕಿತನನ್ನು ಸ್ಥಳದಲ್ಲೇ ಬಂಧಿಸಿದರು. ಗೌಪ್ಯತೆ ನಿಯಮಗಳನ್ನು ಉಲ್ಲೇಖಿಸಿ ಅಧಿಕಾರಿಗಳು ವ್ಯಕ್ತಿಯ ಗುರುತನ್ನು ಬಿಡುಗಡೆ ಮಾಡಿಲ್ಲ.
ದಾಳಿಯಲ್ಲ, ಪ್ರತಿಭಟನೆ
ಟೊಮೆಟೋ ಸಾಸ್ ಹಾನಿಕಾರಕವಾಗಿ ಕಾಣುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯವು ಸಾಂಕೇತಿಕವಾಗಿದೆ – ದೈಹಿಕ ಹಾನಿಯನ್ನುಂಟುಮಾಡುವ ಪ್ರಯತ್ನಕ್ಕಿಂತ ಪ್ರತಿಭಟನೆಯ ಒಂದು ರೂಪವಾಗಿದೆ ಎಂದರು.
ರೆಝಾ ಪಹಲವಿ ಮೇಲೆ ಟೊಮೊಟೊ ಸಾಸ್ ಚೆಲ್ಲಿ ಪ್ರತಿಭಟಿಸಿದ ಇರಾನ್ ಅಭಿಮಾನಿ