Saturday, September 14, 2024

Yuva Nidhi: 5ನೇ ಗ್ಯಾರೆಂಟಿ ಯುವನಿಧಿಗೆ ಚಾಲನೆ ಕೊಟ್ಟ ಸಿಎಂ ಸಿದ್ದರಾಮಯ್ಯ ; 60 ಸಾವಿರಕ್ಕೂ ಹೆಚ್ಚು ಫಲಾನುಭವಿಗಳಿಗೆ ಹಣ ವರ್ಗಾವಣೆ

Most read

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ 5ನೇ ಗ್ಯಾರೆಂಟಿ “ಯುವನಿಧಿ”ಗೆ ಇಂದು (ಜ.12) ಶಿವಮೊಗ್ಗದಲ್ಲಿ ಅಧುಕೃತವಾಗಿ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

 ಶಿವಮೊಗ್ಗ ನಗರದಲ್ಲಿರುವ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಫಲಾನುಭವಿಗಳ ಖಾತೆಗೆ ನಗದು ಬಿಡುಗಡೆ ಮಾಡಿದ್ದಾರೆ.

 ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ನೀಡಿದ್ದ ಎಲ್ಲಾ ಗ್ಯಾರೆಂಟಿ ಯೋಜನೆಗಳನ್ನು ಜಾರಿಗೊಳಿಸಿದಂತೆ ಆಗಿದೆ. ಯುವನಿಧಿ ಯೋಜನೆಗೆ 5.29 ಲಕ್ಷ ನೋಂದಣಿ ಗುರಿ ಇರಿಸಿಕೊಂಡಿದ್ದು, ಈಗಾಗಲೇ 61 ಸಾವಿರಕ್ಕೂ ಹೆಚ್ಚು ನೋಂದಣಿ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ನಾವು ರಾಜ್ಯದ ಜನರಿಗೆ ಗ್ಯಾರಂಟಿ  ನೀಡುತ್ತಿದ್ದೇವೆ. ಅದಕ್ಕಾಗಿ ಬಿಜೆಪಿಯವರಿಗೆ ಹೊಟ್ಟೆ ಉರಿಯಾಗ್ತಿದೆ. ರಾಜ್ಯದ ಜನರಿಗೆ ಗ್ಯಾರಂಟಿ ಕೊಡುತ್ತಿದ್ದೇವೆ ಇದು ಸುಳ್ಳಾ..? ನಾವು ಚುನಾವಣೆಗಾಗಿ ಗ್ಯಾರಂಟಿಗಳನ್ನ ಮಾಡಿದ್ದಲ್ಲ. ಸಾಮಾನ್ಯ ಜನರಿಗಾಗಿ ಗ್ಯಾರಂಟಿಗಳನ್ನ ನೀಡಿದ್ದೇವೆ. 1.51ಕೋಟಿ ಕುಟುಂಬಗಳಿಗೆ ವಿದ್ಯುತ್ ಉಚಿತ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಹೆಚ್ಚಳ. ನಿರುದ್ಯೋಗವೂ ದೇಶದಲ್ಲಿ ಹೆಚ್ಚಳವಾಗಿದೆ. ಇದನ್ನೆಲ್ಲಾ ಸರಿದೂಗಿಸಲು ಜನರಿಗೆ ಶಕ್ತಿ ಬೇಕು. ಅದಕ್ಕಾಗಿ ನಮ್ಮ ಗ್ಯಾರಂಟಿ ಯೋಜನೆಗಳು. ನಾವು ನುಡಿದಂತೆ ನಡೆಯುತ್ತಿದ್ದೇವೆ ಎಂದ ಸಿದ್ದರಾಮಯ್ಯ.

ಯುವನಿಧಿ ಯೋಜನೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ. ಶಿವಮೊಗ್ಗದ ಫ್ರೀಡಂಪಾರ್ಕ್‌ ನಲ್ಲಿ ಯುವನಿಧಿಗೆ ಸಿಎಂ ಚಾಲನೆ. ನಿರುದ್ಯೋಗಿ ಯುವಕರಿಗೆ ಭತ್ಯೆ ನೀಡುವ ಯುವನಿಧಿ ಯೋಜನೆ. 2022-23ನೇ ಸಾಲಿನಲ್ಲಿ ಪದವಿ ಮುಗಿಸಿದವರಿಗೆ ತಿಂಗಳಿಗೆ 3,000. ಡಿಪ್ಲೋಮಾ ಮುಗಿಸಿದವರಿಗೆ ತಿಂಗಳಿಗೆ  1500 ನೀಡುವ ಯೋಜನೆ. ಯುವನಿಧಿ ಯೋಜನೆಯಡಿ 67 ಸಾವಿರ ವಿದ್ಯಾರ್ಥಿಗಳು ನೋಂದಣಿ. ಫಲಾನುಭವಿಗಳ ಖಾತೆಗೆ ಮೊದಲ ತಿಂಗಳ ನಿರುದ್ಯೋಗ ಭತ್ಯೆ. ಯಾವುದೇ ಗೊಂದಲ ಇದ್ದರೂ ಸಹಾಯವಾಣಿ18005999918ಗೆ ಕರೆ.

More articles

Latest article