Saturday, December 7, 2024

ಅಯೋಧ್ಯೆಯಲ್ಲಿ ಇನ್ಮುಂದೆ ಗುಂಡಿನ ಸದ್ದು, ಕರ್ಫ್ಯೂ ಇರುವುದಿಲ್ಲ: ಯೋಗಿ ಆದಿತ್ಯನಾಥ್

Most read

ಅಯೋಧ್ಯೆಯ (Ayodhya) ಬೀದಿಗಳು ಇನ್ನು ಮುಂದೆ ಗುಂಡಿನ ಸದ್ದು ಅಥವಾ ಕರ್ಫ್ಯೂಗೆ ಸಾಕ್ಷಿಯಾಗುವುದಿಲ್ಲ ಎಂದು ಉತ್ತರ ಪ್ರದೇಶದ (Uttar Pradesh) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಅವರು ಇಂದು ಮಧ್ಯಾಹ್ನ ರಾಮಮಂದಿರ(Ram Mandir) ಉದ್ಘಾಟನಾ ಸಮಾರಂಭದಲ್ಲಿ ಹೇಳಿದ್ದಾರೆ.

ಅಯೋಧ್ಯೆಯ ಗಲ್ಲಿಗಳು ಇನ್ನು ಮುಂದೆ ಗುಂಡುಗಳ ಶಬ್ದದಿಂದ ಪ್ರತಿಧ್ವನಿಸುವುದಿಲ್ಲ. ಕರ್ಫ್ಯೂ ಇರುವುದಿಲ್ಲ. ಈಗ ದೀಪೋತ್ಸವ ಮತ್ತು ರಾಮೋತ್ಸವ ನಡೆಯಲಿದೆ. ರಾಮ ಕೀರ್ತನೆಗಳು ಗಲ್ಲಿಗಳಲ್ಲಿ ಪ್ರತಿಧ್ವನಿಸುತ್ತವೆ. ಏಕೆಂದರೆ ಇಂದು ಇಲ್ಲಿ ರಾಮ್ ಲಲ್ಲಾ ಸ್ಥಾಪನೆಯು ರಾಮರಾಜ್ಯದ ಘೋಷಣೆಯನ್ನು ಸಹ ಸೂಚಿಸುತ್ತದೆ ಎಂದು ಆದಿತ್ಯನಾಥ್ ಹೇಳಿದ್ದಾರೆ.

More articles

Latest article