ನಮ್ಮ ತೆರಿಗೆ ನಮ್ಮ ಹಕ್ಕು ಕೇಳಲು ಅವರಪ್ಪನ ಮನೆ ಆಸ್ತಿನಾ? ಎಂಬ ಅನಂತಕುಮಾರ್ ಹೆಗಡೆ ಹೇಳಿಕೆ ಯತೀಂದ್ರ ಮಾತಿನ ತಿರುಗೇಟು ನೀಡಿದರು.
ಗದಗ ನಗರದ ರಾಕೇಶ್ ಸಿದ್ದರಾಮಯ್ಯ ಟ್ರಸ್ಟ್ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅವರಪ್ಪನ ಮನೆ ಆಸ್ತಿನಾ? ಕರ್ನಾಟಕ ಜನ್ರು ಕಟ್ಟಿದ ತೆರಿಗೆ ಹಣ ಅದು ಅಂತ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಲೋಕಸಭಾ ವಿಚಾರವಾಗಿ ಮಾತನಾಡಿ, ನಾನು ಮೈಸೂರು ಕ್ಷೇತ್ರದಿಂದ ಟಿಕೆಟ್ ಕೊಡಿ ಅಂತ ಪಕ್ಷಕ್ಕೆ ಕೇಳಿಕೊಂಡಿಲ್ಲ. ಲೋಕಸಭಾ ಆಕಾಂಕ್ಷಿ ನಾನಲ್ಲ. ಮೈಸೂರಿಗೆ ಯಾರು ಸೂಕ್ತ ಅಭ್ಯರ್ಥಿ ಅಂತ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಂಡರೂ ನಾನು ಸ್ವಾಗತಿಸುತ್ತೇನೆ ಎಂದರು.
ಜನರು ಬಿಜೆಪಿ ಅವರ ರಾಜಕೀಯವನ್ನು ಬಹಳ ವರ್ಷಗಳಿಂದ ನೋಡುತ್ತಾ ಬಂದಿದ್ದಾರೆ. ಪ್ರತಿ ಬಾರಿ ಧರ್ಮದ ಹೆಸರಲ್ಲಿ ರಾಜಕೀಯ ಮಾಡುತ್ತಾರೆ. ಜನದರು ಅದಕ್ಕೆ ಒಪ್ಪುವುದಿಲ್ಲ. ಈ ಬಾರಿ ಯಾರು ಕೆಲಸ ಮಾಡಿದ್ದಾರೆ, ಅಂಥವರಿಗೆ ಮತ ಹಾಕುತ್ತಾರೆ. ಅನಂತಕುಮಾರ ಹೆಗಡೆ ಅವರಿಗೆ ಮತದಾರರು ಈ ಬಾರಿ ಬುದ್ದಿ ಕಲಿಸ್ತಾರೆ ಎಂದರು.
ಕೇಂದ್ರ ಸರ್ಕಾರ ಎಲ್ಲರಿಗೂ ನ್ಯಾಯವಾಗಿ ಹಂಚಿಕೆ ಮಾಡಿ ಎಂದು ಕೇಳುತ್ತಿದ್ದೇವೆ. ನಾವು ಕಟ್ಟಿದ ತೆರಿಗೆ ಒಟ್ಟು ನಮಗೆ ಕೊಡಿ ಅಂತ ಕೇಳುತ್ತಿಲ್ಲ. ನಾಲ್ಕು ಲಕ್ಷ ಕೋಟಿ ರೂಪಾಯಿ ತೆರಿಗೆ ಸಂಗ್ರಹಣೆ ಆಗುತ್ತಿದೆ. ನಾವು ಒಂದು ರೂಪಾಯಿ ಕೊಟ್ಟರೆ, ನಮಗೆ 12 ಅಥವಾ 13 ಪೈಸೆ ಅಷ್ಟೇ ಬರ್ತಿದೆ. ಹಿಂದುಳಿದ ರಾಜ್ಯಗಳಿಗೆ ಹೆಚ್ಚಿನ ಅನುದಾನ ಕೊಡಿ, ನಾವು ಬೇಡ ಅನ್ನೊದಿಲ್ಲ. ಆದ್ರೆ ನಮಗೆ ಅನ್ಯಾಯ ಆಗ್ತಿದೆ, ಆ ಅನ್ಯಾಯ ಸರಿಪಡಿಸಿಕೊಡಿ. ಒಂದು ರೂಪಾಯಿಗೆ 12 ಪೈಸೆ ಬದಲು, 25 ಪೈಸೆ ಕೊಡಿ ಅಂತ ಕೇಳುತ್ತಿದ್ದೇವೆ ಎಂದರು.