2024 ರ ಚುನಾವಣೆಯಲ್ಲಿ ಬಿಜೆಪಿ ಯಾಕೆ ಸೋಲಬೇಕು ಎಂದರೆ..

Most read

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಭಾರತದ ಸಂವಿಧಾನ ನಿರ್ನಾಮವಾಗುತ್ತದೆ. ಮೀಸಲಾತಿಯನ್ನು ತೆಗೆದು ಹಾಕಲಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗೆ ಅಗತ್ಯವಾಗಿರುವ ವಿರೋಧ ಪಕ್ಷಗಳು ಅಸ್ತಿತ್ವದಲ್ಲಿಯೇ ಇರುವುದಿಲ್ಲ. ಡಿ ಲಿಮಿಟೇಶನ್‌ ಆದ ಆನಂತರ ದಕ್ಷಿಣ ಭಾರತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಹೋಗುತ್ತದೆ. ಭ್ರಷ್ಟಾಚಾರ ಆಳುವವರ ಹಕ್ಕು ಎಂದು ಪರಿಗಣಿತವಾಗುತ್ತದೆ. ಆಕ್ರಮ ವ್ಯವಹಾರಗಳಿಂದ ಜನರು ಬ್ಯಾಂಕುಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ.  ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗುತ್ತಾರೆ. ಇಂಥ ಹಲವು ಭೀಕರ ಕಾರಣಗಳಿಂದ ಬಿಜೆಪಿ ಸೋಲುವುದು ದೇಶದ ಉಳಿವಿಗೆ ಅನಿವಾರ್ಯ ಮತ್ತು ಅಗತ್ಯ -ಪರಮೇಶ್ವರ ಭಟ್, ಬೆಂಗಳೂರು

ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಭಾರತದ ಸಂವಿಧಾನ ನಿರ್ನಾಮವಾಗುತ್ತದೆ. ಮೀಸಲಾತಿಯನ್ನು ತೆಗೆದು ಹಾಕಲಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗೆ ಅಗತ್ಯವಾಗಿರುವ ವಿರೋಧ ಪಕ್ಷಗಳು ಅಸ್ತಿತ್ವದಲ್ಲಿಯೇ ಇರುವುದಿಲ್ಲ. ಸರಕಾರೀ ಸಂಸ್ಥೆಗಳು ತಮ್ಮ ಸ್ವಾಯತ್ತೆಯನ್ನು ಪೂರ್ಣ ಕಳೆದುಕೊಂಡು ಪ್ರಭುತ್ವದ ಅಡಿಯಾಳುಗಳಾಗಿ ಕಾರ್ಯನಿರ್ವಹಿಸುತ್ತವೆ.  ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯ ಮತ್ತೆ ಅಧಿಕಾರ ಸ್ಥಾಪಿಸಿ, ಸಮಾಜ ಸಾವಿರ ವರ್ಷಗಳಷ್ಟು ಹಿಂದೆ ಸರಿಯುತ್ತದೆ.

ಈ ಪ್ರಶ್ನೆಗೆ ಸರಳವಾದ ಉತ್ತರವೆಂದರೆ ʼ ಭಾರತ ದೇಶ ಉಳಿಯಬೇಕಾದರೆ, ಬಿಜೆಪಿ ಸೋಲಬೇಕುʼ. ಕಳೆದ 10 ವರ್ಷಗಳಿಂದ ಈ ದೇಶವನ್ನು ಬಗೆ ಬಗೆಯ ಸಂಕಷ್ಟಗಳಿಗೆ ನೂಕಿದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಭಾರತದ ಸಂವಿಧಾನ ನಿರ್ನಾಮವಾಗುತ್ತದೆ. ಮೀಸಲಾತಿಯನ್ನು ತೆಗೆದು ಹಾಕಲಾಗುತ್ತದೆ. ಪ್ರಜಾಪ್ರಭುತ್ವದ ಉಳಿವಿಗೆ ಅಗತ್ಯವಾಗಿರುವ ವಿರೋಧ ಪಕ್ಷಗಳು ಅಸ್ತಿತ್ವದಲ್ಲಿಯೇ ಇರುವುದಿಲ್ಲ. ಸರಕಾರೀ ಸಂಸ್ಥೆಗಳು ತಮ್ಮ ಸ್ವಾಯತ್ತೆಯನ್ನು ಪೂರ್ಣ ಕಳೆದುಕೊಂಡು ಪ್ರಭುತ್ವದ ಅಡಿಯಾಳುಗಳಾಗಿ ಕಾರ್ಯನಿರ್ವಹಿಸುತ್ತವೆ.  ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯ ಮತ್ತೆ ಅಧಿಕಾರ ಸ್ಥಾಪಿಸಿ, ಸಮಾಜ ಸಾವಿರ ವರ್ಷಗಳಷ್ಟು ಹಿಂದೆ ಸರಿಯುತ್ತದೆ. ಬಿಜೆಪಿ ಸೇರಿದವರು ಮಾತ್ರ ಹಿಂದೂಗಳು, ಉಳಿದವರು ಹಿಂದುಗಳಲ್ಲ ಎಂದು ಹೇಳುವುದರ ಮೂಲಕ ಬಿಜೆಪಿಯು ಹಿಂದೂಗಳನ್ನೇ ಒಡೆಯುತ್ತದೆ. ಮಹಿಳೆಯರ ಸ್ವಾತಂತ್ರ್ಯವನ್ನು ಅಪಹರಿಸಲಾಗುತ್ತದೆ. ಕಾರ್ಪೊರೇಟ್‌ ಜಗತ್ತು ಬಡವರನ್ನು ನಿರಂತರವಾಗಿ ಸುಲಿಗೆ ಮಾಡುತ್ತದೆ. ಬುಡಕಟ್ಟು ಜನರ ಜಲ, ನೆಲ ಮತ್ತು  ಕಾಡುಗಳು ಬಂಡವಾಳಶಾಹಿಗಳ ಪಾಲಾಗುತ್ತದೆ.  ಎಲ್ಲ ರಾಜ್ಯಗಳನ್ನು ಸಮಾನವಾಗಿ ಕಾಣಬೇಕಾದ ಕೇಂದ್ರ ಸರಕಾರವು ರಾಜ್ಯಗಳನ್ನು ದುರ್ಬಲಗೊಳಿಸುತ್ತಾ, ಒಕ್ಕೂಟ ವ್ಯವಸ್ಥೆಯನ್ನೇ ಹಾಸ್ಯಾಸ್ಪದಗೊಳಿಸಿ, ರಾಜಧಾನಿ ದೆಹಲಿಯನ್ನು ನಾಗಪುರಕ್ಕೆ ವರ್ಗಾಯಿಸುತ್ತದೆ.  ಹಿಂದಿಯೇತರ  ರಾಜ್ಯಗಳ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಹಿಂದಿಯ ಅಡಿಯಾಳಾಗಿಸಲಾಗುತ್ತದೆ. ಕವಿಗಳು, ಲೇಖಕರು, ಸಂಶೋಧಕರು, ಹೋರಾಟಗಾರರು, ಚಿಂತಕರು ಸೆರೆಮನೆ ಸೇರುತ್ತಾರೆ. ಮಾಧ್ಯಮಗಳು ಸರಕಾರದ ಪ್ರಚಾರ ಕೇಂದ್ರಗಳಾಗುತ್ತವೆ. ವಿಶ್ವವಿದ್ಯಾಲಯಗಳೂ ಸೇರಿದಂತೆ ಉನ್ನತ ಶಿಕ್ಷಣ ಕೇಂದ್ರಗಳು ಹಳೆಯ ಅಗ್ರಹಾರಗಳಾಗಿ ಮಾರ್ಪಡುತ್ತವೆ.  ಹಿಂದಿನ ರಾಜ ಮಹಾರಾಜರುಗಳು ಮಾಡಿದ ಹಾಗೆ ಕೇಂದ್ರೀಕೃತ ಆರ್ಥಿಕ ಮತ್ತು ಅಧಿಕಾರ ವ್ಯವಸ್ಥೆಯೊಂದು ಜ್ಯಾರಿಗೆ ಬರುತ್ತದೆ. ಡಿ ಲಿಮಿಟೇಶನ್‌ ಆದ ಆನಂತರ ದಕ್ಷಿಣ ಭಾರತ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಾ ಹೋಗುತ್ತದೆ. ಭ್ರಷ್ಟಾಚಾರ ಆಳುವವರ ಹಕ್ಕು ಎಂದು ಪರಿಗಣಿತವಾಗುತ್ತದೆ. ಆಕ್ರಮ ವ್ಯವಹಾರಗಳಿಂದ ಜನರು ಬ್ಯಾಂಕುಗಳ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ.  ಸರಕಾರದ ದುಂದು ವೆಚ್ಚಗಳಿಂದಾಗಿ ದೇಶ ಸಾಲದ ಶೂಲಕ್ಕೆ ಸಿಕ್ಕಿ , ಬೆಲೆ ಏರಿಕೆಯಿಂದಾಗಿ ಜನರು ಕಂಗಾಲಾಗುತ್ತಾರೆ. ಇಂಥ ಹಲವು ಭೀಕರ ಕಾರಣಗಳಿಂದ ಬಿಜೆಪಿ ಸೋಲುವುದು ದೇಶದ ಉಳಿವಿಗೆ ಅನಿವಾರ್ಯ ಮತ್ತು ಅಗತ್ಯ.

ಮಾಧ್ಯಮ
ಹೋರಾಟ ನಿರತ ರೈತರ ಮೇಲೆ ಜಲಫಿರಂಗಿ ಬಳಕೆ

ಈ ನಡುವೆ ಸದ್ಯದ ಪರಿಸ್ಥಿತಿಯು ಬಿಜೆಪಿಗೆ ಅನುಕೂಲಕರವಾಗಿಲ್ಲ.ಅದರ ಪ್ರಬಲ ಅಸ್ತ್ರವಾಗಿದ್ದ ರಾಮಮಂದಿರ ತನ್ನ ತೀವ್ರತೆಯನ್ನು ಕಳೆದುಕೊಂಡಿದೆ. ಹಿಂದುತ್ವದ ಭರಾಟೆಯಿಂದ ಸಾಮಾನ್ಯ ಜನರು ರೋಸಿ ಹೋಗಿದ್ದಾರೆ. ವಿಶ್ವದ ಅತಿ ದೊಡ್ಡ ಹಗರಣವೆಂದು ಹೇಳಲಾದ ಚುನಾವಣಾ ಬಾಂಡ್‌ ನ ಅಕ್ರಮಗಳು ಜನರಿಗೆ ಗೊತ್ತಾಗಿದೆ. ಇದರಿಂದ ಬೆದರಿರುವ ಬಿಜೆಪಿಯು ಎಲ್ಲ ರಾಜ್ಯಗಳಲ್ಲಿಯೂ ತನ್ನ ಜೊತೆಗಾರರಿಗಾಗಿ ಹುಡುಕಾಟ ನಡೆಸುತ್ತಿದೆ. ಆದರೆ ಜೊತೆ ಸೇರಿದವರನ್ನು ನುಂಗಿ ಹಾಕುವ ಕಲೆಯನ್ನು ಬೆಳೆಸಿಕೊಂಡ ಬಿಜೆಪಿಯನ್ನು ಪ್ರಾದೇಶಿಕ ಪಕ್ಷಗಳು ಈಗ ನಂಬುತ್ತಿಲ್ಲ. ಪಂಜಾಬ್‌ ನಲ್ಲಿ ಅಕಾಲಿ ದಳ ಬಿಜೆಪಿಯಿಂದ ದೂರ ಸರಿದಿದೆ.  ಬಿಜೆಪಿ ಜೊತೆ ಸೇರಿಕೊಂಡ ಜೆ ಡಿಎಸ್‌ ಈ ಚುನಾವಣೆಯ ಆನಂತರ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಲಿದೆ.

ಉತ್ತರ ಪ್ರದೇಶ ಹೊರತುಪಡಿಸಿದರೆ ದೇಶದ ಎಲ್ಲಿಯೂ ಇವತ್ತು ಬಿಜೆಪಿಯ ಅಲೆ ಕಾಣುತ್ತಿಲ್ಲ. ಬೆಂಬಲ ಬೆಲೆ ನೀಡದ ಸರಕಾರದ ಬಗ್ಗೆ ರೈತ ಸಮೂಹ ಆಕ್ರೋಶಿತವಾಗಿದೆ.  ವಿದ್ಯಾರ್ಥಿಗಳು ಹಾಗೂ ಯುವಜನರು ಭ್ರಮನಿರಸನಗೊಂಡಿದ್ದಾರೆ. ಪಂಜಾಬ್‌ ನಲ್ಲಿ ಆಪ್, ಬಿಹಾರದಲ್ಲಿ ಆರ್‌ ಜೆ ಡಿ, ಪಶ್ಚಿಮ ಬಂಗಾಳದಲ್ಲಿ ಟಿ ಎಂ ಸಿ, ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರದಲ್ಲಿ ಅನ್ಯಾಯವಾಗಿ ಉದ್ದವ್‌ ಠಾಕ್ರೆ ಸರಕಾರವನ್ನು ಉರುಳಿಸಿದ್ದರ ಬಗ್ಗೆ ಅಲ್ಲಿನ ಮತದಾರರು  ಆಕ್ರೋಶಿತರಾಗಿದ್ದಾರೆ. ಕೇಜ್ರಿವಾಲ್‌ ಪ್ರಕರಣದ ಆನಂತರ ವಿರೋಧ ಪಕ್ಷಗಳು ಇನ್ನಷ್ಟು ಹತ್ತಿರ ಬಂದಿವೆ. ಹೀಗೆಲ್ಲ ಇರುವಾಗಲೂ ಮುಖ್ಯ ವಾಹಿನಿಯ ಮಾಧ್ಯಮಗಳು ಮಾತ್ರ ʼಮೂರನೇ ಬಾರಿಗೆ ಮೋದಿʼ ಎಂದು ಹೇಳುತ್ತಲೇ ಇರುವುದು ಅವರ ದೈನ್ಯತೆಯನ್ನಷ್ಟೇ ಹೇಳುತ್ತದೆ.

2024ರ ಲೋಕಸಭೆ ಚುನಾವಣೆ ಬಿಜೆಪಿ ಮತ್ತು ಪ್ರತಿಪಕ್ಷಗಳ ನಡುವೆ ನಡೆಯುತ್ತಿದೆಯೆಂದು ನಾವು ಭಾವಿಸಬಾರದು. ಅದು ಭಾರತದ ದೇಶದ ಅಳಿವು ಉಳಿವಿನ ಪ್ರಶ್ನೆಯೆಂಬುದನ್ನು ಮತದಾರರು ಅರ್ಥಮಾಡಿಕೊಳ್ಳಬೇಕು. ಇದನ್ನು ಜಮ್ಮು- ಕಾಶ್ಮೀರದ ಮಾಜಿ ರಾಜ್ಯಪಾಲರಾದ ಶ್ರೀ ಸತ್ಯಪಾಲ್ ಮಾಲಿಕ್ ಅವರು ಹೀಗೆ ಹೇಳಿದ್ದಾರೆ-ʼ “ನಾನು ಭಾರತದ ಜನರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ನಿಮ್ಮ ಜಾತಿ, ನಂಬಿಕೆ, ಧರ್ಮ ಎಲ್ಲವನ್ನೂ ಮರೆತು, 2024 ರಲ್ಲಿ ಮೋದಿ ವಿರುದ್ಧ ಮತ ನೀಡಿ. ಅವರನ್ನು ಕಿತ್ತು ಹಾಕದಿದ್ದರೆ, ಪ್ರಜಾಪ್ರಭುತ್ವ ಕೊನೆಯಾಗುತ್ತದೆ, ಮತ್ತೆ ಮುಂದೆಂದೂ ಚುನಾವಣೆಗಳೇ ಇರುವುದಿಲ್ಲ. ಆದ್ದರಿಂದ ಇದು ನಿಮ್ಮ ಕೊನೆಯ ಅವಕಾಶʼ.

ವಿರೋಧ ಪಕ್ಷಗಳು ಹೇಗೆಯೇ ಇರಲಿ, ಅವನ್ನು ಬೆಂಬಲಿಸಿ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸದೇ ಇದ್ದರೆ ಭಾರತ ಎಂಬ ದೇಶವೇ ಇರುವುದಿಲ್ಲ.

ಪರಮೇಶ್ವರ ಭಟ್‌, ಬೆಂಗಳೂರು

ಪ್ರಜ್ಞಾವಂತ ಮತದಾರ

More articles

Latest article