ಬಿಜೆಪಿ ಮುಖಂಡರ ನೋಟ್ ಮೆಷಿನ್ ಮಾಲೀಕರು ಜಗನ್ನಾಥ ಭವನವಾ? ಕೇಶವ ಕೃಪನಾ?: ಪ್ರಿಯಾಂಕ್‌ ಖರ್ಗೆ ಪ್ರಶ್ನೆ

Most read

ಬೆಂಗಳೂರು: ಮೂರು ಹಗಲು ಮೂರು ರಾತ್ರಿಯಲ್ಲಿ ಮಹಾಭಾರತದ ಕತೆಯನ್ನಾದರೂ ಹೇಳಿ ಮುಗಿಸಬಹುದು, ಆದರೆ ಬಿಜೆಪಿಯ ಭ್ರಷ್ಟಾಚಾರದ ಕತೆಗಳನ್ನು ಹೇಳಿ ಮುಗಿಸಲಾಗದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಬಿಜೆಪಿ ಮುಖಂಡ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.‌ ಅಶೋಕ್‌ ಅವರನ್ನು ಟೀಕಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಅವರು ಬಿಜೆಪಿ ಮುಖಂಡರ ಭ್ರಷ್ಟಾಚಾರದ ತುಣುಕುಗಳನ್ನು ಮೆಲುಕು ಹಾಕಿದ್ದಾರೆ.

ಮಾನ್ಯ @RAshokaBJP ಅವರೇ,

ಮೂರು ಹಗಲು ಮೂರು ರಾತ್ರಿಯಲ್ಲಿ ಮಹಾಭಾರತದ ಕತೆಯನ್ನಾದರೂ ಹೇಳಿ ಮುಗಿಸಬಹುದು, ಆದರೆ ಬಿಜೆಪಿಯ ಭ್ರಷ್ಟಾಚಾರದ ಕತೆಗಳನ್ನು ಹೇಳಿ ಮುಗಿಸಲಾಗದು.

ಮಾನ್ಯ ಅಶೋಕ್ ಅವರು ತಮ್ಮ ಪಕ್ಷದ ಇತರ ನಾಯಕರ ಮೇಲಿರುವ ಕೋಪವನ್ನು ತೀರಿಸಿಕೊಳ್ಳಲೆಂದೇ ನಮ್ಮನ್ನು ಕೆಣಕುತ್ತಿದ್ದಾರೆ ಎನಿಸುತ್ತದೆ!

ನಿಮ್ಮದೇ ಪಕ್ಷದವರಾಗಿದ್ದ “ಬಿಜೆಪಿಯ ವಿಷಲ್ ಬ್ಲೋವರ್” ಖ್ಯಾತಿಯ ಯತ್ನಾಳ್ ಅವರು ಹೇಳಿರುವ ಸಂಗತಿಗಳಿಗೆ ಉತ್ತರವಿದೆಯೇ?

ಈಶ್ವರಪ್ಪನವರ ನಂತರ ನೋಟ್ ಕೌಂಟಿಂಗ್ ಮೆಷಿನ್ ಇಟ್ಟಿದ್ದ ಖ್ಯಾತಿಗೆ ಯಡಿಯೂರಪ್ಪನವರ ಆಪ್ತ ಪಾತ್ರರಾಗಿದ್ದಾರೆ, ಈ ನೋಟ್ ಕೌಂಟಿಂಗ್ ಮೆಷಿನ್ ನ ಮಾಲೀಕರು ಯಾರು?

ಜಗನ್ನಾಥ ಭವನವಾ? ಅಥವಾ ಕೇಶವ ಕೃಪನಾ?

ನಿಮ್ಮ ಪಕ್ಷದ ಅಧ್ಯಕ್ಷರು ಮೇಲಿಂದ ಮೇಲೆ ಮಾರಿಷಸ್, ದುಬೈ ದೇಶಗಳಿಗೆ ಹೋಗುವುದೇಕೆ, ಅಲ್ಲಿ ಎಷ್ಟು ಆಸ್ತಿಗಳನ್ನು ಮಾಡಿದ್ದಾರೆ ? ಈ ಪ್ರಶ್ನೆಗಳನ್ನು ನಿಮ್ಮವರೆ ಕೇಳಿದ್ದಾರೆ, ಇದಕ್ಕೆ ಉತ್ತರ ಹೇಳಿ.

ಒಬ್ಬ ಬಸ್ ಕಂಡಕ್ಟರ್ ಮನೆಯಲ್ಲಿ ಸಾವಿರಾರು ಕೋಟಿ ಹಣ ಸಿಗುವಂತಹ ಪವಾಡ ನಡೆಯಲು ಕಾರಣವಾಗಿದ್ದು ಯಾರು, ಇದು ಹೇಗೆ ಸಾಧ್ಯವಾಯ್ತು? ದಯವಿಟ್ಟು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಶಿವಮೊಗ್ಗ ಸಂಸದರಿಂದ ಉತ್ತರವನ್ನು ಪಡೆದು ಜನರಿಗೆ ತಿಳಿಸಿ ಎಂದು ವ್ಯಂಗ್ಯವಾಡಿದ್ದಾರೆ.

More articles

Latest article