Sunday, September 8, 2024

Yuva Nidhi | ಕುವೆಂಪು ಅವರ ನೆಲದಲ್ಲಿ ನುಡಿದಂತೆ ನಡೆದಿದ್ದೇವೆ : ಡಿಸಿಎಂ ಡಿ.ಕೆ. ಶಿವಕುಮಾರ್

Most read

ನಾವು ಕೊಟ್ಟ ಅಷ್ಟು ಗ್ಯಾರಂಟಿ ಭರವಸೆಯನ್ನು ಇವತ್ತಿನ ಪೂರ್ವವಾಗಿ ಅನುಷ್ಠಾಬಕ್ಕೆ ತಂದಿದ್ದೇವೆ. ಕುವೆಂಪು ನಾಡಿನಲ್ಲಿ ನುಡುದಂತೆ ನಡೆದಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, 5ನೇ ಗ್ಯಾರಂಟಿ ಯುವನಿಧಿಗೆ ಚಾಲನೆ. ನನ್ನ ಬದುಕಿನಲ್ಲಿ ಇವತ್ತು ಸಂತೋಷದ ದಿನ. ನಾವು ಕೊಟ್ಟ 5 ಗ್ಯಾರಂಟಿ ಭರವಸೆ ಈಡೇರಿಸಿದ್ದೇವೆ. ಕುವೆಂಪು ಅವರ ನಾಡಿನಲ್ಲಿ ನುಡಿದಂತೆ ನಡೆದಿದ್ದೇವೆ. ಇದು ಯುವಕರಲ್ಲಿ ಆರ್ಥಿಕ ಸ್ಥೈರ್ಯ ಕೊಡುತ್ತದೆ ಎಂದು ಹೇಳಿದ್ದಾರೆ.

ನಾವು ಕೊಟ್ಟ ವಾಗ್ದಾನವನ್ನು ಈಡೇರಿಸುತ್ತಿದ್ದೇವೆ. ಕೊಟ್ಟ ಮಾತಿನಂತೆ 5 ನೇ ಗ್ಯಾರಂಟಿಯನ್ನು ಜಾರಿಗೊಳಿಸಲಿದ್ದೇವೆ. ಇದು ಎಲ್ಲರ ಬದುಕನ್ನು ಬದಲಿಸುವ ಯೋಜನೆ. ಈ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು.

ನಮ್ಮ ಸರ್ಕಾರ ಇಡೀ ದೇಶಕ್ಕೆ ಮಾದರಿಯಾಗಿದೆ. ನೀವು ಉದ್ಯೋಗ ನೀಡುವಂತಹ ಆಲೋಚನೆ ಮಾಡಿ. ನಿಮ್ಮ ಕೌಶಲ್ಯ ಹೆಚ್ಚಿಸಲು ಯುವನಿಧಿ ತಂದಿದ್ದೇವೆ. ನಾಡಿನ ಯುವ ಜನತೆಗೆ ಡಿಸಿಎಂ ಡಿಕೆಶಿ ಕಿವಿಮಾತು. ಯುವಕರು ಉದ್ಯೋಗಿಗಳಾಗುವ ಜೊತೆಗೆ ಉದ್ಯಮಿಗಳೂ ಆಗ್ಬೇಕು ಎಂದು ಹೇಳಿದ್ದಾರೆ.

ಯುವನಿಧಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ. ಶಿವಮೊಗ್ಗದ ಫ್ರೀಡಂಪಾರ್ಕ್‌ ನಲ್ಲಿ ಯುವನಿಧಿಗೆ ಸಿಎಂ ಚಾಲನೆ. ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಯುವನಿಧಿ ಯೋಜನೆ. 2022-23ನೇ ಸಾಲಿನಲ್ಲಿ ಪದವಿ ಮುಗಿಸಿದವರಿಗೆ ತಿಂಗಳಿಗೆ 3,000. ಡಿಪ್ಲೋಮಾ ಮುಗಿಸಿದವರಿಗೆ ತಿಂಗಳಿಗೆ  1500 ನೀಡುವ ಯೋಜನೆ. ಯುವನಿಧಿ ಯೋಜನೆಯಡಿ 67 ಸಾವಿರ ವಿದ್ಯಾರ್ಥಿಗಳು ನೋಂದಣಿ. ಫಲಾನುಭವಿಗಳ ಖಾತೆಗೆ ಮೊದಲ ತಿಂಗಳ ನಿರುದ್ಯೋಗ ಭತ್ಯೆ. ಯಾವುದೇ ಗೊಂದಲ ಇದ್ದರೂ ಸಹಾಯವಾಣಿ18005999918ಗೆ ಕರೆ.

More articles

Latest article