ಯಶ್‌ ಸಿನಿಮಾ ಮುಹೂರ್ತ: ಲೈಟ್ ಬಾಯ್ ಕೈಯಲ್ಲಿ ‘ಟಾಕ್ಸಿಕ್’ ಸಿನಿಮಾಗೆ ಕ್ಲ್ಯಾಪ್

‘ಕೆಜಿಎಫ್ 2’ ರಿಲೀಸ್ ಆಗಿ ಎರಡೂವರೆ ವರ್ಷಗಳ ಬಳಿಕ ಯಶ್  ಅವರು ಟಾಕ್ಸಿಕ್’ ಸಿನಿಮಾದ ಕೆಲಸ ಆರಂಭಿಸಿದ್ದಾರೆ. ಹೌದು, ಲೈಟ್ ಆಫೀಸರ್ ಕೈಯಲ್ಲಿ ‘ಟಾಕ್ಸಿಕ್’ ಚಿತ್ರಕ್ಕೆ ಕ್ಲ್ಯಾಪ್ ಮಾಡಿಸುವ ಮೂಲಕ ಸಿನಿಮಾ ಕೆಲಸವನ್ನು ಆರಂಭಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಮುಹೂರ್ತ ಬೆಂಗಳೂರಿನ ಹೊರವಲಯದಲ್ಲಿರುವ ಎಚ್​ಎಮ್​ಟಿ ಫ್ಯಾಕ್ಟರಿಯಲ್ಲಿ ನೆರವೇರಿದೆ. ಲೈಟ್ ಬಾಯ್ ಬಳಿ ಕ್ಲ್ಯಾಪ್ ಮಾಡಿಸಿ ತಂತ್ರಜ್ಞರು ಹಾಗೂ ಕಾರ್ಮಿಕರ ಮೇಲೆ ತಮಗಿರೋ ಗೌರವ ಮತ್ತು ಕಾಳಜಿಯನ್ನ ಯಶ್ ತೋರಿಸಿದ್ದಾರೆ.

ಟಾಕ್ಸಿಕ್ ಶುರುಮಾಡುವ ಮೊದಲು ಹಲವು ದೇವರುಗಳ ದರ್ಶನವನ್ನು ಪಡೆದು ಯಶ್ ಆಗಮಿಸಿದ್ದಾರೆ. ಗೀತು ಮೋಹಮ್ ದಾಸ್ ನಿರ್ದೇಶನದ ಈ ಚಿತ್ರಕ್ಕೆ ಕೆವಿಎನ್ ಪ್ರೊಡಕ್ಷನ್ಸ್​ನ ಕೆ. ವೆಂಕಟ್ ನಾರಾಯಣ  ಬಂಡವಾಳ ಹೂಡುತ್ತಿದ್ದಾರೆ. ಈ ಚಿತ್ರದಲ್ಲಿ ನಯನತಾರಾ ಹಾಗೂ ಕಿಯಾರಾ ಅಡ್ವಾಣಿ ನಟಿಸಲಿದ್ದಾರೆ ಎನ್ನಲಾಗಿದೆ. ಅವರು ಶೀಘ್ರವೇ ಶೂಟಿಂಗ್ ಸೇರಿಕೊಳ್ಳಲಿದ್ದಾರೆ.

More articles

Latest article

Most read