ಲೋಕಸಭಾ ಚುನಾವಣೆ ಮುಗಿಲಿ ಎಲ್ಲವನ್ನೂ ತೆರೆದಿಡ್ತಿನಿ : ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಿಟಿ ರವಿ

Most read

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಮಾಜಿ ಶಾಸಕ ಸಿಟಿ ರವಿ ಬೇಸರಗೊಂಡಿದ್ದಾರೆ. ಹೌದು, ಈಬಾರಿಯೂ ಶೋಭ ಕರಂದ್ಲಾಜೆಗೆ ಟಿಕೆಟ್ ನೀಡುವುದು ಪಕ್ಕ ಆಗಿದ್ದು ಸಿಟಿ ರವಿಗೆ ತೀರ್ವ ಬೇಸರ ಆಗಿರುವಂತೆ ಕಾಣುತ್ತಿದೆ. ಪಕ್ಷ-ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ ಎಂದು ಹೇಳು ಮೂಲಕ ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಟಿ ರವಿ, ಮನದಲ್ಲಿ ಬಹಳ ಭಾವನೆಗಳಿವೆ, ಹೇಳುವುದಕ್ಕೆ ಬಹಳ ಇದೆ. ಸಮಯ ಇದಲ್ಲ. ಸದ್ಯಕ್ಕೆ ರಾಷ್ಟ್ರದ ಹಿತಕ್ಕಾಗಿ ಮೋದಿ 3ನೇ ಬಾರಿ ಪ್ರಧಾನಿ ಆಗಬೇಕು ಅಷ್ಟೇ. ಪಕ್ಷ-ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ. ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ, ಸಮಯ ಬರಲಿ ಎಲ್ಲಾ ಹೇಳುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಬಿಜೆಪಿಯೊಳಗಿನ ಬೆಳವಣಿಗೆಗಳಿಂದ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡುವುದಾದರೆ ಲೋಕಸಭಾ ಚುನಾವಣೆ ನಂತರವೆ. ವಿಧಾನಸಭೆ ಚುನಾವಣೆಯಲ್ಲಿ ಯಾರ್ಯಾರು ಹೇಗೆ ನಡೆದುಕೊಂಡ್ರು ಎನ್ನುವುದನ್ನು ಲೋಕಸಭೆ ಚುಣಾವಣೆ ಬಳಿಕ ಹೇಳುತ್ತೇನೆ, ಹೇಳಲೇಬೇಕು. ಲೋಕಸಭಾ ಚುನಾವಣೆ ಬಳಿಕ ಬಹಳ ವಿಷಯ ಹೇಳಲು ಇದೆ ಅದೆಲ್ಲವನ್ನೂ ಹೇಳುತ್ತೇನೆ. ಈಗ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅದೊಂದೆ ಗುರಿ ಇರುವುದು. ರಾಜ್ಯದ 28 ಸ್ಥಾನವನ್ನೂ ಬಿಜೆಪಿ ಗೆಲ್ಲಬೇಕು, ಅದಕ್ಕೆ ಅಳಿಲು ಸೇವೆ ಮಾಡುವುದಷ್ಟೇ ನಮ್ಮ ಕೆಲಸ ಎಂದು ಮಾರ್ಮಿಕವಾಗಿ ಹೇಳಿದರು. ಈ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಸಾಬೀತಾದಂತಾಗಿದೆ.

ಸಿಟಿ ರವಿ ಅವರನ್ನು ರಾಜ್ಯ ಬಿಜೆಪಿ ಅಧ್ಯಕ್ಷರನ್ನಾಗಿ ಮಾಡಬೇಕೆಂಬ ಆಸೆ ಇತ್ತು ಆದರೆ ಅದು ಸಾಧ್ಯವಾಗಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೆಳಗಿಳಿಸಲಾಗಿತ್ತು.

ಇದೀಗ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಸಿಟಿ ರವಿ ಆಸೆ ಇಟ್ಟುಕೊಂಡಿದ್ದರು. ಆದ್ರೆ ಬಿಎಸ್ ಯಡಿಯೂರಪ್ಪ ಮತ್ತೆ ಶೋಭಾ ಕರಂದ್ಲಾಜೆ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದರಿನದಲೂ ಸಿಟಿ ರವಿಗೆ ನಿರಾಸೆಯಾಗಿದೆ.

Udupi-Chikkamagaluru,

More articles

Latest article