ಪ್ಯಾರಿಸ್ ಒಲಿಂಪಿಕ್ಸ್‌: ಕುಸ್ತಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದ ಅಮನ್ ಸೆಹ್ರಾವತ್

Most read

ವಿನೇಶ್ ಫೋಗಟ್​ ಅವರು ಅನರ್ಹಗೊಂಡು ಪದಕವೊಂದನ್ನು ಕಳೆದುಕೊಂಡ ಆಘಾತದಲ್ಲಿರುವಾಗಲೇ ಭಾರತಕ್ಕೆ ಪ್ಯಾರಿಸ್​ ಪಲಿಂಪಿಕ್ಸ್​ ಕುಸ್ತಿಯಲ್ಲಿ ಪದಕವೊಂದು ದೊರೆಯುವ ಆಸೆ ಚಿಗುರೊಡೆದಿದೆ.

ಪುರುಷರ ಕುಸ್ತಿ ಸ್ಪರ್ಧೆಯ 57 ಕೆ.ಜಿ ಫ್ರೀಸ್ಟೈಲ್ ವಿಭಾಗದಲ್ಲಿ 21 ವರ್ಷದ ಭಾರತದ ಅಮನ್ ಸೆಹ್ರಾವತ್ ಸೆಮಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಇಂದು ರಾತ್ರಿ 9.45ಕ್ಕೆ ನಡೆಯುವ ಸೆಮಿಫೈನಲ್​ ಪಂದ್ಯದಲ್ಲಿ ಅಮನ್​ ಜಪಾನ್​ ರೇ ಹಿಗುಚಿ ಸವಾಲು ಎದುರಿಸಲಿದ್ದಾರೆ.

ಗುರುವಾರ ನಡೆದ ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಮನ್​ ಅಲ್ಬೆನಿಯಾದ ಝೆಲಿಮ್ಖಾನ್ ಅಬಕರೋವ್ ವಿರುದ್ಧ 12-0 ಅಂತರದ ಭರ್ಜರಿ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದರು.

More articles

Latest article